ಉಡುಪಿ: ಯಕ್ಷಗಾನ ಕಲಾವಿದರಿಗೆ ಸನ್ಮಾನ

ಉಡುಪಿ, ಎ.14:ಹಾದಿಗಲ್ಲು ಶ್ರೀಅಭಯಲಕ್ಷ್ಮೀನರಸಿಂಹ ದೇವಾಲಯದ ವರ್ಧಂತ್ಯುತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ, ಸಾಂಸ್ಕತಿಕ ಹಾಗೂ ಕಲಾ ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ ಇದರ ಅಧ್ಯಕ್ಷ ಕೆ. ಅಜಿತ್ ಕುಮಾರ್ ಹಾಗೂ ಹಿರಿಯ ಯಕ್ಷ ಗಾನ ಕಲಾವಿದ ಶಿವಶಂಕರ ಕೆ.ಎಸ್.ಭಟ್ ಇವರನ್ನು ಸನ್ಮಾನಿಸಲಾಯಿತು.
ಇಬ್ಬರಿಗೂ ‘ಶ್ರೀವಾದಿರಾಜಾನುಗ್ರಹ’ ಪ್ರಶಸ್ತಿಯೊಂದಿಗೆ ತಲಾ 10,000 ರೂ. ನಿಧಿಯನ್ನು ನೀಡಿ ದೇವಳದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ.ಭಟ್, ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ ಹಾಗೂ ಭಾಗವತ ರಾದ ಕೆ.ಜೆ. ಗಣೇಶ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನರಸಿಂಹ ತುಂಗರ ನಿರ್ದೇಶನದಲ್ಲಿ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಬಾಲ ಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ ಪ್ರಸ್ತುತಗೊಂಡಿತು.
Next Story





