Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮತ್ತು...

ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮತ್ತು ಅಲ್ಲಿಂದಾಚೆ

ಟೋಲ್ಗತೆ ನೀಳ್ಗತೆ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು11 April 2023 10:27 AM IST
share
ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮತ್ತು ಅಲ್ಲಿಂದಾಚೆ
ಟೋಲ್ಗತೆ ನೀಳ್ಗತೆ

►► ಸರಣಿ - 4   

ಭಾರತದಾದ್ಯಂತ ಟೋಲ್ ಗೇಟ್‌ಗಳು ಮತ್ತು ಅಲ್ಲಿನ ಲೂಟಿಗಳು ಸದ್ದು ಮಾಡುತ್ತಿವೆ. ಮಂಗಳೂರಿನಲ್ಲಿ ತಿಂಗಳುಗಳ ತನಕ ನಡೆದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಹೋರಾಟ, ಮೈಸೂರಿನಲ್ಲಿ ಮನಸೋಇಚ್ಛೆ ಟೋಲ್ ದರದ ವಿರುದ್ಧ ಹೋರಾಟ ಹೀಗೆ ಜನಸಾಮಾನ್ಯರು ನಿಧಾನವಾಗಿ ಟೋಲ್ ಲೂಟಿಯ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಆದರೆ ಹೆಚ್ಚಿನವರಿಗೆ ಯಾಕೆ ಹೀಗೆ ರಸ್ತೆ ಸುಂಕ ಹಠಾತ್ತಾಗಿ ಮೈಮೇಲೆ ಬಂದು ಎರಗಿದೆ ಎಂಬುದು ಅರ್ಥವಾಗಿಲ್ಲ. ಈ ಮಹಾಖಾಸಗೀಕರಣ ಹಲವು ಚುಕ್ಕಿಗಳ ಚಿತ್ರ. ಪ್ರಭುತ್ವ ಅಲ್ಲಲ್ಲಿ ಹಾಕುತ್ತಾ ಬಂದಿರುವ ಹಲವು ಚುಕ್ಕಿಗಳನ್ನು ಜೋಡಿಸಿದಾಗ ಪೂರ್ಣ ಚಿತ್ರ ಅರ್ಥಾತ್ ಮಹಾಖಾಸಗೀಕರಣದ ವಿಶ್ವರೂಪ ಕಾಣಿಸುವ ಕಥೆ.

1999ರ ಜನವರಿ ಆರರಂದು ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ನಾಲ್ಕು ಮಹಾನಗರಗಳನ್ನು ದಿಲ್ಲಿ (ಉತ್ತರ), ಕೋಲ್ಕತಾ (ಪೂರ್ವ), ಚೆನ್ನೈ (ದಕ್ಷಿಣ) ಮತ್ತು ಮುಂಬೈ (ಪಶ್ಚಿಮ) ಜೋಡಿಸುವ 5,843ಕಿ.ಮೀ. ಉದ್ದದ, ಆಗಲೇ ಇದ್ದ ರಸ್ತೆಯನ್ನು ಆರು ಲೇನ್‌ಗಳ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ದೇಶದಲ್ಲಿ ದೊಡ್ಡಗಾತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಪಿಪಿಪಿ ಮಾದರಿ ಬೇಕು ಎಂಬ ತೀರ್ಮಾನ 1998ರ ಹೊತ್ತಿಗೆ ಆದದ್ದರ ಫಲ ಇದು. 1988ರಲ್ಲಿ ರಾಜೀವ್ ಗಾಂಧಿ ಕಾಲದಲ್ಲಿ ರಚನೆಗೊಂಡ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ದೇಶದ ಮೊದಲ ಅತಿದೊಡ್ಡ ಹೆದ್ದಾರಿ ಯೋಜನೆ ಇದು. ಸಾರ್ವಜನಿಕರ ತೆರಿಗೆ, ಬಾಹ್ಯ ಸಾಲ, ಮಾರುಕಟ್ಟೆ ಸಾಲ ಮತ್ತು ಖಾಸಗಿ ಹೂಡಿಕೆಗಳ ಮೂಲಕ ಹಣ ಹೊಂದಿಸಿಕೊಂಡು ನಡೆಸಿದ ಪಿಪಿಪಿ ಮಾದರಿಯ ಈ ಯೋಜನೆ, ತಾನು ಅಳವಡಿಸಿಕೊಂಡ ಹೊಸ ಮಾದರಿಯ ಟ್ರಯಲ್ ಆ್ಯಂಡ್ ಅರರ್ ವಿಧಾನಗಳ ಕಾರಣದಿಂದಾಗಿ ಆಮೆಗತಿಯಲ್ಲಿ ಸಾಗಿ ಪೂರ್ಣಗೊಂಡದ್ದು 2012ರ ಹೊತ್ತಿಗೆ. ಆದರೆ, ಈ ಯೋಜನೆ ಸರಕಾರಕ್ಕೆ ಖಾಸಗಿ ರಂಗದ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಹಾದಿ ತೆರೆದುಕೊಟ್ಟಿತು.

