Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೋಮು ಘರ್ಷಣೆ ವರದಿ: ವಿದ್ಯುನ್ಮಾನ...

ಕೋಮು ಘರ್ಷಣೆ ವರದಿ: ವಿದ್ಯುನ್ಮಾನ ಮಾಧ್ಯಮಗಳ ಮುಸ್ಲಿಮ್‌ದ್ವೇಷಿ ಧೋರಣೆ

ತನ್ಯಾ ಅರೋರಾತನ್ಯಾ ಅರೋರಾ12 April 2023 11:25 AM IST
share
ಕೋಮು ಘರ್ಷಣೆ ವರದಿ: ವಿದ್ಯುನ್ಮಾನ ಮಾಧ್ಯಮಗಳ ಮುಸ್ಲಿಮ್‌ದ್ವೇಷಿ ಧೋರಣೆ

‘ಆಜ್ ತಕ್’ನಲ್ಲಿ ಘಟನೆಗಳನ್ನು ವರದಿ ಮಾಡುವಾಗ, ‘ಎರಡು ಸಮುದಾಯಗಳ ನಡುವೆ ಘರ್ಷಣೆ’ ಎಂಬ ಪದಗಳನ್ನು ಮತ್ತೆ ಮತ್ತೆ ಬಳಸಲಾಯಿತು. ಹಿನ್ನೆಲೆ ದೃಶ್ಯಗಳನ್ನು ತೋರಿಸುವಾಗಲೂ ಅದನ್ನೇ ಸೂಚಿಸುವಂತಿತ್ತು. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಸೂಕ್ಷ್ಮವಾಗಿ ಹೇಳುವ ಟಿಕರ್‌ಗಳು ತಪ್ಪುದಾರಿಗೆಳೆಯುವ ಹಾಗಿದ್ದವು. ಹಿಂಸಾಚಾರದ ಸ್ಥಳದಲ್ಲಿ ಪಿತೂರಿ ನಡೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ ಅದನ್ನೇ ನಿರಂತರವಾಗಿ ತೋರಿಸಲಾಯಿತು. ಉದ್ದಕ್ಕೂ ಆಯ್ದ ಮತ್ತು ಏಕಪಕ್ಷೀಯ ದೃಷ್ಟಿಕೋನವಿತ್ತು. ಹಿಂಸಾಚಾರ ಪ್ರಾರಂಭಿಸಿದ್ದು ಮತ್ತು ಅದಕ್ಕೆ ಹೊಣೆ ಮುಸ್ಲಿಮ್ ಸಮುದಾಯ ಎಂದು ಬಿಂಬಿಸುವ ರೀತಿಯಲ್ಲಿಯೇ ಎಲ್ಲವನ್ನೂ ಪ್ರಸ್ತುತಪಡಿಸಲಾಯಿತು.

ಮಸೀದಿಗಳ ಬಳಿ ಕಲ್ಲು ತೂರಾಟ, ಹಿಂಸಾಚಾರ, ಆಕ್ರಮಣಕಾರಿ ದ್ವೇಷ ಭಾಷಣಗಳು, ದಾಳಿಗಳು ಮತ್ತು ವಿಧ್ವಂಸಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಮಾಧ್ಯಮಗಳು ಈ ಘಟನೆಗಳನ್ನು ಹೇಗೆ ವರದಿ ಮಾಡಿವೆ ಎಂಬುದು ಗಂಭೀರ ಆತಂಕಕಾರಿ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ, ಹಲವಾರು ವಿದ್ಯುನ್ಮಾನ ಮಾಧ್ಯಮಗಳು ವಿಶೇಷವಾಗಿ ಹಿಂದಿ, ಇಂಗ್ಲಿಷ್ ವಾಹಿನಿಗಳು ನಾಜೂಕಾಗಿ ಆಯ್ದುಕೊಂಡು, ತಮಗೆ ಬೇಕಾದಂತೆ ತಿರುಚಿ, ಅಧಿಕಾರಸ್ಥರ ರಾಜಕೀಯ ಅಜೆಂಡಾಕ್ಕೆ ಅನುಕೂಲವಾಗುವಂತೆ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಿವೆ. ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳನ್ನು ವಿಲನ್ ಎಂಬಂತೆ ಕೋಮು ಸೂಕ್ಷ್ಮ ಸುದ್ದಿ ಪ್ರಸಾರ ಮಾಡುವುದು, ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಬಲಿಪಶು ಎಂದು ಬಿಂಬಿಸುವುದು ನಡೆಯುತ್ತಿದೆ.

