Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕಾರ್ಕಳದಿಂದ ಜೈ ಹನುಮ ಸೇನೆ...

ಕಾರ್ಕಳದಿಂದ ಜೈ ಹನುಮ ಸೇನೆ ಅಭ್ಯರ್ಥಿಯಾಗಿ ರಾಜ್ಯ ಸಂಚಾಲಕ ಹನುಮಂತಪ್ಪ ಅಖಾಡಕ್ಕೆ

11 April 2023 2:31 PM IST
share
ಕಾರ್ಕಳದಿಂದ ಜೈ ಹನುಮ ಸೇನೆ ಅಭ್ಯರ್ಥಿಯಾಗಿ ರಾಜ್ಯ ಸಂಚಾಲಕ ಹನುಮಂತಪ್ಪ ಅಖಾಡಕ್ಕೆ

ಕಾರ್ಕಳ.ಎ.11: ಜೈ ಹನುಮಾನ್ ಸೇನೆಯು ಕರ್ನಾಟಕದಲ್ಲಿ ಕರಾವಳಿಯ ಕಾರ್ಕಳ, ಮಲೆನಾಡು, ಕಲ್ಯಾಣ ಕರ್ನಾಟಕ ,ಹೈದರಬಾದ್ ಕರ್ನಾಟಕದ ಭಾಗದಲ್ಲಿ ವಿಧಾನಸಭೆಗೆ ಸ್ಪರ್ದಿಸಲು ತಯಾರಿ ನಡೆಸಿದ್ದು, ಇದರ ಭಾಗವಾಗಿ ಕಾರ್ಕಳದಲ್ಲಿ ನಾನೇ ಸ್ಪರ್ದಿಸಲಿದ್ದೇನೆ ಎಂದು ಜೈ ಹನುಮ ಸೇನೆ ರಾಜ್ಯ ಸಂಚಾಲಕ ಹನುಮಂತಪ್ಪ ರವರು ತಿಳಿಸಿದ್ದಾರೆ.

ಅವರು ಕಾರ್ಕಳದ ಪ್ರಕಾಶ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹನುಮ ಹುಟ್ಟಿದ ನಾಡು ಕನಾಟಕದಲ್ಲಿ, ಹನುಮನ ಶಕ್ತಿಯ ಕಾರಣ ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳು ಏನೆಲ್ಲ ಕಷ್ಟ-ಕಾರ್ಪಣ್ಯವನ್ನು ಎದುರಿಸಿಯೂ ದಿಟ್ಟತನದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ  ಆರಾಧ್ಯ ದೈವವನ್ನು ಆರಾಧಿಸುವ  ಜೊತೆಗೆ ನಮ್ಮ ಹನುಮಾನ್ ಜೀ ವಿಚಾರಗಳನ್ನು ಬಲಗೊಳಿಸುವುದು, ಪರಸ್ಪರ ಸಹಕರಿಸುವುದು ಆ ಮೂಲಕ ಸಮುದಾಯಗಳ ಸರ್ವ ಏಳಿಗೆ ಬಯಸುವುದು ಸರ್ವ ಹನುಮಭಕ್ತರ ಜವಾಬ್ದಾರಿಯಾಗಿದೆ ಎಂದರು.

