ಕಾಪು ಪುರಸಭೆಯ ಮಾಜಿ ಸದಸ್ಯ ನಾಗೇಶ್ ಸುವರ್ಣ ನಿಧನ

ಕಾಪು (ಪಡುಬಿದ್ರಿ): ಕಾಪು ಪುರಸಭೆಯ ಮಾಜಿ ಸದಸ್ಯ ನಾಗೇಶ್ ಸುವರ್ಣ (54) ಅವರು ಮಂಗಳವಾರ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.
ಕಾಪು ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ಅವರು, ಕಾಪು ಗ್ರಾಮ ಪಂಚಾಯತ್ ಸದಸ್ಯರಾಗಿ, ಯುವವಾಹಿನಿ ಕಾಪು ಘಟಕದ ಸ್ಥಾಪಕಾಧ್ಯಕ್ಷರಾಗಿ, ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಪೊಯ್ಯ ಪೊಡಿಕಲ್ಲ ಗರೊಡಿ ಸೇವಾ ಯುವ ಸಮಿತಿಯ ಅಧ್ಯಕ್ಷರಾಗಿ, ಪಡು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿಯಾಗಿ, ಕಾಪು ಬಿಲ್ಲವರ ಸಹಾಯಕ ಸಂಘದ ಜತೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
Next Story