ಎನ್.ಆರ್.ರಮೇಶ್ ಗೆ ಕೈತಪ್ಪಿದ ಟಿಕೆಟ್: ಬಿಜೆಪಿಗೆ 1,250ಕ್ಕೂ ಹೆಚ್ಚು ಮಂದಿ ಸಾಮೂಹಿಕ ರಾಜೀನಾಮೆ

ಬೆಂಗಳೂರು, ಎ.12: ಬಿಜೆಪಿ ಟಿಕೆಟ್ ಹಂಚಿಕೆ ನಂತರ ಬಂಡಾಯದ ಬಿಸಿ ಹೆಚ್ಚಾಗಿದ್ದು, ಇದರ ನಡುವೆ ಇಲ್ಲಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಕೈತಪ್ಪಿದನ್ನು ವಿರೋಧಿಸಿ ಪಕ್ಕದ ಕ್ಷೇತ್ರ ಪದ್ಮನಾಭನಗರ ಕ್ಷೇತ್ರದಿಂದ 1125ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
'ನಿನ್ನೆ ಪಕ್ಷದ ವರಿಷ್ಠರು ಬಿಡುಗಡೆ ಮಾಡಿರುವ ಪಟ್ಟಿಯನ್ನು ನೋಡಿದಾಕ್ಷಣ ಆಘಾತವಾಗಿರುವ ಹಿನ್ನೆಲೆಯಲ್ಲಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್, ಕರೇಸಂದ್ರ ವಾರ್ಡ್ ಮತ್ತು ಗಣೇಶಮಂದಿರ ವಾರ್ಡಿನ 1,250ಕ್ಕೂ ಹೆಚ್ಚು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ' ಎಂದು ಯಡಿಯೂರು ವಾರ್ಡ್ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಜಿ.ಮಂಜೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





