ಆಯುಷ್ ಔಷಧಗಳ ಖರೀದಿ ವಿನಾಯಿತಿ: 30 ಕೋಟಿ ರೂ.ಗೂ ಹೆಚ್ಚು ಅಕ್ರಮ ಆರೋಪ

ಬೆಂಗಳೂರು: ಆಯುಷ್ ಔಷಧಗಳ ಉತ್ಪಾದನೆ ಮಾಡದ ಕಂಪೆನಿಯೊಂದಕ್ಕೆ ಅವಕಾಶ ನೀಡಿ ಮತ್ತು ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಅಂದಾಜು 30 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ನಡೆಸಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಸ್ವಂತ ತಯಾರಿಕೆ ಘಟಕವನ್ನೇ ಹೊಂದಿಲ್ಲದ ಕಂಪೆನಿಗೆ ಕೆಟಿಪಿಪಿ ನಿಯಮ 4ಜಿ ವಿನಾಯಿತಿ ಪರಿಗಣಿಸುವುದು ಸೂಕ್ತವಲ್ಲ, ಟೆಂಡರ್ ಮೂಲಕವೇ ಖರೀದಿಸಬೇಕು ಎಂದು ತಾಂತ್ರಿಕ ಸಮಿತಿ ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ತರಾತುರಿಯಲ್ಲಿ ಸರಬರಾಜು ಆದೇಶವನ್ನು ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಅಲ್ಲದೇ 2018ನೇ ಸಾಲಿನಿಂದ 2021ನೇ ಸಾಲಿನವರೆಗೂ ಎಚ್ಎಲ್ಎಲ್ ಸಂಸ್ಥೆಯಿಂದ ಆಯುಷ್ ಔಷಧಗಳನ್ನು ಖರೀದಿಸಿರಲಿಲ್ಲ. ಆದರೆ 2021ರ ನಂತರ ಆಯುಷ್ ಇಲಾಖೆಗೆ ಬಂದ ಮುಖ್ಯಸ್ಥರು ತಾಂತ್ರಿಕ ಸಮಿತಿಯ ವರದಿಯನ್ನೇ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ ಎಂಬ ಗುರುತರವಾದ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ‘‘ಣhe-ಜಿiಟe.iಟಿ’’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ಮತ್ತೊಂದು ವಿಶೇಷವೆಂದರೇ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಬಿಡುಗಡೆಯಾದ ಅನುದಾನದ ಪೈಕಿ ಬಹುಪಾಲ ಅನುದಾನವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆ ಪಾಲಾಗಿದೆ. ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಅಂದಾಜು 5 ಕೋಟಿ ರೂ.ಗೂ ಹೆಚ್ಚು ಔಷಧಗಳನ್ನು ಖರೀದಿಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
ನಿಗದಿಯಾದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಎಚ್ಎಲ್ಎಲ್ ಸಂಸ್ಥೆಯ ಮೂಲಕ ಖರೀದಿಸಿರುವ ಆಯುಷ್ ಇಲಾಖೆಯ ಮುಖ್ಯಸ್ಥರು ಸರಕಾರಕ್ಕೆ ಸುಮಾರು 2 ಕೋಟಿ ರೂ.ಗೂ ಹೆಚ್ಚು ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ''the-file.in''ಗೆ ಮಾಹಿತಿ ನೀಡಿದ್ದಾರೆ.
ಎಚ್ಎಲ್ಎಲ್ ಸಂಸ್ಥೆಯ ಕಾರ್ಯಚಟು ವಟಿಕೆಗಳು, ವಾರ್ಷಿಕ ವಹಿವಾಟು, ತಯಾರಿಕೆ ಸಾಮರ್ಥ್ಯ, ಮಾರುಕಟ್ಟೆ ಅನುಭವ ಇತ್ಯಾದಿಗಳನ್ನು ಪರಿಶೀ ಲಿಸದೆಯೇ ಈ ಸಂಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರಕ್ಕೆ ಸುಳ್ಳು ವರದಿ ನೀಡಿದೆ,’ ಎಂದು ಆಯುಷ್ ಇಲಾಖೆಯ ಉನ್ನತ ಅಧಿಕಾರಿ ಯೊಬ್ಬರು ಹೇಳುತ್ತಾರೆ.
