'ನೀನೊಬ್ಬ ದಲ್ಲಾಳಿ': ನಿರೂಪಕ ಅಮೀಶ್ ದೇವಗನ್ ರನ್ನು ತರಾಟೆಗೆ ತೆಗೆದುಕೊಂಡ ಹಿರಿಯ ಕಾಂಗ್ರೆಸ್ ನಾಯಕ

ಹೊಸದಿಲ್ಲಿ: ತಮ್ಮನ್ನು ಅಗೌರವಯುತವಾಗಿ ನಡೆಸಿಕೊಂಡ ಸುದ್ದಿ ನಿರೂಪಕ ಅಮೀಶ್ ದೇವಗನ್ ಅವರನ್ನು ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಡಾ. ಉದಿತ್ ರಾಜ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ನೀವು ನನ್ನನ್ನು ಉದಿತ್ ರಾಜ್, ಉದಿತ್ ರಾಜ್ ಎಂದು ಕರೆಯುತ್ತಿದ್ದೀರಾ, ನಾನು ನಿಮ್ಮ ಸೇವಕನೇ?" ಎಂದು ಉದಿತ್ ರಾಜ್ ಅಮೀಶ್ ದೇವನ್ ಅವರನ್ನು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ.
ಅಷ್ಟೇ ಅಲ್ಲದೆ ಅಮೀಶ್ ಅವರನ್ನು ದಲ್ಲಾಳಿ ಎಂದೂ ಉದಿತ್ ರಾಜ್ ಬಣ್ಣಿಸಿದರು. "ತುಮ್ ಹೋ ಕೌನ್ ಯಾರ್? ತುಮ್ ದಲಾಲ್ ಆದ್ಮಿ ಹೋ," (ನೀನು ಯಾರು, ನೀನೊಬ್ಬ ದಲ್ಲಾಳಿ) ಎಂದು ಉದಿತ್ ರಾಜ್ ಹೇಳುವುದು ಕೇಳಿಸುತ್ತದೆ.
— Dr. Udit Raj (@Dr_Uditraj) April 11, 2023
Next Story