ಈ ಸಲ ರಾಮನವಮಿಯಂದು ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನು ‘ಆಜ್ ತಕ್’ ಸುದ್ದಿ ವಾಹಿನಿ ಹೇಗೆ ಪ್ರಸ್ತುತಪಡಿಸಿದೆ ಎಂಬುದು ಅಂತಹ ಇತ್ತೀಚಿನ ಉದಾಹರಣೆಯಾಗಿದೆ. ‘ಆಜ್ ತಕ್’, ‘ಇಂಡಿಯಾ ಟುಡೆ’ ಸಮೂಹದ ಹಿಂದಿ ವಾಹಿನಿ. ‘ಆಜ್ ತಕ್’ ವರದಿ ಮಾಡಿರುವ ಸುದ್ದಿಯ ನೇರ ಪ್ರಸಾರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಘಟನೆಯ ದೃಶ್ಯಗಳೊಂದಿಗೆ ಆ ವರದಿ ಪ್ರಾರಂಭವಾಗುತ್ತದೆ. ಇತರ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ, ಶಿವಪುರದ ಮೆರವಣಿಗೆಯಿಂದ ಗೊಂದಲ ಶುರುವಾಗಿ, ಮಧ್ಯಾಹ್ನದ ವೇಳೆಗೆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಯಿತು ಮತ್ತು ಆಗಾಗ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿಯಾದವು. ಕೆಲವು ಕಾರುಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದ್ದು, ಬೆಂಕಿ ಹಚ್ಚಿದ ವರದಿಗಳೂ ಬಂದಿದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ದೊಡ್ಡ ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದ್ದರ ಸುದ್ದಿಯಿದ್ದವು.

ಆದರೆ, ‘ಆಜ್ ತಕ್’ ವರದಿಯೇ ಬೇರೆಯಿತ್ತು. ಘಟನೆಗಳನ್ನು ವರದಿ ಮಾಡುವಾಗ, ‘ಎರಡು ಸಮುದಾಯಗಳ ನಡುವೆ ಘರ್ಷಣೆ’ ಎಂಬ ಪದಗಳನ್ನು ಮತ್ತೆ ಮತ್ತೆ ಬಳಸಲಾಯಿತು. ಹಿನ್ನೆಲೆ ದೃಶ್ಯಗಳನ್ನು ತೋರಿಸುವಾಗಲೂ ಅದನ್ನೇ ಸೂಚಿಸುವಂತಿತ್ತು. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಸೂಕ್ಷ್ಮವಾಗಿ ಹೇಳುವ ಟಿಕರ್‌ಗಳು ತಪ್ಪುದಾರಿಗೆಳೆಯುವ ಹಾಗಿದ್ದವು. ಹಿಂಸಾಚಾರದ ಸ್ಥಳದಲ್ಲಿ ಪಿತೂರಿ ನಡೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ ಅದನ್ನೇ ನಿರಂತರವಾಗಿ ತೋರಿಸಲಾಯಿತು. ಉದ್ದಕ್ಕೂ ಆಯ್ದ ಮತ್ತು ಏಕಪಕ್ಷೀಯ ದೃಷ್ಟಿಕೋನವಿತ್ತು. ಹಿಂಸಾಚಾರ ಪ್ರಾರಂಭಿಸಿದ್ದು ಮತ್ತು ಅದಕ್ಕೆ ಹೊಣೆ ಮುಸ್ಲಿಮ್ ಸಮುದಾಯ ಎಂದು ಬಿಂಬಿಸುವ ರೀತಿಯಲ್ಲಿಯೇ ಎಲ್ಲವನ್ನೂ ಪ್ರಸ್ತುತಪಡಿಸಲಾಯಿತು.

