ಎ.22ರಿಂದ ಕಾಪು ಬೀಚ್ ಉತ್ಸವ

ಉಡುಪಿ, ಎ.14: ವಾಕಿಂಗ್ ಡೈರೆಕ್ಟರಿ ಈವೆಂಟ್ ಮ್ಯಾನೇಜ್ಮೆಂಟ್ ವತಿ ಯಿಂದ ಕಾಪು ಬೀಚ್ ಉತ್ಸವವನ್ನು ಎ.22 ರಿಂದ 26ರವರೆಗೆ ಹಮ್ಮಿಕೊಳ್ಳ ಲಾಗಿದೆ ಎಂದು ಆಯೋಜಕ ಆರ್.ಡಿ.ಶೆಣೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ, ಸಾಂಸ್ಕೃತಿಕ, ಕೃಷಿ ಮೇಳ, ಫಲಪುಷ್ಪಪ್ರದರ್ಶನ, ಪೆಟ್ ಶೋ, ಚಿತ್ರಕಲಾ ಪ್ರದರ್ಶನ, ಮರಳು ಕಲಾಕೃತಿಗಳು ಉತ್ಸವದಲ್ಲಿ ಇರಲಿವೆ. ನೂರು ಮಾರಾಟ ಮಳಿಗೆಗಳು ತೆರೆಯ ಲಾಗುವುದು. ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಉತ್ಸವ ನಡೆಯಲಿದೆ. ಸಂಜೆ 6ರಿಂದ 10 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಯೋಜಕ ಗಣೇಶ್ ಸುನಂದರಾಜ್ ಉಪಸ್ಥಿತರಿದ್ದರು.
Next Story