ಬಾಲಿವುಡ್ ನಟಿಗೆ ಕಿರುಕುಳ: ಆರೋಪಿ ವಿರುದ್ಧ ಪ್ರಕರಣ ದಾಖಲು

ಮುಂಬೈ: ಬಾಲಿವುಡ್ ನಟಿಯೊಬ್ಬರು (ಗುರುತನ್ನು ಬಹಿರಂಗಪಡಿಸಲಾಗಿಲ್ಲ) ಕಿರುಕುಳಕ್ಕೊಳಗಾಗಿದ್ದು ಫೈನಾನ್ಸರ್ ವಿರುದ್ಧ ನಟಿ ದೂರು ದಾಖಲಿಸಿದ್ದಾಳೆ. ಅದೇ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಪ್ರಕಾರ ಆರೋಪಿ ವಿಡಿಯೋಗಾಗಿ ಹಣ ನೀಡುವ ನೆಪದಲ್ಲಿ ನಟಿಗೆ ಕಿರುಕುಳ ನೀಡಿದ್ದಾನೆ. ಆದರೆ, ಇದಕ್ಕೆ ನಟಿ ಆಕ್ರೋಶ ವ್ಯಕ್ತಪಡಿಸಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದ.
ಆರೋಪಿ ಆ ನಂತರ ನಟಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದ.
ಮುಂಬೈ ಪೊಲೀಸರು ಐಪಿಸಿ 354, 506,509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Next Story