ಈ ವಿಚಾರಗಳನ್ನು ಇಂದಿನ ದಿನಮಾನಗಳಲ್ಲಿ ಕಾಲಕಾಲಕ್ಕೂ ದುಡಿಯುತ್ತ ಬಂದಿರುವ ಜನರು ಹಾಗೂ ಹಿಂದುಳಿದ ಸಮುದಾಯದ ಜಾತಿಗಳಿಗೆ ತಲುಪಿಸುವ ಕೆಲಸವಾಗಬೇಕಿದೆ. ಈ ಕಾರ್ಯವು ನಮ್ಮ ಕರ್ತವ್ಯವಾಗಿದೆ. ಹನುಮನ ನಾಡಾಗಿರುವ ಕರ್ನಾಟಕದಲ್ಲಿ ಹನುಮನ ವಿಚಾರಗಳನ್ನು, ಹನುಮನ ಅಂತಃಕರಣದ ಹೃದಯವನ್ನು, ಹನುಮನ ಶಕ್ತಿಯನ್ನು, ಹನುಮ ಭಕ್ತರು ತೋರ್ಪಡಿಸುವ ಜೊತೆಗೆ ಸುಭಿಕ್ಷ ಸಮಾಜವನ್ನು ಕಟ್ಟಿಕೊಡುವುದು ನಮ್ಮೆಲ್ಲರ ಕಾಯಕವಾಗಿದೆ. ಇದು ನಮ್ಮ ಧರ್ಮದ ಅಂತಃರಾಳವಾಗಿದೆ. ಧರ್ಮದ ನೈಜ ಸಾರವನ್ನು ಅರಿತು ಅದನ್ನು ಎಲ್ಲೆಡೆ ಪಸರಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಹನುಮನ ಉದಾತ್ತ ವಿಚಾರಗಳನ್ನು ಹನುಮನ ಭಕ್ತರಿಗೆ ತಲುಪಿಸುವುದು ಸೇನೆಯು ಉದಾತ್ತ ಧೈಯಗಳನ್ನಿಟ್ಟುಕೊಂಡು "ಜೈ ಹನುಮಾನ್ ಸೇನೆ"ಯ ರಚನೆಯಾಗಿದ್ದು, ನಮ್ಮದೈವ ಹನುಮನನ್ನು ಪೂಜಿಸುವ, ಆರಾಧಿಸುವ ಜನರ ರಕ್ಷಣೆ, ಅವರ ಏಳಿಗೆ ಸೇನೆಯ ಮುಖ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಜೈ ಹನುಮಾನ್ ಸೇನೆಯ ಯಾನ ರಾಜ್ಯಾದ್ಯಂತ ಆರಂಭಗೊಂಡಿದೆ ಕರ್ನಾಟಕದ ಕರಾವಳಿಯ ಕಾರ್ಕಳ, ಮಲೆನಾಡು, ಕಲ್ಯಾಣ ಕರ್ನಾಟಕ ,ಹೈದರಬಾದ್ ಕರ್ನಾಟಕದ ಭಾಗದಲ್ಲಿ ವಿಧಾನಸಬೆಗೆ ಸ್ಪರ್ದಿಸಲು ತಯಾರಿ ನಡೆಸಿದೆ ಇದರ ಭಾಗವಾಗಿ ಕಾರ್ಕಳದಲ್ಲಿ ಸ್ವತಹ ತಾನೇ ಸ್ಪರ್ದಿಸಲಿದ್ದೇನೆ ಎಂದರು.

ಸದೃಢ ಕರ್ನಾಟಕ್ಕಾಗಿ ದೆಹಲಿ ಮಾಧರಿಯಂತೆ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡುವುದು, ಪಿ.ಯು.ಸಿ. ಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾರಿಗೆ ಅನಾನೂಕೂಲ ಹಾಗೂ ವಸತಿ ನಿಲಯಗಳ ವ್ಯವಸ್ಥೆ, ಶೈಕ್ಷಣಿಕ ಭತ್ಯೆ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಉಚಿತ, ಐ.ಟಿ.ಐ ಡಿಪ್ಲೋಮಾ ಹಾಗೂ ಇಂಜನೀಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಟೂಲ್ ಬಾಕ್ಸ್ ಮತ್ತು ಟ್ಯಾಬ್ ವಿತರಣೆ, ವಿದ್ಯಾರ್ಥಿಗಳಿಗೆ ಫ್ರೀ ಕಾಸ್ಟ್‌ನಲ್ಲಿ ಮೆಡಿಕಲ್ ಶಿಕ್ಷಣ ನೀಡುವುದು,1 ರಿಂದ 10 ನೇ ತರಗತಿವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ. 2,000/- ವಿಶೇಷ, 10ನೇ ತರಗತಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಫ್ಲ್ಯಾಷ್‌ಲೈಟ್, ಶಾಲಾ ಬ್ಯಾಗ್, ಸಮ ವಸ್ತ್ರ ಸೇರಿದಂತೆ ಇತ್ಯಾದಿ ಶೈಕ್ಷಣಿಕ ವಸ್ತುಗಳನ್ನು ಕೊಡಲಾಗುವುದು ಎಂದರು.

ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಜಾರಿಗೆಗೊಳಿಸಲಾಗುವುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ರೂ. 3,500/- ಮಾಸಿಕ ಭತ್ಯೆ, ಬಿ.ಪಿ.ಎಲ್. ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ. 10,000/- ಕೊಡುಗೆ, ದೇವದಾಸಿ ಕುಟುಂಬಕ್ಕೆ ರೂ. 5.00 ಲಕ್ಷದವರೆಗೆ ವಿಶೇಷ ಯೋಜನೆ, ದೇವದಾಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರೂ. 50,000/- ವಾರ್ಷಿಕ ಕೊಡುಗೆ, ಶವ ಸಂಸ್ಕಾರಕ್ಕೆ ರೂ. 10,000/- ಮಂಜೂರಾತಿ , ಪ್ರತಿ ಗ್ರಾಮಕ್ಕೆ ಹೈ ಟೆಕ್ ಬಸ್ ನಿಲ್ದಾಣ ನಿರ್ಮಾಣ , ವಿಧವಾ ವೇತನ ಮಾಸಿಕ ರೂ. 3,000/, ವಿಶೇಷ ಚೇತನರ ಭತ್ಯೆಯನ್ನು ಮಾಸಿಕ ರೂ.4,000/, ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಮಹಿಳಾ ಕೈಗಾರಿಕಾ ಘಟಕ ಸ್ಥಾಪನೆ, ಪ್ರತಿ ತಾಲೂಕಿಗೆ 2 ರಂತೆ 100 ಹಾಸಿಗೆಯ ತಾಯಿ-ಮಕ್ಕಳ ವಿಶೇಷ ಆರೈಕೆ ಆಸ್ಪತ್ರೆ , ಬಿ.ಪಿ.ಎಲ್. ಕಾರ್ಡ್ ಹೊಂದಿದ ಬಾಣಂತಿಗೆ ಹೆರಿಗೆ 15 ದಿನಗಳೊಳಗೆ ರೂ. 15,000/- ಸಹಾಯ ಧನ, ಪ್ರತಿ ತಾಲೂಕಿಗೆ ಒಂದರಂತೆ ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್‌ ನಿರ್ಮಾಣ, ಪ್ರತಿ ಜಿಲ್ಲೆಗೊಂದರಂತೆ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ, ತಾಲೂಕಿಗೆ ಒಂದರಂತೆ ಮೂಳೆ-ಎಲುಬು ಶಸ್ತ್ರ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ, ಜಿಲ್ಲೆಗೊಂದು ಹೃದಯ ಬ್ಯಾಂಕ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದರು.

ಪ್ರತಿ ತಾಲೂಕ ಆಸ್ಪತ್ರೆಗಳಿಗೆ ವಿಶೇಷ ತಜ್ಞರ 24x7 ವೈದ್ಯಾಧಿಕಾರಿಗಳ ಸೇವೆ ದೊರೆಯಲು ಶಿಫ್ಟ್ ವೈಜ್ ನೇಮಕಾತಿ, ಪ್ರತಿ ಜಿಲ್ಲೆಗೊಂದು ಔಷಧ ಸಂಶೋಧನಾ ಕೇಂದ್ರ ಸ್ಥಾಪನೆ, ಪ್ರತಿ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ತರಹದ ಔಷಧಿಗಳು ರೋಗಿಗೆ ದೊರೆಯುವಂತೆ ಮಾಡುವುದು, ಜಿಲ್ಲೆಗೊಂದು ಮೂತ್ರಪಿಂಡ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮುಂತಾದ ಪ್ರಮುಖ ವಿಷಯಗಳ ಮೇಲೆ ಪ್ರಾಮುಖ್ಯತೆ ನೀಡಲಿದ್ದು ಇವುಗಳ ಅನುಷ್ಠಾನಕ್ಕಾಗಿ ನಿರಂತರ ಹೋರಾಟ ನಡೆಸಲಿದ್ದೇವೆ ಎಂದರು.

share
Next Story
X