ಅಮೆರಿಕದ ಸೇನೆಯ ರಹಸ್ಯ ಸೋರಿಕೆ ಆರೋಪ: 21 ವರ್ಷದ ಉದ್ಯೋಗಿಯ ಬಂಧನ

ವಾಶಿಂಗ್ಟನ್: ಅಮೆರಿಕದ ಸೇನೆಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ 21 ವರ್ಷದ ಏರ್‌ಮ್ಯಾನ್ ನನ್ನು ಬಂಧಿಸಲಾಗಿದೆ.
ಒಂದು ದಶಕದಲ್ಲಿ ಅತಿ ದೊಡ್ಡ ಅಮೆರಿಕದ ಗುಪ್ತಚರ ಸೋರಿಕೆ ಹೇಗಾಗಿದೆ ಎಂಬ ಕುರಿತು ವಿವರಿಸಲು ಬೈಡನ್ ಆಡಳಿತಕ್ಕೆ ಕಷ್ಟಕರವಾಗಿದ್ದು, ಈ ಘಟನೆಯು ಅಮೆರಿಕಕ್ಕೆ ತೀವ್ರ ಮುಜುಗರ ತಂದಿದೆ.
ಶುಕ್ರವಾರದಂದು ತ್ವರಿತ ವಿಚಾರಣೆಯ ಭರವಸೆಯೊಂದಿಗೆ ಮ್ಯಾಸಚೂಸೆಟ್ಸ್‌ನ ಡೈಟನ್‌ನ ಜ್ಯಾಕ್ ಟೀಕ್ಸೀರಾ ಅವರನ್ನು ಎಫ್‌ಬಿಐ ಗುರುವಾರ ಬಂಧಿಸಿತು.
ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಅನಧಿಕೃತವಾಗಿ ತೆಗೆದುಹಾಕಿದ್ದು ಹಾಗೂ ಪ್ರಸರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ 21ರ ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಹೇಳಿದರು.
ಬಂಧಿತ ಟೀಕ್ಸೀರಾ ಸಾಕಷ್ಟು ಕಿರಿಯ ಉದ್ಯೋಗಿಯಾಗಿದ್ದು, ಸೇವಾ ದಾಖಲೆಯ ಪ್ರಕಾರ ಆತ 2019 ರಲ್ಲಿ ಏರ್ ನ್ಯಾಷನಲ್ ಗಾರ್ಡ್‌ಗೆ ಸೇರಿದ್ದ.
Next Story





