ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು, ಓರ್ವ ಡಿಬಾರ್
ಬೆಂಗಳೂರು, ಎ.10: ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯು ನಡೆಯುತ್ತಿದ್ದು, ಸೋಮವಾರದಂದು ನಡೆದ ವಿಜ್ಞಾನ ಪರೀಕ್ಷೆಯಲ್ಲಿ 15,213 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಬ್ಬರು ಪರೀಕ್ಷೆಯಿಂದ ಡಿಬಾರ್ ಅಗಿದ್ದಾರೆ.
ಪರೀಕ್ಷೆಗೆ 8,27,943 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 8,12,730 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬೆಂಗಳೂರಿನಲ್ಲಿ 1900ಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಕಲಬುರಗಿಯಲ್ಲಿ 2,239 ವಿದ್ಯಾರ್ಥಿಗಳು, ರಾಯಚೂರಿನಲ್ಲಿ 1,038 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಒಬ್ಬರು ಪರೀಕ್ಷೆಯಲ್ಲಿ ಅನುಚಿತವಾಗಿ ವರ್ತಿಸಿ ಡಿಬಾರ್ ಆಗಿದ್ದಾರೆ.
Next Story