ದಾವಣಗೆರೆ: ಬಾಲಕಿಯನ್ನು ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ

ಹೊನ್ನಾಳಿ (ದಾವಣಗೆರೆ): ಇತ್ತೀಚೆಗೆ ಅಪ್ತಾಪ್ತೆಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿ ಚನ್ನಗಿರಿ ತಾಲೂಕಿನಲ್ಲಿ ಜನರಲ್ಲಿ ಅತಂಕ ಉಂಟು ಮಾಡಿದ್ದ ಕಾಡಾನೆಯನ್ನು ನ್ಯಾಮತಿ ತಾಲೂಕಿನ ಜೀನಹಳ್ಳಿ ಮತ್ತು ಕೆಂಚಿಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಹನುಮಾಪುರ ಗಡಿ ಜಾಲಿ ಹೊಸೂರ್ ಕೆರೆ ಚಿಕ್ಕಪ್ಪನ ದೇಗುಲದ ಬಳಿ ಮಂಗಳವಾರ ಸೆರೆ ಹಿಡಿಯಲಾಗಿದೆ.
ಮಂಗಳವಾರ ಮುಂಜಾನೆಯೇ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಕೆರೆ ಬಳಿ ಮೀನುಗಾರರಿಗೆ ಕಾಣಿಸಿಕೊಂಡಿದ ಕಾಡನೆಯು ತುಗ್ಗಲಹಳ್ಳಿ , ಕೆಂಚಿಕೊಪ್ಪ , ಜೀನಹಳ್ಳಿ ಗ್ರಾಮಗಳ ಹೊರವಲಯದಲ್ಲಿರುವ ಕೆರೆಗಳ ಬಳಿ ಕಾಣಿಸಿಕೊಂಡಿದ್ದು ಕೆರೆಯ ನೀರಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಕೆಂಚಿಕೊಪ್ಪ ಗ್ರಾಮದ ರುದ್ರೇಶ್ , ಸುರೇಶ್ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಮಾಹಿತಿಯನ್ನು ಅಧಾರಿಸಿ ಆಪರೇಷನ್ ಕಾಡಾನೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಜೀನಹಳ್ಳಿ ಮತ್ತು ಕೆಂಚಿಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಹನುಮಾಪುರ ಗಡಿ ಜಾಲಿ ಹೊಸೂರ್ ಕೆರೆ ಚಿಕ್ಕಪ್ಪನ ದೇಗುಲದ ಬಳಿ ಕಾಡಾನೆ ಕಂಡು ಬಂದಿದೆ.
ಇನ್ನೇನು ಆನೆಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿಯಬೇಕು ಎನ್ನುವಷ್ಟರಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್‌ಅವರ ಮೇಲೆ ಆನೆ ದಾಳಿ ನಡೆಸಿದೆ.
ಹಾಸನದ ಆಲೂರು ಕಡೆಯಿಂದ ಬಂದಿದ್ದ ಆನೆಯು ಸೂಳೆಕೆರೆಯ ಸುತ್ತಮುತ್ತ ಅಲ್ಲಿಂದ ಹೊನ್ನಾಳಿ ಕಡೆಗೆ ಹೋದ ಆನೆಯು ನ್ಯಾಮತಿಯ ಮೂಲಕ ಶಿಕಾರಿಪುರದತ್ತ ಹೋಗುವ ಸಾಧ್ಯತೆ ಇತ್ತು. ಸಿಕ್ಕಬಿದ್ದ ನರಹಂತಕ ಆನೆಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಅರವಳಿಕೆ ತಜ್ಞರು ಇವತ್ತು ಆನೆಯ ಇರುವಿಕೆಯನ್ನು ಪತ್ತೆಮಾಡಿದ್ದರು. ಅಲ್ಲದೆ ಡ್ರೋನ್ ಮೂಲಕ ಆನೆಯನ್ನು ಸೈಟ್ ಮಾಡಿ, ಅದರನ್ನ ಅರವಳಿಕೆ ಚುಚ್ಚುಮದ್ದು ಕೊಟ್ಟು ಡಾರ್ಟ್ ಮಾಡಲು ಮುಂದಾಗಿದ್ದರು.
