ಐಪಿಎಲ್: ಚೆನ್ನೈ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ ರೋಚಕ ಜಯ
ಜೋಸ್ ಬಟ್ಲರ್ ಅರ್ಧಶತಕ

ಚೆನ್ನೈ, ಎ.12: ಡೆವೊನ್ ಕಾನ್ವೇ(50 ರನ್, 38 ಎಸೆತ) ಅರ್ಧಶತಕ, ನಾಯಕ ಎಂ.ಎಸ್. ಧೋನಿ(ಔಟಾಗದೆ 32 ರನ್, 17 ಎಸೆತ) ಹಾಗೂ ರವೀಂದ್ರ ಜಡೇಜ(ಔಟಾಗದೆ 25 ರನ್, 15 ಎಸೆತ) 7ನೇ ವಿಕೆಟಿಗೆ ಸೇರಿಸಿದ 59 ರನ್ ಜೊತೆಯಾಟದ ಹೊರತಾಗಿಯೂ ಐಪಿಎಲ್‌ನ 17ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 3 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.
ಗೆಲ್ಲಲು 176 ರನ್ ಗುರಿ ಪಡೆದಿದ್ದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೆನ್ನೈ ಪರ ಅಜಿಂಕ್ಯ ರಹಾನೆ(31 ರನ್, 19 ಎಸೆತ)ಹಾಗೂ ಕಾನ್ವೇ 2ನೇ ವಿಕೆಟಿಗೆ 68 ರನ್ ಜೊತೆಯಾಟ ನಡೆಸಿದ್ದಾರೆ.
ರಾಜಸ್ಥಾನದ ಪರ ಆರ್.ಅಶ್ವಿನ್(2-25) ಹಾಗೂ ಯಜುವೇಂದ್ರ ಚಹಾಲ್(2-27)ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(52 ರನ್, 36 ಎಸೆತ)ನೇತೃತ್ವದಲ್ಲಿ ಬ್ಯಾಟರ್‌ಗಳ ಸಂಘಟಿತ ಪ್ರಯತ್ನದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 175 ರನ್ ಕಲೆ ಹಾಕಿದೆ.