ಇದಾದ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ಇತ್ತು. ಶೋಭಾಯಾತ್ರೆ ಸಮಯದಲ್ಲಿ ಶಸ್ತ್ರಸಜ್ಜಿತರಾಗಿರುವುದಾಗಿ ಬಿಜೆಪಿಯ ವರು ಹೇಳಿದ್ದರು. ಮುಸ್ಲಿಮ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ ನಡೆದರೆ ಕಟ್ಟುನಿಟ್ಟಿನ ತನಿಖೆ ನಡೆಸಲಾಗುವುದು ಎಂಬ ಅವರ ಹೇಳಿಕೆ ಬಳಿಕ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ದೂಷಿಸುವ ಹೇಳಿಕೆಯಿತ್ತು. ಆನಂತರ ಸಂಸದ ಗಿರಿರಾಜ್ ಸಿಂಗ್ ಹೇಳಿಕೆ. ‘‘ಮಮತಾ ಬ್ಯಾನರ್ಜಿ ಬಾಂಗ್ಲಾದೇಶಿಗಳು ಮತ್ತು ರೊಹಿಂಗ್ಯಾಗಳಿಗೆ ಕೆಂಪುಹಾಸು ಹಾಸಿದ್ದಾರೆ. ಕಳೆದ ವರ್ಷವೂ ರಾಮನವಮಿಯಂದು ಹಿಂಸಾಚಾರ ನಡೆದಿತ್ತು’’ ಎಂದು ಶುರುವಾಗುವ ಹೇಳಿಕೆ ಕಡೆಗೆ, ‘‘ಪ್ರತೀ ಬಾರಿ ಶಿವಾಜಿ ಎದ್ದು ತನ್ನ ಕೈಯಲ್ಲಿ ಕತ್ತಿಯನ್ನು ತೆಗೆದುಕೊಂಡಾಗ ಔರಂಗಜೇಬನ ನಾಶವಾಗುತ್ತದೆ’’ ಎಂದೆಲ್ಲ ಸಾಗುವುದನ್ನು ಎಲ್ಲಿಯೂ ಕತ್ತರಿಸದೆ, ವಿವೇಚನಾ ರಹಿತವಾಗಿ ಪ್ರಸಾರ ಮಾಡಲಾಯಿತು.

ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು ನಡೆದ ಹಿಂಸಾಚಾರವನ್ನು ‘ಆಜ್ ತಕ್’, ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ, ಆ ನಿಟ್ಟಿನಲ್ಲಿ ವೀಕ್ಷಕರನ್ನು ಪ್ರಭಾವಿಸುವಂತೆ, ಮಮತಾ ಬ್ಯಾನರ್ಜಿ ಹಿಂದೂ ವಿರೋಧಿ ಎಂಬಂತೆ ತೋರಿಸಿತು. ಹಿಂಸಾಚಾರದ ಹಿಂದೆ ಮಮತಾ ಬ್ಯಾನರ್ಜಿ ಇದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗಳನ್ನು, ಅವರ ಆಧಾರರಹಿತ ಆರೋಪಗಳನ್ನು ಪ್ರಸಾರ ಮಾಡಲಾಯಿತು. ಒಮ್ಮೆಯೂ ಘಟನೆಯನ್ನು ನಿರ್ಲಿಪ್ತವಾಗಿ ಬಿಂಬಿಸುವ ಪ್ರಯತ್ನ ಮಾಡಲಿಲ್ಲ. ‘ಆಜ್ ತಕ್’ನ ಈ ಶೈಲಿಯ ವರದಿ, ಸಮಚಿತ್ತದಿಂದ ದೂರವಿದ್ದುದಾಗಿತ್ತು ಮತ್ತು ವೀಕ್ಷಕರನ್ನು ಪೂರ್ವನಿರ್ಧರಿತ ತೀರ್ಮಾನಕ್ಕೆ ತಳ್ಳುವ ಪಕ್ಷಪಾತಿ ಉದ್ದೇಶವನ್ನು ಹೊಂದಿತ್ತು.

