ಕೇರಳ: ಮನೆಯಂಗಳದಲ್ಲಿ 'ಬಾಂಬ್ ತಯಾರಿಸುತ್ತಿದ್ದ' ವೇಳೆ ಸಂಭವಿಸಿದ ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ
ಗಾಯಾಳು ಯುವಕ ಆರೆಸ್ಸೆಸ್ ಕಾರ್ಯಕರ್ತ: ಸಿಪಿಐ(ಎಂ) ಆರೋಪ

ಗಾಯಾಳು ಯುವಕ ಆರೆಸ್ಸೆಸ್ ಕಾರ್ಯಕರ್ತ: ಸಿಪಿಐ(ಎಂ) ಆರೋಪ
ಕಣ್ಣೂರು: ಮಂಗಳವಾರ ಕೇರಳದ (Kerala) ತಲಶ್ಶೇರಿಯ ಎರಂಜೊಲಿಪಲಂ ಪ್ರದೇಶದ ಮನೆಯೊಂದರ ಹಿಂಬದಿಯ ಹಿತ್ತಲಿನಲ್ಲಿ ನಡೆದ ಬಾಂಬ್ ಸ್ಫೋಟವೊಂದರಲ್ಲಿ ಯುವಕನೊಬ್ಬ ತನ್ನ ಒಂದು ಕೈ ಕಳೆದುಕೊಂಡಿದ್ದಾನೆ. ಯುವಕ ಮನೆಯಂಗಳದಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿದ್ದ ಆತನನ್ನು ನಂತರ ಕೊಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಸ್ಫೋಟಕಗಳ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.
ಬಾಂಬ್ ಪಡೆ ಅಲ್ಲಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಗಾಯಾಳು ಯುವಕ ವಿಷ್ಣು ಚೇತರಿಸಿಕೊಂಡ ನಂತರ ಆತನ ವಿಚಾರಣೆಯ ನಂತರವಷ್ಟೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂಬ ಮಾಹಿತಿಯಿದೆ.
ಗಾಯಾಳು ವಿಷ್ಣು ಆರೆಸ್ಸೆಸ್ (RSS) ಕಾರ್ಯಕರ್ತ ಹಾಗೂ ಆತ ಬಾಂಬ್ ತಯಾರಿಸುತ್ತಿರುವಾಗ ಅದು ಸ್ಫೋಟಗೊಂಡಿತು ಎಂದು ಸಿಪಿಐ(ಎಂ) ಆರೋಪಿಸಿದೆ ಎಂದು mathrubhumi.in ವರದಿ ಮಾಡಿದೆ.
Next Story