ಅರವಳಿಕೆಗೂ ಬಗ್ಗದ ಕಾಡಾನೆ ಸೂಳೆಕೆರೆ ಬಳಿಯಿಂದ ತಾಲೂಕಿನ ಜೀನಹಳ್ಳಿ ಮತ್ತು ಕೆಂಚಿಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಹನುಮಾಪುರ ಗಡಿ ಜಾಲಿ ಹೊಸೂರ್ ಕೆರೆ ಚಿಕ್ಕಪ್ಪನ ದೇಗುಲದ ಬಳಿ ತೆಂಗಿನ ತೋಟದ ಆನೆಯು ಮಂಗಳವಾರ ಬೆಳಗ್ಗೆ ಪತ್ತೆಯಾಗಿತ್ತು. ಅದನ್ನು ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂದುಕೊಂಡಂತೆ, ಸಕ್ರೆಬೈಲು ಆನೆ ಬಿಡಾರದ ವೈದ್ಯರಾದ ಡಾ. ವಿನಯ್ ಆನೆಗೆ ಅರವಳಿಕೆ ಚುಚ್ಚುಮದ್ದನ್ನು ನೀಡಿ ಸೆರೆ ಹಿಡಿಯಲು ಮುಂದಾದ ಸಂದರ್ಭದಲ್ಲಿ ಆನೆಯು ಸಹ ಅರವಳಿಕೆ ಚುಚ್ಚುಮದ್ದಿನ ಪರಿಣಾಮವಾಗಿ ನೆಲಕ್ಕುರುಳಿತ್ತು. ಇದನ್ನ ಗಮನಿಸಿ ಸಿಬ್ಬಂದಿ ಆನೆಯ ಬಳಿಗೆ ಹೋಗಿದ್ದಾರೆ.
ಆದರೆ ಈ ವೇಳೆ ಇದಕ್ಕಿದ್ದಂತೆ ಎದ್ದ ಆನೆ ದಾಳಿಗೆ ಮುಂದಾಗಿದೆ ಡಾ.ವಿನಯ್ ಸೇರಿದಂತೆ ಎಲ್ಲರೂ ಓಡಲು ಆರಂಭಿಸಿದ್ದಾರೆ. ಆದರೆ ಡಾ.ವಿನಯ್ ಕಲ್ಲು ತಗುಲಿ ಎಡವಿ ಬಿದ್ದಿದ್ಧಾರೆ. ಅಷ್ಟರಲ್ಲಿ ಆನೆಯು ಅವರ ಮೇಲೆ ದಾಳಿ ನಡೆಸಿ, ಸೊಂಟದ ಮೇಲೆ ಕಾಲಿಟ್ಟು ಸೊಂಡಿಲಿನಿಂದ ದಾಳಿ ನಡೆಸಿದೆ.
ತಕ್ಷಣವೇ ಅರಣ್ಯ ಇಲಾಖೆಯವರು ಗಾಳಿಯಲ್ಲಿ ಗುಂಡು ಹಾರಿಸಿ ಕೂಗಿದ್ದಾರೆ ಅಲ್ಲಿಂದ ಆನೆ ವಿನಯರವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ಇನ್ನೂ ಅರಣ್ಯ ಸಿಬ್ಬಂದಿ ವೈಧ್ಯ ವಿನಯ್ ಅವರನ್ನ ಇಲಾಖೆಯ ವಾಹನದಲ್ಲಿಯೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಿದ್ದು ಡಾ. ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದರೆ. ವಿಷಯ ತಿಳಿದ ಡಾ. ವಿನಯ್ ಅವರ ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡ್ಡಿದ್ದಾರೆ.