ರಾಮನವಮಿಯಂದು ಪಶ್ಚಿಮ ಬಂಗಾಳದಲ್ಲಿ ನಿಜವಾದ ರಾಜಕೀಯ ಗಲಭೆ ನಡೆದಿದೆ ಎಂಬುದನ್ನು ಒತ್ತಿಹೇಳುವ ಕೆಲಸ ನಡೆಯಿತು. ಮೆರವಣಿಗೆಯಲ್ಲಿ ಆಯುಧಗಳ ಪ್ರದರ್ಶನದಿಂದ ಅಶಾಂತಿ ಉಂಟಾಗಲಿಲ್ಲ, ಆದರೆ ಮಮತಾ ಬ್ಯಾನರ್ಜಿ ರಾಮನವಮಿಯ ಮೊದಲು ಹೇಳಿಕೆ ನೀಡಿದ ನಂತರ ರಾಜಕೀಯ ಗಿಮಿಕ್‌ಗಳು ಶುರುವಾದವು ಎಂಬಂತೆ ಬಿಂಬಿಸಲಾಯಿತು. ರಜೆ ತೆಗೆದುಕೊಂಡು ಹಬ್ಬ ಆಚರಿಸುವ ಬದಲು ಮಮತಾ ಬ್ಯಾನರ್ಜಿ ಮುಸ್ಲಿಮರನ್ನು ಓಲೈಸಲು ಧರಣಿ ಕುಳಿತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಎಂದು ವರದಿಯಲ್ಲಿ ಹೇಳಲಾಯಿತೇ ಹೊರತು, ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಪ್ರದರ್ಶಿಸುವುದು ಅಥವಾ ಝಳಪಿಸುವುದು ಅಪರಾಧ ಎಂದು ಒಮ್ಮೆಯೂ ಹೇಳಲಿಲ್ಲ. ಮೆರವಣಿಗೆ ನಡೆಸಿದವರ ಕೃತ್ಯಗಳನ್ನು ದೂಷಿಸುವ ಬದಲು, ಹಿಂಸಾಚಾರದ ಹಿಂದಿನ ಪ್ರಮುಖ ಕಾರಣ ಮಮತಾ ಬ್ಯಾನರ್ಜಿ ಎಂದು ದೂಷಿಸಲಾಯಿತು.

ಈ ಸುದ್ದಿಯ ನಂತರ ಗುಜರಾತ್‌ನ ವಡೋದರಾದಲ್ಲಿ ನಡೆದ ಹಿಂಸಾಚಾರದ ವೀಡಿಯೊಗಳು ಮತ್ತು ಕ್ಲಿಪ್‌ಗಳನ್ನು ತೋರಿಸುವಾಗಲೂ, ಯಾತ್ರೆ ಮಸೀದಿ ಪ್ರದೇಶ ತಲಪುತ್ತಿದ್ದಂತೆಯೇ ಕಲ್ಲು ತೂರಾಟ ನಡೆಸಿದ್ದು ಮುಸ್ಲಿಮರೇ ಎಂಬುದನ್ನು ಸೂಕ್ಷ್ಮವಾಗಿ ಸೂಚಿಸಲಾಯಿತು. ನಂತರ, ಹೈದರಾಬಾದ್‌ನಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಅಮಾನತುಗೊಂಡ ಬಿಜೆಪಿ ಶಾಸಕ ಟಿ. ರಾಜಾ ನೀಡಿದ ದ್ವೇಷ ಭಾಷಣದ ವರದಿಯಿತ್ತು. ಟಿ. ರಾಜಾ ಆನೆಯ ಮೇಲೆ ಸವಾರಿ ಮಾಡುವುದನ್ನೂ, ಅಖಂಡ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡುವುದನ್ನೂ ವರದಿಯಲ್ಲಿ ಕಾಣಬಹುದಾಗಿತ್ತು. ಈ ಹಿಂದೂ ರಾಷ್ಟ್ರದ ರಾಜಧಾನಿ ಕಾಶಿ, ಮಥುರಾ ಅಥವಾ ಅಯೋಧ್ಯೆಯೇ ಹೊರತು ದಿಲ್ಲಿಯಲ್ಲ ಎಂದು ಅವರು ಹೇಳಿದ್ದರು. ಜೊತೆಗೆ ಮುಸ್ಲಿಮ್ ದ್ವೇಷಿ ಮಾತುಗಳಿದ್ದವು. ಆದರೆ ವರದಿಯುದ್ದಕ್ಕೂ ಎಲ್ಲಿಯೂ ಅವರ ಮುಸ್ಲಿಮ್ ವಿರೋಧಿ ಧರ್ಮಾಂಧತೆಯನ್ನು ಪ್ರಶ್ನಿಸಲಿಲ್ಲ ಅಥವಾ ವಿಮರ್ಶಿಸಲಿಲ್ಲ. ದ್ವೇಷಭಾಷಣದ ಕಾರಣಕ್ಕೆ ಅವರು ಅನೇಕ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವುದನ್ನು ಎತ್ತಿಹೇಳುವಲ್ಲೂ ವರದಿ ವಿಫಲವಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿಯನ್ನು ದೂಷಿಸುವ ಅಭಿಪ್ರಾಯಗಳಿಗೆ ಒತ್ತುನೀಡುವುದು ಸಮರ್ಥನೀಯ ಎಂದು ವಾಹಿನಿ ಭಾವಿಸುವುದಾದರೆ, ಟಿ.ರಾಜಾ ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ಭಾಷಣದ ವಿಚಾರ ಬಂದಾಗ ಅದನ್ನೇಕೆ ಟೀಕಿಸಲಿಲ್ಲ?

