ಬಿಜೆಪಿ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಪತ್ತೆ: ದೂರು
ಬೆಂಗಳೂರು, ಎ.12: ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಇದ್ದ ಟಾಟಾ ಏಸ್ ವಾಹನ ಪತ್ತೆಯಾಗಿದ್ದು, ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೀತಿ ಸಂಹಿತೆ ಹಿನ್ನೆಲೆ ಚುನಾವಣಾಧಿಕಾರಿಗಳು ಪರಿಶೀಲಿಸಿದಾಗ ಅನುಮತಿ ಪಡೆದ ವಾಹನ ಹಾಗೂ ಪ್ರಚಾರಕ್ಕೆ ಬಳಸುತ್ತಿದ್ದ ವಾಹನ ಬೇರೆಯಾಗಿತ್ತು. ಬಳಿಕ ನಂಬರ್ ಪ್ಲೇಟ್, ಚಾರ್ಸಿ ಸಂಖ್ಯೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ವಿಶ್ವ ಮತ್ತು ಅರ್ಜುನ್ ಎಂಬುವರ ವಿರುದ್ಧ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 1988 ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.
Next Story