ರಾಜ್ಯಕ್ಕೆ ಗುಜರಾತ್ ಮೆಣಸಿನಕಾಯಿ ಲಗ್ಗೆ, ರೈತರ ಆತಂಕ: ಬಿಜೆಪಿ ವಿರುದ್ಧ ಕಾಂಗ್ರೆಸ್, ಜೆಡಿಎಸ್ ವಾಗ್ದಾಳಿ

ಬೆಂಗಳೂರು, ಎ. 14: ರಾಜ್ಯದಲ್ಲಿ ಕೆಎಂಎಫ್ ನಂದಿನಿ ಹಾಲು ಹಾಗೂ ಅಮುಲ್ ವಿವಾದ ನಡುವೆ ಇದೀಗ ಗುಜರಾತ್ ಮೆಣಸಿನಕಾಯಿ ನಾಡಿನ ವಿವಿಧ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವುದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಗುಜರಾತಿನಲ್ಲಿ ಪುಷ್ಪಲಾಲಿ ಎಂದು ಕರೆಯಲ್ಪಡುವ ಮೆನಸಿನಕಾಯಿ ಏಷ್ಯಾದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20,000 ಕ್ವಿಂಟಲ್ ಗುಜರಾತಿ ಮೆಣಸಿನಕಾಯಿ ಮಾರಾಟವಾಗಿದೆ.
ಪುಷ್ಪ ಸ್ಥಳೀಯ ಡಬ್ಬಿ ಮತ್ತು ಕಡ್ಡಿ ತಳಿಗಳಿಗೆ ಪ್ರತಿ ಸ್ಪರ್ಧಿಯಲ್ಲದಿದ್ದರೂ, ಗುಜರಾತ್ ತಳಿಯ ದೊಡ್ಡ ಪ್ರಮಾಣದ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ. ಪುಷ್ಪ ಮೆಣಸಿನಕಾಯಿಗಳು ಸ್ಥಳೀಯ ತಳಿಗಳಿಗಿಂತ ಕೆಂಪಾಗಿ ಕಾಣುತ್ತವೆ, ಆದರೂ ಅವುಗಳು ತಮ್ಮ ಬಣ್ಣವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ ಎನ್ನಲಾಗಿದೆ.
ಇನ್ನೂ, ಕನಿಷ್ಠ 70 ಮೆಣಸಿನಕಾಯಿ ಮಾರಾಟಗಾರರು ಮಾರುಕಟ್ಟೆಯ ಸಮೀಪವಿರುವ ವಿವಿಧ ಕೋಲ್ಡ್ ಸ್ಟೋರೇಜ್‍ಗಳಲ್ಲಿ ಗುಜರಾತ್ ಮೆಣಸಿನಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಜೆಡಿಎಸ್ ವಾಗ್ದಾಳಿ
''ನಮ್ಮ ಬ್ಯಾಂಕು, ಬಂದರು, ಏರ್‌ಪೋರ್ಟ್ ಗುಜರಾತ್ ಪಾಲಾಗಿದೆ.ಈಗ ನಂದಿನಿಯ ಆಪೋಶನಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಈ ನಡುವೆ ಗುಜರಾತ್‌ನಿಂದ ಮೆಣಸಿನಕಾಯಿ ಕೂಡಾ ರಾಜ್ಯಕ್ಕೆ ಲಗ್ಗೆ ಇಡಲು ತಯಾರಾಗುತ್ತಿದೆ ಎಂಬ ಸುದ್ದಿಯಿದೆ.ಭಾರತವೆಂದರೆ ಕೇವಲ ಗುಜರಾತ್ & ಉತ್ತರ ಭಾರತ ಮಾತ್ರವಲ್ಲ ಎಂಬ ಪಾಠವನ್ನು ಬಿಜೆಪಿಗೆ ಯಾರಾದರೂ ತಿಳಿಸಬೇಕಿದೆ'' ಎಂದು ಜೆಡಿಎಸ್ ಟ್ವೀಟ್ ಮೂಲಕ ಕಿಡಿಕಾರಿದೆ.
''ನಮ್ಮ ರಾಜ್ಯದ ಜನತೆ ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ ಪಾಲು ಕೊಡಲು ಹಿಂದೇಟು ಹಾಕುವ ಕೇಂದ್ರದ ಬಿಜೆಪಿ ಸರ್ಕಾರ ಗುಜರಾತ್ ಮಾತ್ರವೆ ದೇಶ ಅಂದುಕೊಂಡಂತಿದೆ. ರೈತರಿಗೆ ಸಂಕಷ್ಟ ಬಂದಾಗೆಲ್ಲಾ ಬಿಜೆಪಿಯ ಎಲ್ಲಾ 25 ಸಂಸದರೂ ಬಾಯಿಗೆ ಬೀಗ ಹಾಕಿರುತ್ತಾರೆ. ರಾಜ್ಯದ ಹಿತಾಸಕ್ತಿಯ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ'' ಎಂದು ಟೀಕಿಸಿದೆ.
ಕಾಂಗ್ರೆಸ್ ಪ್ರಶ್ನೆ
''ನಂದಿನಿಯ ಹಾಲಿಗೆ ಅಮೂಲ್ ಎಂಬ ಹುಳಿ ಹಿಂಡಿದ ನಂತರ ಗುಜರಾತಿನ ಮೆಣಸಿನ ರಾಜ್ಯಕ್ಕೆ ಲಗ್ಗೆ ಇಟ್ಟು, ಕರುನಾಡಿನ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಇದೆಲ್ಲದರ ಹಿಂದೆ ಇರುವವರು ಯಾರು? ಮೆಣಸು ಬೆಳೆಯಲ್ಲಿ ಗುಜರಾತಿಗಿಂತ ಕರ್ನಾಟಕವೇ ಮುಂದಿದ್ದರೂ ಅಲ್ಲಿನ ಮೆಣಸನ್ನು ಇಲ್ಲಿಗೆ ತಂದು ರಾಜ್ಯದ ಮಾರುಕಟ್ಟೆಯನ್ನು ಕುಲುಷಿತಗೊಳಿಸುತ್ತಿರುವವರು ಯಾರು?'' ಎಂದು ವಿಪಕ್ಷ ಕಾಂಗ್ರೆಸ್ ಪ್ರಶ್ನೆಮಾಡಿದೆ.
ನಮ್ಮ ಬ್ಯಾಂಕು, ಬಂದರು, ಏರ್‌ಪೋರ್ಟ್ ಗುಜರಾತ್ ಪಾಲಾಗಿದೆ.ಈಗ ನಂದಿನಿಯ ಆಪೋಶನಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಈ ನಡುವೆ ಗುಜರಾತ್‌ನಿಂದ ