ಉಡುಪಿ: ಗಾಂಜಾ ಮಾರಾಟ; ಓರ್ವನ ಬಂಧನ

ಉಡುಪಿ, ಎ.14: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಓರ್ವನನ್ನು ಉಡುಪಿ ಸೆನ್ ಪೊಲೀಸರು ಎ.13ರಂದು ಮಧ್ಯಾಹ್ನ ವೇಳೆ ಕೊಡವೂರು ಗ್ರಾಮದ ಕಲ್ಲಮಠ ದೇವಸ್ಥಾನದ ಬಳಿ ಬಂಧಿಸಿದ್ದಾರೆ.
ಕೊಡವೂರು ನಿವಾಸಿ ಭವನ್ ಶಂಕರ್ (43) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 1 ಕೆ.ಜಿ. 82 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್, 2700ರೂ. ಹಣವನ್ನು ವಶವಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story