ಮ್ಯಾನ್ಮಾರ್: ವೈಮಾನಿಕ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತ್ಯು

ಬ್ಯಾಂಕಾಕ್: ಮಿಲಿಟರಿ ವಿರುದ್ದ ಪ್ರತಿಭಟನೆ ಹತ್ತಿಕ್ಕಲು ಮಧ್ಯ ಮ್ಯಾನ್ಮಾರ್‌ನ ದೂರದ ಟೌನ್‌ಶಿಪ್‌ನ ಹಳ್ಳಿಯೊಂದರ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಜನರು ಸಾವನ್ನಪ್ಪಿದ್ದಾರೆ ಹಾಗೂ ಡಝನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸಾವು-ನೋವುಗಳ ಕುರಿತು ರೇಡಿಯೊ ಫ್ರೀ ಏಷ್ಯಾ ಹಾಗೂ ಬಿಬಿಸಿ ಬರ್ಮೀಸ್ ವರದಿ ಮಾಡಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ದೇಶದ 2ನೇ ಅತಿ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕೆ ಸುಮಾರು 110 ಕಿ.ಮೀ. ದೂರದಲ್ಲಿನ ಸಾಗಯಿಂಗ್ ಪ್ರಾಂತ್ಯದ ಪಝಿಗಿ ಗ್ರಾಮದಲ್ಲಿ ಬುಧವಾರ ಗ್ರಾಮ ಸಭೆಯ ಮೇಲೆ ಮ್ಯಾನ್ಮಾರ್‌ನ ಸೇನೆಯು ಮಾರಣಾಂತಿಕ ದಾಳಿಯನ್ನು ನಡೆಸಿದೆ. ಇದರಲ್ಲಿ ನಾಗರಿಕರು ಕೂಡ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ
Next Story





