ನಂದಿನಿ ಹಾಲಿಗೆ ಹುಳಿ ಹಿಂಡುತ್ತಿರುವ ಜೆಡಿಎಸ್: ಬಿಜೆಪಿ ಟೀಕೆ

ಬೆಂಗಳೂರು, ಎ.10: ‘ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ? 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಯಡಿಯೂರಪ್ಪ ಅವರು. ಕಾಂಗ್ರೆಸ್ ಪರಂಪರೆಯ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ ಮತ್ತೆ ಕಾಯ್ದೆ ಜಾರಿಗೆ ತಂದದ್ದೂ ನಾವೇ’ ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಬಿಜೆಪಿ, ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ ಜೆಡಿಎಸ್ ರಾಜಕೀಯಕ್ಕಾಗಿ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ ಕಾರಣ. ಕೆಎಂಎಫ್‍ನ ಶೇ.15 ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ ಎಂದು ತಿಳಿಸಿದೆ.
ಹೈನುಗಾರಿಕೆಗೆ ಬಿಜೆಪಿ ನೀಡಿದಷ್ಟು ಪ್ರೋತ್ಸಾಹ ಹಿಂದಿನ ಯಾವ ಆಡಳಿತವೂ ನೀಡಿಲ್ಲ. 25 ಲಕ್ಷ ಹೈನುಗಾರರಿಗೆ ಸಾಲ ಸೌಲಭ್ಯಕ್ಕಾಗಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪನೆ. ಪ್ರತಿ ಲೀಟರ್ ಹಾಲಿಗೆ 5 ರೂ.ಪ್ರೋತ್ಸಾಹಧನ. ಗೋಹತ್ಯೆ ನಿಷೇಧ ಕಾಯ್ದೆ. ಮೆಗಾ ಡೈರಿಗಳ ಸ್ಥಾಪನೆ ಮಾಡಿದ್ದೇವೆ ಎಂದು ಬಿಜೆಪಿ ಹೇಳಿದೆ.
ದೊಡ್ಲ (ತೆಲಂಗಾಣ), ಹೆರಿಟೇಜ್ (ಆಂಧ್ರ), ಆರೋಕ್ಯ (ತಮಿಳುನಾಡು), ಮಿಲ್ಕಿ ಮಿಸ್ಟ್(ತಮಿಳುನಾಡು), ತಿರುಮಲ(ತಮಿಳುನಾಡು), ಹಟ್ಸನ್(ತಮಿಳುನಾಡು). ಎಲ್ಲವೂ ನಂದಿನಿ ಎದುರಿಸಿದ ಬ್ರ್ಯಾಂಡ್‍ಗಳೆ. ಹಾಲಿನ ಹುಡಿ ಉತ್ಪಾದನೆ ಸಾಮಥ್ರ್ಯವನ್ನು ದಿನಕ್ಕೆ 320 ಟನ್‍ಗೆ ಹೆಚ್ಚಿಸಿದ್ದು ನಾವು ಎಂದು ಬಿಜೆಪಿ ತಿಳಿಸಿದೆ.
ನಂದಿನಿ ಮೂಲಕ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹೈನುಗಾರರ ದಿಕ್ಕು ತಪ್ಪಿಸಬಹುದು ಎಂಬುದು ಜೆಡಿಎಸ್ ಮತ್ತು ಕಾಂಗ್ರೆಸ್ ಹುನ್ನಾರ. ಆದರೆ, ಎಲ್ಲ ರೀತಿಯಿಂದಲೂ ಪ್ರಪಂಚಕ್ಕೆ ತೆರೆದುಕೊಂಡಿರುವ ಕರ್ನಾಟಕದ ಹೈನುಗಾರರು ನಿಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಮಾರುಹೋಗುವುದಿಲ್ಲ ಎಂದು ಬಿಜೆಪಿ ಹೇಳಿದೆ.
ನಂದಿನಿ ಮೂಲಕ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹೈನುಗಾರರ ದಿಕ್ಕು ತಪ್ಪಿಸಬಹುದು ಎಂಬುದು @JanataDal_S ಮತ್ತು @INCKarnataka ಹುನ್ನಾರ. ಆದರೆ, ಎಲ್ಲಾ ರೀತಿಯಿಂದಲೂ ಪ್ರಪಂಚಕ್ಕೆ ತೆರೆದುಕೊಂಡಿರುವ ಕರ್ನಾಟಕದ ಹೈನುಗಾರರು ನಿಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಮಾರುಹೋಗುವುದಿಲ್ಲ.#BJPYeBharavase
— BJP Karnataka (@BJP4Karnataka) April 10, 2023
5/5