ಅದರ ಉತ್ಸಾಹ ಎಷ್ಟಿತ್ತೆಂದರೆ, 1999ರಲ್ಲೇ ಪ್ರಧಾನಿ ವಾಜಪೇಯಿಯವರು ASSOCHAM  ಸಭೆಯೊಂದರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಕಾಶ್ಮೀರದ ಶ್ರೀನಗರಕ್ಕೆ ಜೋಡಿಸುವ ಮತ್ತು ಅಸ್ಸಾಮಿನ ಸಿಲ್ಚಾರನ್ನು ಗುಜರಾತಿನ ಪೋರಬಂದರಿಗೆ ಜೋಡಿಸುವ 7,500 ಕಿ.ಮೀ. ಉದ್ದದ ಆರು ಲೇನ್‌ಗಳ ಹೊಸ ಹೆದ್ದಾರಿಯೊಂದನ್ನು ಘೋಷಿಸಿಬಿಟ್ಟಿದ್ದರು! ಆಗ ಗಾಬರಿ ಬಿದ್ದ ಸಾರಿಗೆ ಕಾರ್ಯದರ್ಶಿಗಳು, ಗೋಲ್ಡನ್ ಕ್ವಾಡ್ರಿಲ್ಯಾಟರಲ್ಲಿಗೇ ಹಣ ಸಾಕಷ್ಟಿಲ್ಲ ಎಂಬುದನ್ನು ಸರಕಾರದ ಗಮನಕ್ಕೆ ತಂದ ಬಳಿಕ, ಅದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ (ಎನ್‌ಎಚ್‌ಡಿಪಿ) ಎಂಬ ಹೊಸ ಯೋಜನೆಯಾಗಿ ರೂಪಿಸಲಾಯಿತು ಮಾತ್ರವಲ್ಲದೆ ಇನ್ನಷ್ಟು ಸುಧಾರಿಸಿ, ದೇಶದ ಪ್ರತಿಯೊಂದು ರಾಜ್ಯದ ರಾಜಧಾನಿಯನ್ನು ಗೋಲ್ಡನ್ ಕ್ವಾಡ್ರಿಲ್ಯಾಟರಲ್ಲಿಗೆ ಸಂಪರ್ಕಿಸುವ ಸುಧಾರಿತ ಯೋಜನೆ ಜಾರಿಗೆ ಬಂತು. ಹಾಲಿ ಸರಕಾರ ಅದನ್ನು ‘ಭಾರತ್‌ಮಾಲಾ’ ಎಂಬ ಹೆಸರಿನಲ್ಲಿ ಇನ್ನಷ್ಟು ಸುಧಾರಿಸಿದೆ, ಈಗದು 5.35 ಲಕ್ಷ ಕೋಟಿ ರೂ.ಗಳ ಮತ್ತು ಸುಮಾರು 35,000 ಕಿ.ಮೀ. ಉದ್ದದ ರಸ್ತೆ ಯೋಜನೆಯಾಗಿ ಪ್ರಗತಿಯಲ್ಲಿದೆ.

