ಕೈ ತಪ್ಪಿದ ಟಿಕೆಟ್: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ

ಕಲಬುರಗಿ: 'ನಾನು ಯಾರಿಗೂ ಮೋಸˌ ಕಳ್ಳತನ ಮತ್ತು ಲೂಟಿ ಮಾಡಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಜನರ ಕೆಲಸ ಮಾಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಕೆಲವರು ಟಿಕೆಟ್ ತಪ್ಪಿಸಿದ್ದಾರೆ. ಈ ಕಾರಣಕ್ಕೆ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ' ಎಂದು ಜೇವರ್ಗಿ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದ್ದಾರೆ.
ಬುಧುವಾರ ಪಟ್ಟಣದ ಬೂತಪುರ ಕಲ್ಯಾಣ ಮಂಟಪದಲ್ಲಿ ಕರೆದ ಬೆಂಬಲಿಗರ ಸಭೆಯಲ್ಲಿ ರಾಜೀನಾಮೆ ಘೋಷಿಸಿದರು.
ಮಂಗಳವಾರ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೇವರ್ಗಿ ಕ್ಷೇತ್ರಕ್ಕೆ ಶಿವಾನಂದ ಗೌಡ ಪಾಟೀಲ್ ಹೆಸರನ್ನು ಬಿಜೆಪಿ ಪ್ರಕಟಿಸಿದೆ.
ಬೆಂಬಲಿಗರ ಸಭೆಯಲ್ಲಿ ಪ್ರಮುಖವಾಗಿ ರಮೇಶ ಬಾಬು ವಕೀಲˌ ದಂಡಪ್ಪ ಸಾಹು ಕರಳಗೇರಿˌ ಸುರೇಶ ಸುಂಬಡˌ ಸಿದ್ದಣ್ಣ ಹೂಗಾರˌ ಸಾಯಬಣ್ಣ ದೊಡ್ಮನಿˌ ಶಿವಾನಂದ ಮಾಕಾˌ ನಾನಾಗೌಡ ಅಲ್ಲಾಪುರˌ ದೇವಿಂದ್ರಪ್ಪಗೌಡˌ ಪುಂಡಲಿಕ ಗಾಯಕವಾಡˌ ಚಂದ್ರಕಾಂತ ಕುಸ್ತಿˌ ಸೇರಿದಂತೆ ಇತರರು ಇದ್ಡರು.
Next Story