ಮಾರ್ಚ್ ತಿಂಗಳಿನಲ್ಲಿಯೇ, ಅವರು ಎರಡು ದೊಡ್ಡ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಮಾತನಾಡಿದ್ದರು. ಅಲ್ಪಸಂಖ್ಯಾತ ಸಮುದಾಯದ ಯಾರಾದರೂ ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ತುಂಡು ತುಂಡಾಗಿ ಕತ್ತರಿಸುವುದಾಗಿ ಹೇಳಿದ್ದರು. ಹಿಂಸಾಚಾರ ಭುಗಿಲೇಳಲು ಅವರ ಪ್ರಚೋದನಾಕಾರಿ ಮಾತುಗಳೇ ಕಾರಣ ಎಂದು ವರದಿಯಾಗಿದೆ. ಆದರೆ ‘ಆಜ್ ತಕ್’ ಮಾತ್ರ ಇದನ್ನೆಲ್ಲ ವೀಕ್ಷಕರ ಮುಂದಿಡುವುದನ್ನು ಬೇಕೆಂದೇ ಮರೆತಿತ್ತು.

ಎಪ್ರಿಲ್ ೨೦೨೨ರಲ್ಲಿ, ವಿವಿಧ ರಾಷ್ಟ್ರಗಳು ಅಝಾನ್‌ಗಾಗಿ ಬಳಸುವ ಧ್ವನಿವರ್ಧಕಗಳ ಮೇಲಿನ ನಿರ್ಬಂಧ ಕುರಿತು ಒಂದು ಎಪಿಸೋಡ್ ಅನ್ನೇ ಪ್ರಸಾರ ಮಾಡಿದ್ದ ಇದೇ ಚಾನೆಲ್, ಇಂಡೋನೇಶ್ಯದಲ್ಲಿ ಅಝಾನ್ ನಿಷೇಧಿಸಲು ಕಾರಣವಾದ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸುವ ಮತ್ತು ಅಝಾನ್‌ಗಾಗಿ ಧ್ವನಿವರ್ಧಕ ಬಳಕೆಯ ಇತಿಹಾಸದ ಕುರಿತು ಭಾರೀ ಸಂಶೋಧನೆ ಮಾಡಿ ಚರ್ಚೆ ನಡೆಸುವ ಇದೇ ‘ಆಜ್ ತಕ್’, ಶೋಭಾಯಾತ್ರೆಗಳಲ್ಲಿ ಅವಹೇಳನಕಾರಿ ಹಾಡು ನುಡಿಸಲು ಡಿಜೆಗಳ ಬಳಕೆಯ ಬಗ್ಗೆ ಯಾಕೆ ವಿಮರ್ಶಿಸುವುದಿಲ್ಲ ಎಂಬುದು ಅಚ್ಚರಿಯ ವಿಚಾರ.

