ಉಮೇಶ್ ಕತ್ತಿ ಪುತ್ರ, ಸಹೋದರನಿಗೂ ಬಿಜೆಪಿ ಟಿಕೆಟ್
ವಿಜಯ ನಗರ ಕ್ಷೇತ್ರದಿಂದ ಆನಂದ್ ಸಿಂಗ್ ಪುತ್ರ ಕಣಕ್ಕೆ

ಬೆಳಗಾವಿ: ಸವದತ್ತಿ ಮತ್ತು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದ ಹಿನ್ನೆಲೆಯಲ್ಲಿ ಆ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡುವುದು ಎಂಬುದು ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು. ಇದೀಗ ಎರಡೂ ಕ್ಷೇತ್ರಗಳಿಗೆ ಮೊದಲ ಹತದ ಪಟ್ಟಿಯಲ್ಲೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಉಮೇಶ್ ಕತ್ತಿಯವರ ಅಕಾಲಿಕ ಮರಣದ ನಂತರ ತೆರವಾಗಿದ್ದ ಹುಕ್ಕೇರಿ ಕ್ಷೇತ್ರದಲ್ಲಿ ಅವರ ಮಗ ನಿಖಿಲ್ ಕತ್ತಿಗೆ ಪಕ್ಷವು ಮಣೆ ಹಾಕಿದೆ.
ಇದನ್ನೂ ಓದಿ: 189 ಮಂದಿ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಿಂದ ಯಾರಿಗೆ?
ಇನ್ನು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂಡ ಇದೇ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದರು. ಅವರಿಗೆ ಪಕ್ಕದ ಕ್ಷೇತ್ರ ಸವದತ್ತಿಯಲ್ಲಿ ಅವಕಾಶ ನೀಡಿದೆ. ಈ ಮೂಲಕ ಒಂದೇ ಕುಟುಂಬದ ಇಬ್ಬರ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ.
ಆನಂದ್ ಸಿಂಗ್ ಪುತ್ರ ಕಣಕ್ಕೆ:
ಆನಂದ್ ಸಿಂಗ್ ಅವರು ತನ್ನ ಬದಲು ಮಗನಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಅದರಂತೆ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಗೆ ವಿಜಯ ನಗರ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಈ ಪಟ್ಟಿಯಲ್ಲಿ ಆನಂದ್ ಸಿಂಗ್ ಅವರನ್ನು ಕೈ ಬಿಡಲಾಗಿದೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್: ಬೇಡ ಅಂದ್ರೂ ಎಂಟಿಬಿ ನಾಗರಾಜ್ ಗೆ ಟಿಕೆಟ್







