'ಹಸಿ ಸುಳ್ಳು': ಭಾರತದ ಗಡಿಗಳು ಸುರಕ್ಷಿತ ಎಂದ ಅಮಿತ್ ಶಾ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿ

ಹೊಸದಿಲ್ಲಿ: "ಭಾರತದ ಗಡಿಗಳು ಸುರಕ್ಷಿತವಾಗಿವೆ; ಅವುಗಳನ್ನು ಅತಿಕ್ರಮಣ ಮಾಡಲು ಯಾರಿಗೂ ಸಾಧ್ಯವಿಲ್ಲ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಅರುಣಾಚಲ ಭೇಟಿ ವೇಳೆಯ ಭಾಷಣದಲ್ಲಿ ಹೇಳಿರುವ ಕುರಿತಂತೆ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವರ ಹೇಳಿಕೆ ಹಸಿ ಸುಳ್ಳು ಅಥವಾ ಅಜ್ಞಾನದ ಪರಮಾವಧಿ ಎಂದು ಅವರು ಹೇಳಿದ್ದಾರೆ. ಎರಡೂ ವಿಚಾರ ಪರಿಗಣಿಸಿದಾಗ ಅವರು ಗೃಹ ಸಚಿವರಾಗಲು ಅನರ್ಹರು ಎಂದು ಸ್ವಾಮಿ ಹೇಳಿದ್ದಾರೆ.
"ಯಾರು ಕೂಡಾ ಭಾರತೀಯ ಭೂಭಾಗದೊಳಗೆ ಪ್ರವೇಶಿಸಬಹುದು ಎಂಬಂತೆ ಇದ್ದ ಕಾಲ ಸಂದು ಹೋಗಿದೆ ಹಾಗೂ ಈಗ ಭಾರತದ ಗಡಿಯ ಮೇಲೆ ಕಣ್ಣು ಹಾಕಲು ಕೂಡ ಈಗ ಯಾರೂ ಧೈರ್ಯ ಮಾಡುವುದಿಲ್ಲ," ಎಂದು ಅರುಣಾಚಲ ಪ್ರದೇಶದ ಕಿಬಿತೂ ಎಂಬ ಗಡಿ ಗ್ರಾಮದಲ್ಲಿ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ ಉದ್ಘಾಟನೆ ವೇಳೆ ಅಮಿತ್ ಶಾ ಹೇಳಿದ್ದರು.
ಇದನ್ನೂ ಓದಿ: ಕೈ ತಪ್ಪಿದ ಟಿಕೆಟ್: ಪಕ್ಷದ ನಡೆ ನೋವು ತಂದಿದೆ ಎಂದು ಕಣ್ಣೀರಿಟ್ಟ ಉಡುಪಿ ಶಾಸಕ ರಘುಪತಿ ಭಟ್
Today’s The Hindu headlines Amit Shah stating “Indian Borders are safe; can’t be violated”. This is a blatant lie or his Himalayan ignorance. Either way he does not deserve to be Home Minister. Or better he work on the illegal dual citizenship of Bambino
— Subramanian Swamy (@Swamy39) April 11, 2023