ಈ ಎಲ್ಲ ಯೋಜನೆಗಳಲ್ಲಿ ಖಾಸಗಿ ಹೂಡಿಕೆ ಇರುವುದರಿಂದ ಇವುಗಳಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರು, ತಮ್ಮ ವೆಚ್ಚ, ಲಾಭಾಂಶಗಳನ್ನು ಟೋಲ್ ಮೂಲದಿಂದ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಒಪ್ಪಂದಗಳನ್ನು ಕನ್ಸೆಷನರ್ ಒಪ್ಪಂದಗಳು ಎಂದು ಕರೆಯಲಾಗುತ್ತದೆ. ಅವು ಸಾಮಾನ್ಯವಾಗಿ, 20-30 ವರ್ಷ ಅವಧಿಯವು. ಈ ಕನ್ಸೆಷನರ್‌ಗಳು ಸಂಗ್ರಹಿಸಬೇಕಾದ ಟೋಲ್ ಪ್ರಮಾಣವನ್ನು ಸರಕಾರ ನಿಗದಿಪಡಿಸಿ, ಗಜೆಟ್ ಪ್ರಕಟಣೆ ಹೊರಡಿಸುತ್ತದೆ. ಪ್ರತೀ ಕಿ.ಮೀ.ಗೆ ನಿಗದಿಯಾಗುವ ಟೋಲ್ ಮೊತ್ತವನ್ನು ಸಗಟು ಬೆಲೆ ಸೂಚ್ಯಂಕದ ಮತ್ತು ಹಣದುಬ್ಬರದ ಸ್ಥಿತಿಯಂತಹ ಮಾನದಂಡಗಳ ಆಧಾರದಲ್ಲಿ ಕಾಲಕಾಲಕ್ಕೆ ಮರುನಿಗದಿ ಮಾಡಲಾಗುತ್ತದೆ. ಎರಡು ಟೋಲ್ ಪ್ಲಾಜಾಗಳ ನಡುವೆ ಸಾಮಾನ್ಯವಾಗಿ 60 ಕಿ.ಮೀ. ಅಂತರ ಇರಬೇಕೆಂದು ನಿಗದಿ ಪಡಿಸಲಾಗಿದೆ. ಮೂಲದಲ್ಲಿ, ಸರಕಾರ ಕಾನೂನುಬದ್ಧವಾಗಿ 2007-08ರಲ್ಲಿ ನಿಗದಿಪಡಿಸಿದ್ದ, ಕಿ.ಮೀ. ಒಂದರ ಸುಂಕದ ದರಗಳು ಹೀಗಿವೆ:

ಕಾರು, ಜೀಪ್, ವ್ಯಾನ್ ಇತ್ಯಾದಿ ಲಘು ವಾಹನಗಳು: 0.65 ರೂ.

ಲಘು ವಾಣಿಜ್ಯ ವಾಹನಗಳು: 1.05 ರೂ.

ಬಸ್, ಟ್ರಕ್ ಇತ್ಯಾದಿ ಸಾರಿಗೆ: 2.20 ರೂ.

ಹೆವಿ ವಾಹನಗಳು: 3.45 ರೂ.

ಅತಿಗಾತ್ರ/ತೂಕದ ವಾಹನಗಳು: 4.20 ರೂ.

