ನಿವೃತ್ತಿ ವೇತನ, ಖಾಯಮಾತಿಗಾಗಿ ತೀವ್ರ ಹೋರಾಟ: ಮಾಲಿನಿ ಮೇಸ್ತ
ಅಕ್ಷರ ದಾಸೋಹ ನೌಕರರ ಉಡುಪಿ ಜಿಲ್ಲಾ ಸಮ್ಮೇಳನ ಉದ್ಘಾಟನೆ

ಉಡುಪಿ: ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ವೇತನ, ಖಾಯ ಮಾತಿ ಹಾಗೂ ಕನಿಷ್ಠ ಕೂಲಿಗಾಗಿ ಸಿಐಟಿಯು ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಹೇಳಿದ್ದಾರೆ.
ಉಡುಪಿ ಬನ್ನಂಜೆ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ಇಂದು ನಡೆದ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ನೌಕರರ ಸತತ ಹೋರಾಟಗಳಿಂದ ವೇತನದಲ್ಲಿ ಸ್ವಲ್ಪಮಟ್ಟದಲ್ಲಿ ಏರಿಕೆ ಮಾಡಿ ಕೊಳ್ಳಲಾಗಿದೆ ಈ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಿ ನ್ಯಾಯ ಪಡೆಯಬೇಕು ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಮುಖಂಡ ಶಶಿಧರ ಗೊಲ್ಲ ಮಾತನಾಡಿದರು. ಅಧ್ಯಕ್ಷತೆ ಯನ್ನು ಸಂಘದ ಜಿಲ್ಲಾ ಅಧ್ಯಕ್ಷ ಜಯಶ್ರೀ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ವರದಿ ಲೆಕ್ಕ ಪತ್ರ ಮಂಡಿಸಿದರು.
ವರದಿ ಮೇಲೆ ಚರ್ಚೆ ನಡೆಸಿ ಅಂಗೀಕರಿಸಿದರು. ಸಮ್ಮೇಳನದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾ ಯಿತು. ಅಧ್ಯಕ್ಷರಾಗಿ ಜಯಶ್ರೀ, ಪ್ರಧಾನ ಕಾರ್ಯದರ್ಶಿಯಾಗಿ ಸುನಂದ ಕೋಶಾಧಿಕಾರಿಯಾಗಿ ಕಮಲ ಆಯ್ಕೆ ಗೊಂಡರು. ಪದಾಧಿಕಾರಿಗಳು ಸೇರಿದಂತೆ 19 ಮಂದಿ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಮುಖಂಡರಾದ ಕಮಲ, ಸಿಂಗಾರಿ ನಾವುಂದ, ನಾಗರತ್ನ ಕುಂದಾಪುರ, ರತ್ನ ಉಡುಪಿ, ಜಯಶ್ರೀ ಕಾರ್ಕಳ, ಜ್ಯೋತಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.