ನ್ಯೂಯಾರ್ಕ್ ಪೊಲೀಸ್ ಪಡೆಗೆ ರೊಬೊಟ್ ಶ್ವಾನ ಸೇರ್ಪಡೆ

ನ್ಯೂಯಾರ್ಕ್, ಎ.12: ಅಪರಾಧ ಕೃತ್ಯಗಳ ವಿರುದ್ಧದ ಕಾರ್ಯಾಚರಣೆಗೆ ನೆರವಾಗಲು ನ್ಯೂಯಾರ್ಕ್ ಪೊಲೀಸ್ ಇಲಾಖೆಯು `ಡಿಜಿಡಾಗ್' ಎಂಬ ಹೆಸರಿನ ರೊಬೊಟ್ ಪೊಲೀಸ್ ಶ್ವಾನವನ್ನು ಸೇರ್ಪಡೆಗೊಳಿಸಿದೆ ಎಂದು ವರದಿಯಾಗಿದೆ.
`ಹ್ಯೂಂಡೈ'ಯ ಸಹಸಂಸ್ಥೆ ಬೋಸ್ಟನ್ ಡೈನಾಮಿಕ್ಸ್ ಈ ರಿಮೋಟ್ ನಿಯಂತ್ರಣದ ರೊಬೊಟ್ ನಾಯಿಯನ್ನು ಉತ್ಪಾದಿಸಿದ್ದು ನ್ಯೂಯಾರ್ಕ್ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ರೊಬೊಟ್ ನಾಯಿಯ ಮಾದರಿಯನ್ನು ಅನಾವರಣಗೊಳಿಸಲಾಗಿದ್ದು ನಗರದ ಮೇಯರ್ ಎರಿಕ್ ಆಡಮ್ಸ್ ಉಪಸ್ಥಿತರಿದ್ದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ರೊಬೊಟ್ ನಾಯಿ ಮನುಷ್ಯರಿಗೆ ನೆರವಾಗಲಿದೆ. ಸುರಂಗ ಮಾರ್ಗಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಗಸ್ತು ತಿರುಗುವುದು, ನಿರ್ಮಾಣ ಸ್ಥಳಗಳ ಮೇಲ್ವಿಚಾರಣೆ ನಡೆಸಲು ಈ ನಾಯಿಯನ್ನು ಬಳಸಬಹುದು. ಇದು ಜನರೊಂದಿಗೆ ಸಂವಹನವನ್ನೂ ನಡೆಸುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
Next Story