ನಮಗೆ ಬಿಜೆಪಿ ಎದುರಾಳಿ ಹೊರತು ಅಭ್ಯರ್ಥಿಯಲ್ಲ: ಗೋಪಾಲ ಪೂಜಾರಿ

ಬೈಂದೂರು : ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರದಿಂದ ಸೋಲು ಅನುಭವಿಸಬೇಕಾಯಿತು. ಈ ಅಪಪ್ರಚಾರಕ್ಕೆ ಈ ಬಾರಿಯ ಗೆಲುವಿನ ಮೂಲಕ ತಕ್ಕ ಉತ್ತರ ನೀಡಬೇಕಾಗಿದೆ. ಅದಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕಾಗಿದೆ. ಅಭ್ಯರ್ಥಿ ಯಾರೇ ಆಗಿರಲಿ, ನಮಗೆ ಬಿಜೆಪಿಯೇ ಎದುರಾಳಿ ಎಂದು ಮಾಜಿ ಶಾಸಕ, ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ನಡೆದ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಉತ್ತಮ ವಾತಾವರಣವಿದ್ದು, ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಆಗಬೇಕಾಗಿದೆ. ನಾನು ಸೋತರೂ, ಕಾರ್ಯ ಕರ್ತರು ನನ್ನನ್ನು ಕೈಬಿಡಲಿಲ್ಲ. ಅದೇ ನನ್ನ ಬಲ. ಅವರಿಗಾಗಿ ಮತ್ತೆ ಚುನಾವಣೆ ನಿಂತಿದ್ದು, ಗೆಲ್ಲುವ ಮೂಲಕ ನಿಮ್ಮ ಸೇವೆ ಮಾಡುವ ಆಶಯ ನನ್ನದು. ಎ.18 ರಂದು ನಾಮಪತ್ರ ಸಲ್ಲಿಸಲಿದ್ದು, ಆ ದಿನ 10 ಸಾವಿರಕ್ಕೂ ಮಿಕ್ಕಿ ಜನ ಸೇರ ಬೇಕಾಗಿದೆ ಎಂದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ ಮಾತನಾಡಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಪಕ್ಷದ ಪ್ರಮುಖರಾದ ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ವಾಸುದೇವ ಯಡಿಯಾಳ್, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ದೇವಾನಂದ ಶೆಟ್ಟಿ ಹಳ್ನಾಡು, ಸಂಪಿಗೇಡಿ ಸಂಜೀವ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಜಯರಾಮ ನಾಯ್ಕ್, ಶೇಖರ್ ಪೂಜಾರಿ, ದಸ್ತಗೀರಿ ಸಾಹೇಬ್, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಅನಂತ ಮೊವಾಡಿ, ರಮೇಶ್ ಗಾಣಿಗ, ವಿಜಯ ಕುಮಾರ್ ಶೆಟ್ಟಿ, ಗೌರಿ ದೇವಾಡಿಗ, ವಂಡಬಳ್ಳಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.