‘ಆಜ್ ತಕ್’ ವರದಿ, ಇಲೆಕ್ಟ್ರಾನಿಕ್ ಮಾಧ್ಯಮಗಳು ಹೇಗೆ ನಿರಂತರವಾಗಿ ಕೋಮು ಘರ್ಷಣೆಗಳನ್ನು ವರದಿ ಮಾಡುತ್ತವೆ ಎಂಬುದಕ್ಕೆ ಒಂದು ಉದಾಹರಣೆ. ‘ಆಜ್ ತಕ್’ ತನ್ನ ವರದಿಯಲ್ಲಿ ಕೇಸರಿ ಸ್ಕಾರ್ಫ್ ಮತ್ತು ಧ್ವಜಧಾರಿ ಜನ ಹಿಂಸಾಚಾರ ಉಂಟುಮಾಡಿರಬಹುದಾದ ಸಾಧ್ಯತೆಯ ಬಗ್ಗೆ ಒಂದು ನಿಷ್ಪಕ್ಷ ನಿಲುವನ್ನು ಒಮ್ಮೆಯೂ ತೋರಿಸಲೇ ಇಲ್ಲ. ಒಂಭತ್ತು ದಿನಗಳ ಹಬ್ಬದಲ್ಲಿ ಮುಸ್ಲಿಮರ ಒಡೆತನದ ಮಾಂಸದ ಅಂಗಡಿಗಳ ಮೇಲೆ ಹಿಂದೂ ಗುಂಪುಗಳು ದಾಳಿ, ಧ್ವಂಸ ಮಾಡಿದ್ದವು, ಬಲವಂತವಾಗಿ ಮುಚ್ಚಿಸಿದ್ದವು. ಯಾವುದೇ ಪ್ರಚೋದನೆ ಮತ್ತು ಪ್ರತೀಕಾರ ಇಲ್ಲದಿದ್ದರೂ ಹಿಂಸಾತ್ಮಕ ಪ್ರಾಬಲ್ಯದ ಮತ್ತು ದಬ್ಬಾಳಿಕೆಯ ಪ್ರದರ್ಶನ ನಡೆಯಿತು. ಸಂಗೀತ, ಡಿಜೆ ಮತ್ತು ಸಾರ್ವಜನಿಕ ನೃತ್ಯಗಳೊಂದಿಗೆ ಟ್ರಕ್‌ಗಳು, ಮೋಟಾರ್‌ಸೈಕಲ್‌ಗಳು ಮತ್ತು ಕಾಲ್ನಡಿಗೆಯಲ್ಲಿ ರಾಮನವಮಿ ಮೆರವಣಿಗೆಗಳನ್ನು ನಡೆಸುವಾಗ ಕೆಲವು ಹಿಂದೂ ಗುಂಪುಗಳು ಪ್ರದರ್ಶಿಸಿದ ಸಂಪೂರ್ಣ ಅಸಭ್ಯತೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ಒಮ್ಮೆಯೂ ತೋರಿಸಲೇ ಇಲ್ಲ. ಉದ್ದೇಶಪೂರ್ವಕವಾಗಿಯೇ ಪ್ರಚೋದನಾಕಾರಿ ಮುಸ್ಲಿಮ್ ವಿರೋಧಿ ಘೋಷಣೆಗಳು, ಹಾಡುಗಳು, ಭಾಷಣಗಳನ್ನು ಮರೆಮಾಚಲಾಯಿತು.

ರಾಮನವಮಿಯ ಹಿಂದಿನ ದಿನಗಳಲ್ಲಿ ಮುಸ್ಲಿಮ್ ಮಹಿಳೆಯರ ಮೇಲಿನ ಅತ್ಯಾಚಾರ ಬೆದರಿಕೆಗಳೂ ಸೇರಿದಂತೆ, ಹಲವು ಪ್ರಮುಖ ಬಲಪಂಥೀಯ ನಾಯಕರು ಮಾಡಿದ ಪ್ರಚೋದನಾಕಾರಿ ಮತ್ತು ಹಿಂಸಾತ್ಮಕ ಮುಸ್ಲಿಮ್ ವಿರೋಧಿ ಭಾಷಣಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಏಕೆ ಮರೆತಿವೆ? ತಿಂಗಳುಗಳ ಕಾಲ, ಅವರ ವ್ಯವಹಾರಗಳು, ಕೆಲಸ ಮಾಡುವ ಹಕ್ಕು, ಆಹಾರ ಶೈಲಿ ಮತ್ತು ಉರ್ದು ಭಾಷೆ ಗುರಿಯಾಗಿಟ್ಟುಕೊಂಡು ಮುಸ್ಲಿಮ್ ವಿರೋಧಿ ಅಭಿಯಾನಗಳು ನಡೆಯುತ್ತಿವೆ. ಮುಸ್ಲಿಮ್ ಆಚರಣೆಗಳು ಮತ್ತು ಚಿಹ್ನೆಗಳನ್ನು ವಿರೋಧಿಸುತ್ತಲೇ, ಹಿಂದೂ ಧಾರ್ಮಿಕ ಚಿಹ್ನೆಗಳು, ಆಚರಣೆಗಳು, ಆಹಾರ ಇತ್ಯಾದಿಗಳ ಬಲವಂತದ ಹೇರಿಕೆಗಳು ವಾಡಿಕೆಯಾಗಿವೆ.