ಹೀಗೆ ಟೋಲ್ ಸಂಗ್ರಹ ಸುಗಮವಾಗಿ ನಡೆಯುತ್ತಿರುವುದನ್ನು ಮತ್ತು ಅದು ಒಳ್ಳೆಯ ಆದಾಯ ಮೂಲವೂ ಆಗಿರುವುದನ್ನು ಗಮನಿಸಿದ ಸರಕಾರ 2010-11ರ ಹೊತ್ತಿಗೆ ಹೊಸದೊಂದು ನಿರ್ಧಾರ ತಳೆಯಿತು. ಆ ಸಮಯಕ್ಕೆ ಬಿ.ಒ.ಟಿ. ತತ್ವದಡಿ ನಿರ್ಮಾಣಗೊಂಡಿದ್ದ ಹಲವು ರಸ್ತೆಗಳು ಬಿ.ಒ.ಟಿ. ತತ್ವದ ನಿರ್ಮಾಣ ಗುತ್ತಿಗೆಯ ಶರತ್ತುಗಳ ಅನ್ವಯ ಸರಕಾರಕ್ಕೆ ವರ್ಗಾವಣೆಗೊಂಡದ್ದರಿಂದ ಅಲ್ಲಿಯ ತನಕ ಟೋಲ್ ರಸ್ತೆಗಳಾಗಿದ್ದ ಹಲವು ರಸ್ತೆಗಳು ಎನ್‌ಎಚ್‌ಎಐ ಅಡಿ ಬಂದವು. ಜೊತೆಗೆ ಸರಕಾರದ ವೆಚ್ಚದಲ್ಲೇ ನಿರ್ಮಿಸಿದ ಹಲವು ರಸ್ತೆಗಳೂ ಇದ್ದವು. ಇವನ್ನೆಲ್ಲ ನಿರ್ವಹಿಸುವ, ಕಾಲಕಾಲಕ್ಕೆ ದುರಸ್ತಿಮಾಡುವ ಜವಾಬ್ದಾರಿಗಳನ್ನೂ ಕಳಚಿಕೊಳ್ಳಲು ತೀರ್ಮಾನಿಸಿದ ಭಾರತ ಸರಕಾರವು ಒಎಂಟಿ(ಆಪರೇಟ್, ಮೇಂಟೇನ್, ಟ್ರಾನ್ಸ್ ಫರ್) ಎಂಬ ಹೊಸ ಗುತ್ತಿಗೆ ತತ್ವದಡಿ ರಸ್ತೆಗಳ ನಿರ್ವಹಣೆಯನ್ನೂ ಖಾಸಗಿಯವರಿಗೆ ವಹಿಸಿಕೊಡಲು ಆರಂಭಿಸಿತು. ಈ ನೀತಿಯಡಿ ಎಲ್ಲ ಹೆದ್ದಾರಿಗಳಿಗೂ ಟೋಲ್ ಅಳವಡಿಸಿ, ರಸ್ತೆ ನಿರ್ವಹಣೆ, ಟ್ರಾಫಿಕ್ ನಿರ್ವಹಣೆಗಳನ್ನು ಖಾಸಗಿಗೆ ಬಿಟ್ಟುಕೊಡಲಾಗುತ್ತಿದೆ. ಈ ಒಎಂಟಿ ಟೋಲ್ ಸಂಗ್ರಹದಲ್ಲಿ ಒಂದು ಪಾಲು ಸರಕಾರಕ್ಕೂ ಸಿಗುತ್ತಿದೆ. ಒಎಂಟಿ ಒಪ್ಪಂದಗಳೆಲ್ಲ ನಾಲ್ಕರಿಂದ ಒಂಭತ್ತು ವರ್ಷ ಅವಧಿಯವು.

ಈಗ ಹೆದ್ದಾರಿ ಸಚಿವ ಗಡ್ಕರಿ ಅವರು ಹೇಳುತ್ತಿರುವುದನ್ನು ನಂಬುವುದಿದ್ದರೆ, ಕೇಂದ್ರ ಸರಕಾರದ ಹಾಲೀ ಟೋಲ್ ಸಂಗ್ರಹ ಆದಾಯ ಸುಮಾರು 40-50 ಸಾವಿರ ಕೋಟಿ ರೂ. ಗಳಷ್ಟಿರುವುದು, ಇನ್ನು ಜಿಪಿಎಸ್ ಆಧರಿತವಾದ, ರಸ್ತೆಯನ್ನು ಬಳಸಿದಷ್ಟಕ್ಕೆ ಮಾತ್ರ ಟೋಲ್ ತೆರುವ ವ್ಯವಸ್ಥೆಯಲ್ಲಿ (ಇನ್ನು ಎರಡು ಮೂರು ವರ್ಷಗಳಲ್ಲಿ) ಪ್ರತೀವರ್ಷ 1.40 ಲಕ್ಷ ಕೋಟಿ ರೂ.ಗಳಿಗೂ ಮೀರಲಿದೆಯಂತೆ!

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X