ಯಡಿಯೂರಪ್ಪ ತನ್ನ ಪುತ್ರರಿಗೆ ಟಿಕೆಟ್ ಕೇಳಿಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಘವೇಂದ್ರ ಹಾಗೂ ನನಗೆ ಟಿಕೆಟ್ ನೀಡುವಂತೆ ಬಿಎಸ್ ಯಡಿಯೂರಪ್ಪ ಕೇಳಿರಲಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ANI ಜೊತೆ ಮಾತನಾಡಿದ ವಿಜಯೇಂದ್ರ, “ನನಗಾಗಲಿ, ರಾಘವೇಂದ್ರಗೆ ಆಗಲಿ ಟಿಕೆಟ್ ನೀಡುವುದು ಹೈಕಮಾಂಡ್ ನಿರ್ಧಾರ, ಅದಕ್ಕಾಗಿ ಯಡಿಯೂರಪ್ಪ ಟಿಕೆಟ್ ಕೇಳಿಲ್ಲ, ಯಡಿಯೂರಪ್ಪ ತನ್ನ ಪುತ್ರರಿಗೆ ಟಿಕೆಟ್ ಕೇಳಿಲ್ಲ, ಅವರು ಯಾವತ್ತೂ ತಮ್ಮ ಕುಟುಂಬದ ಬಗ್ಗೆ ಚಿಂತೆ ಮಾಡಿಲ್ಲ, ಅವರೇ ಬೆಳೆಯಬೇಕು ಅನ್ನುವುದು ಬಿಎಸ್‌ವೈ ಆಸೆ, ನಾವು ನಮ್ಮ ಬಲದಲ್ಲಿ ಬೆಳೆಯಬೇಕು, ನಾವು ಹೋರಾಡಬೇಕು ಅನ್ನುವುದು ಅವರ ಬಯಕೆ” ಎಂದು ಹೇಳಿದ್ದಾರೆ.
ಯಡಿಯೂರಪ್ಪರ ಮಗ ಎನ್ನುವ ಕಾರಣಕ್ಕೆ ನನಗೆ ವಿಶೇಷ ಸವಲತ್ತು ಇಲ್ಲ. ರಾಜ್ಯದ ಯುವಜನತೆ ನನ್ನನ್ನು ಬೆಂಬಲಿಸುತ್ತಾರೆ, ಪ್ರೀತಿಸುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ
ಬಿಎಸ್‌ವೈ ಅವರ ಕ್ಷೇತ್ರವಾದ ಶಿಕಾರಿಪುರದಲ್ಲಿ ಬಿವೈ ವಿಜಯೇಂದ್ರ ಸ್ಪರ್ಧಿಸುವ ವಿಚಾರದ ಕುರಿತಂತೆ ಸಾಕಷ್ಟು ಚರ್ಚೆಗಳಾಗಿದ್ದವು. ಕುಟುಂಬ ರಾಜಕಾರಣದ ಬಗ್ಗೆ ಅಸಮಾಧಾನ ಎದ್ದಿತ್ತು. ಈ ನಡುವೆ, ತನಗೆ ಟಿಕೆಟ್ ನೀಡಲು ಬಿಎಸ್‌ವೈ ಅಲ್ಲ ಕಾರಣ ಎಂದು ವಿಜಯೇಂದ್ರ ಹೇಳಿದ್ದಾರೆ.





