ಅಂಬೇಡ್ಕರ್ ಜಯಂತಿ ಆಚರಣೆ: ರ‍್ಯಾಲಿ, ಬಹಿರಂಗ ಸಮಾವೇಶ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿ ಇವರ ಆಶ್ರಯ ದಲ್ಲಿ ಮಹಾನಾಯಕ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ 132 ನೇ ಜಯಂತಿ ದಿನಾಚರಣೆಯನ್ನು ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಕಳ, ಉಡುಪಿ, ಶಿರೂರು, ಬೈಂದೂರಿನಿಂದ ಹೊರಟ ರ‍್ಯಾಲಿಯು ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಒಟ್ಟಾಗಿ ಬಹಿರಂಗ ಸಮಾವೇಶ ನಡೆಯಿತು. ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಅಂಬೇಡ್ಕರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮುಖ್ಯ ಅಥಿಗಳಾಗಿ ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ ಗುಡ್ಡೆಯಂಗಡಿ, ಮಹಿಳಾ ಒಕ್ಕೂಟದ ಸಂಚಾಲಕರಾದ ಮಹಾಲಕ್ಷ್ಮಿ ಬೈಂದೂರು, ಬೈಂದೂರು ತಾಲ್ಲೂಕು ಸಂಚಾಲಕ ಸಂದೇಶ್ ನಾಡ, ಉಡುಪಿ ತಾಲೂಕು ಸಂಚಾಲಕ ಪ್ರಶಾಂತ, ಹೆಬ್ರಿ ತಾಲೂಕು ಸಂಚಾಲಕ ರಾಘವೇಂದ್ರ, ಹೆಬ್ರಿಯ ಮಹಿಳಾ ಸಂಚಾಲಕಿ ಉಮಾಶ್ರೀ ಹೆಬ್ರಿ, ಕಾರ್ಕಳ ತಾಲೂಕು ಮಹಿಳಾ ಸಂಚಾಲಕಿ, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಿಠಲ್ ಸಾಲಿಕೇರಿ ಹಾಗೂ ಸಂಘಟನೆಯ ವಿಜಯ್ ಕೆಎಸ್, ಚಂದ್ರಮ ತಲ್ಲೂರು, ಗೊಪಾಲ್ ವಿ, ಸುರೇಶ್ ಬಾಬು, ಹಿಮಕರ, ಉದಯ್ ಉಪ್ಪಿನಕುದ್ರು, ಶರತ್ ಉಪ್ಪಿನಕುದ್ರು, ಸತೀಶ್ ಸುರ್ಗೊಳಿ ಉಪಸ್ಥಿತಿರಿದ್ದರು. ರಾಘವೇಂದ್ರ ಶೀರೂರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು.







