ಕೆನಡಾ: ಮಸೀದಿಯಲ್ಲಿ ಆರಾಧಕರನ್ನು ನಿಂದಿಸಿದ ಭಾರತೀಯ ವ್ಯಕ್ತಿಯ ಬಂಧನ

ಟೊರಂಟೊ, ಎ.10: ಕೆನಡಾದ ಒರಾಂಟೊದಲ್ಲಿನ ಮಸೀದಿಯತ್ತ ಅಪಾಯಕಾರಿ ರೀತಿಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಮಸೀದಿಯಲ್ಲಿ ಆರಾಧಕರನ್ನು ಬೆದರಿಸಿದ ಮತ್ತು ಧಾರ್ಮಿಕ ನಿಂದನೆಗಳ ಆರೋಪದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಕೆನಡಾ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ದ್ವೇಷಾಪರಾಧದ ಆರೋಪದಡಿ ಶರಣ್ ಕರುಣಾಕರನ್ ಎಂಬಾತನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಒಂಟಾರಿಯೊದ ಮರ್ಖಾಮ್ನ ಡೆನ್ಷನ್ ಸ್ಟ್ರೀಟ್ನಲ್ಲಿರುವ ಮಸೀದಿಯಲ್ಲಿ ಶಾಂತಿಭಂಗ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ತನ್ನ ಕಾರನ್ನು ಮಸೀದಿಯ ಆವರಣದಲ್ಲಿ ನಿಂತಿದ್ದವರತ್ತ ಅಪಾಯಕಾರಿಯಾಗಿ ಮುನ್ನುಗ್ಗಿಸಿ ಬೆದರಿಕೆ ಒಡ್ಡಿದ್ದಾನೆ. ಈತನ ವಿರುದ್ಧ ಹಲವು ಕ್ರಿಮಿನಲ್ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಪ್ರಾದೇಶಿಕ ಪೊಲೀಸರು ಹೇಳಿದ್ದಾರೆ.
Next Story