ಉಭಯ ಕೊರಿಯಾಗಳ ನಡುವಿನ ಸಂವಹನ ಸಂಪರ್ಕ ಕಡಿತ: ವರದಿ
ಪ್ಯೋಂಗ್ಯಾಂಗ್, ಎ.10: ಉತ್ತರ ಕೊರಿಯಾವು ಉದ್ದೇಶಪೂರ್ವಕವಾಗಿ ತನ್ನೊಂದಿಗಿನ ಸಂವಹನ ಸಂಪರ್ಕವನ್ನು ಕಡಿತಗೊಳಿಸುತ್ತಿದೆ ಎಂದು ದಕ್ಷಿಣ ಕೊರಿಯಾ ಸೋಮವಾರ ಹೇಳಿದೆ.
ಉಭಯ ದೇಶಗಳ ನಡುವಿನ ಅಂತರ್-ಕೊರಿಯಾದ ಸಂಪರ್ಕ ಸಂವಹನ ವಾಹಿನಿಯಲ್ಲಿ ಸತತ 4ನೇ ದಿನ ಫೋನ್ ಕರೆಗೆ ಉತ್ತರ ಕೊರಿಯಾ ಪ್ರತಿಕ್ರಿಯಿಸಿಲ್ಲ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಸೋಮವಾರ ಹೇಳಿದೆ. ಉಭಯ ದೇಶಗಳ ನಡುವಿನ ದೈನಂದಿನ ಸಂವಹನ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ವಾರದ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ನಡುವೆ ನಡೆಸಲಾಗುತ್ತದೆ.
`ಕೈಗೊಂಬೆ ವಿಶ್ವಾಸಘಾತಕನ ಜತೆ ಸಂವಹನ ನಡೆಸಲು ತನಗೆ ಇಷ್ಟವಿಲ್ಲ ಎಂದು ಉತ್ತರ ಕೊರಿಯಾ ಪ್ರತಿಕ್ರಿಯಿಸಿದೆ. ಅಮೆರಿಕದೊಂದಿಗೆ ಸಮರಾಭ್ಯಾಸ ನಡೆಸುತ್ತಿರುವ ನೆರೆದೇಶದ ಜತೆಗಿನ ಸಂವಹನ ಪ್ರಕ್ರಿಯೆಯನ್ನು ಏಕಪಕ್ಷೀಯವಾಗಿ ಕಡಿತಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. 2021ರ ಅಕ್ಟೋಬರ್ ಬಳಿಕ ಇದೇ ಪ್ರಥಮ ಬಾರಿಗೆ ಎಲ್ಲಾ ಅಂತರ್ಕೊರಿಯನ್ ಮಿಲಿಟರಿ ಲೈನ್ಗಳು ಅಥವಾ ಸಂಪರ್ಕ ಕರೆಗಳನ್ನು ಕಡಿತಗೊಳಿಸಲಾಗಿದೆ ಎಂದು ಉತ್ತರಕೊರಿಯಾದ ವಕ್ತಾರ ಕೂ ಬ್ಯೋಂಗ್-ಸ್ಯಾಮ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.