ಆದ್ದರಿಂದ ರಾಮನವಮಿಯಲ್ಲಿ ನಡೆದ ಹಿಂಸಾಚಾರದ ವರದಿ ವಿಚಾರದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮಗಳು ತೋರಿಸುವ ಸಿನಿಕತನ ಕೂಡ ಇಂಥದೇ ವಾಡಿಕೆಯ ಭಾಗವೇ ಆಗಿದೆ. ಭಾರತ ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಮತ್ತು ಉದ್ದೇಶಿತ ಹಿಂಸಾಚಾರದ ಸ್ಥಿರ ರೂಪವನ್ನು ನೋಡುತ್ತಲೇ ಬಂದಿದೆ. ಆಕ್ರಮಣಶೀಲತೆ ಮತ್ತು ದ್ವೇಷಕ್ಕೆ ತುತ್ತಾಗುತ್ತಿರುವವರನ್ನು, ಅದಕ್ಕೆ ಅವರು ಅರ್ಹರು ಎಂಬ ಭಾವನೆಯನ್ನೇ ನಾಗರಿಕರ ಮನಸ್ಸಿನಲ್ಲಿ ತುಂಬಲಾಗುತ್ತಿದೆ.

ಕಳೆದ ಐದು ವರ್ಷಗಳಿಂದ ಸತತವಾಗಿ, ಸಿಟಿಜನ್ಸ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್ (ಸಿಜೆಪಿ), ಕೋಮು ವಿಭಜನೆಯ ವಿಷಯಗಳನ್ನು ಹೊಂದಿರುವ ‘ಆಜ್ ತಕ್’ ಕಾರ್ಯಕ್ರಮಗಳ ವಿರುದ್ಧ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರಕ್ಕೆ (ಎನ್‌ಬಿಡಿಎಸ್‌ಎ) ದೂರು ಸಲ್ಲಿಸಿದೆ. ೨೦೨೨ರ ಅಕ್ಟೋಬರ್‌ನಲ್ಲಿ, ಸುಧೀರ್ ಚೌಧರಿ ಆಯೋಜಿಸಿದ್ದ ‘ಆಜ್ ತಕ್’ನ ‘ಬ್ಲ್ಯಾಕ್ ಆ್ಯಂಡ್ ವೈಟ್ ಶೋ’ ವಿರುದ್ಧ ಸಿಜೆಪಿ ದೂರು ನೀಡಿತ್ತು. ಇದಕ್ಕೂ ಮೊದಲು, ಜನವರಿ ೨೦೨೦ರಲ್ಲಿ, ಅಯೋಧ್ಯೆ ತೀರ್ಪಿನ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ‘ಆಜ್ ತಕ್’ನ ದ್ವೇಷಪೂರಿತ ಕಾರ್ಯಕ್ರಮದ ವಿರುದ್ಧ ಸಿಜೆಪಿ ದೂರಿತ್ತು. ಆ ದೂರಿನ ಮೇಲೆ ಎನ್‌ಬಿಡಿಎಸ್‌ಎ ಕ್ರಮ ಕೈಗೊಂಡಿತ್ತು ಮತ್ತು ‘ಆಜ್ ತಕ್’ನ, ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಆ ಚರ್ಚಾ ಸಂಚಿಕೆ ತೆಗೆದುಹಾಕುವಂತೆ ವಾಹಿನಿಗೆ ಸೂಚಿಸಿತ್ತು.

(ಕೃಪೆ:cjp.org.in)

share
ತನ್ಯಾ ಅರೋರಾ
ತನ್ಯಾ ಅರೋರಾ
Next Story
X