ವರುಣಾದಲ್ಲಿ ತನ್ನ ವಿರುದ್ಧ ಸೋಮಣ್ಣ ಸ್ಪರ್ಧೆ ವಿಚಾರ: ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು: ವಸತಿ ಸಚಿವ ಸೋಮಣ್ಣರನ್ನು ತನ್ನ ವಿರುದ್ಧ ವರುಣಾದಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ''ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಸ್ವಾಗತ'' ಎಂದಷ್ಟೇ ಹೇಳಿದ್ದಾರೆ.
ಪ್ರಬಲ ನಾಯಕರ ವಿರುದ್ಧ ಪ್ರಬಲ ನಾಯಕರನ್ನೇ ಕಣಕ್ಕಿಳಿಸಲು ಬಿಜೆಪಿ ಯೋಜಿಸಿಕೊಂಡಿದ್ದು, ಲಿಂಗಾಯತ ಮತಗಳನ್ನು ಗಮನದಲ್ಲಿಟ್ಟು ಸೋಮಣ್ಣರನ್ನು ವರುಣಾದಲ್ಲಿ ಕಣಕ್ಕಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸೋಮಣ್ಣರನ್ನು ವರುಣಾ ಸೇರಿ ಚಾಮರಾಜನಗರದಿಂದಲೂ ಕಣಕ್ಕಿಳಿಸಲಾಗಿದೆ.
ಇದನ್ನೂ ಓದಿ: ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧೆ: ಆರ್.ಅಶೋಕ್ ಪ್ರತಿಕ್ರಿಯೆ
Next Story