ಎಚ್ಎಲ್ಎಲ್ ಸಂಸ್ಥೆಯ ವಿರುದ್ಧ ಹಲವು ದೂರುಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಆದರೆ ಈ ಬಗ್ಗೆ ಯಾವುದೇ ತನಿಖೆ ಮಾಡಿಲ್ಲ. ಎಚ್ಎಲ್ಎಲ್ ಸಂಸ್ಥೆಯಿಂದ 13 ಕೋಟಿ ರೂ., 2023-24ನೇ ಸಾಲಿಗೆ 29.83 ಕೋಟಿ ರೂ.ವೆಚ್ಚದ ಔಷಧಗಳನ್ನು ಖರೀದಿಸಲು ಕೆಟಿಪಿಪಿ ನಿಯಮ 4ಜಿ ಅನ್ವಯ ವಿನಾಯಿತಿ ನೀಡಬೇಕು ಎಂದು ಆಯುಷ್ ಇಲಾಖೆಯ ಆಯುಕ್ತರು 2022ರ ಅಕ್ಟೊಬರ್ 17ರಂದು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಪ್ರಸ್ತಾವವನ್ನು ಪರಿಶೀಲಿಸಲು 2022ರ ಡಿಸೆಂಬರ್ 30ರಂದು ಹೆಚ್ಚುವರಿ ಮಾಹಿತಿ ಕೋರಿತ್ತು. ಆದರೆ ಆಯುಕ್ತರು ಸಮರ್ಪಕ ಮಾಹಿತಿ ನೀಡದ ಕಾರಣ ಆರ್ಥಿಕ ಇಲಾಖೆಯು 2023-24ನೇ ಸಾಲಿನ 4ಜಿ ವಿನಾಯಿತಿ ಪ್ರಸ್ತಾವವನ್ನು ಪರಿಗಣಿಸಿರಲಿಲ್ಲ. 2023-24ನೇ ಸಾಲಿಗೆ ಇಲಾಖೆಗೆ ಅಗತ್ಯವಾದ ಔಷಧಗಳನ್ನು ಟೆಂಡರ್ ಮೂಲಕ ಖರೀದಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿತ್ತು ಎಂದು ಗೊತ್ತಾಗಿದೆ.
ಸರಕಾರದಿಂದ ಪ್ರಸ್ತಾವ ತಿರಸ್ಕೃತಗೊಂಡರೂ ಸಹ ಆಯುಷ್ ಇಲಾಖೆಯ ಆಯುಕ್ತರು ಕಂಪೆನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಈಗಾಗಲೇ ಮುಕ್ತಾಯಗೊಳಿಸಿದ್ದ ಕಡತವನ್ನು ರೀ ಕಾಲ್ ಮಾಡಿಸಿದ್ದರು. ಆಯುಕ್ತರ ಮೂಲ ಪ್ರಸ್ತಾವದಲ್ಲಿ ಪ್ರಸ್ತಾಪಿಸಲಾಗಿದ್ದ
ಇನ್ನಿತರ 4 ಸಂಸ್ಥೆಗಳನ್ನು 4ಜಿ ವಿನಾಯಿತಿಗೆ ಪರಿಗಣಿಸಿರಲಿಲ್ಲ. ಎಚ್ಎಲ್ಎಲ್ ಸಂಸ್ಥೆಯಿಂದ 13 ಕೋಟಿ ರೂ. ವೆಚ್ಚದ ಆಯುಷ್ ಔಷಧಗಳನ್ನು ಖರೀದಿಸಲು ಆರ್ಥಿಕ ಇಲಾಖೆಯು 2023ರ ಮಾರ್ಚ್ 23ರಲ್ಲಿ ಅಧಿಸೂಚನೆ (ಆಇ/78/ವೆಚ್ಚ/12) ಹೊರಡಿಸಿದೆ. ಅದೇ ರೀತಿ ಕೆಟಿಪಿಪಿ ನಿಯಮ 4ಜಿ ಅನ್ವಯ ವಿನಾಯಿತಿ ಆದೇಶವನ್ನೂ ಹೊರಡಿಸಿದೆ. ಆರ್ಥಿಕ ಇಲಾಖೆಯ ಅಧಿಸೂಚನೆ ಅನ್ವಯ ಸರಕಾರವು (ಆಕುಕ/331/ಪಿಐಎಂ/2022) 2023ರ ಮಾರ್ಚ್ 27ರಂದು ಆದೇಶ ಹೊರಡಿಸಿರುವುದು ತಿಳಿದು ಬಂದಿದೆ.
ಈ ಪ್ರಕರಣದ ಕುರಿತು ಕಡತ ಸಂಖ್ಯೆ ಆಯುಷ್ /01/ಸಂಗ್ರಹಣ/21-22, 02/ಸಂಗ್ರಹಣ/22-23, ಸಂಖ್ಯೆ 10/ಸಂಗ್ರಹಣ/23-24, ಸಂಖ್ಯೆ ಆಕುಕ/132/ಪಿಐಎಂ/2021 ಭಾಗ-2, ಆಕುಕ/132/ಪಿಐಎಂ/2021/ಭಾಗ 1, ಆಕುಕ/147/ಪಿಐಎಂ/2022 (ಇಆ), ಆಕುಕ/331/ಪಿಐಎಂ/2022, ಆಇ/119/ವೆಚ್ಚ-12/2022 (ಇಆ), ಆಇ/781/ವೆಚ್ಚ-12/2022, ಆರೋಗ್ಯ ಕುಟುಂಬ ಕಲ್ಯಾಣ ಸಚಿವರ ಟಿಪ್ಪಣಿ ಸಂಖ್ಯೆ ಆಕು,/ಆಕಾ/2442/2022 ದಿನಾಂಕ 09.05.22 ಕಡತಗಳನ್ನು ಪರಿಶೀಲಿಸಬೇಕು ಎನ್ನುತ್ತಾರೆ ಇಲಾಖೆಯ ಮತ್ತೊಬ್ಬ ಅಧಿಕಾರಿ.







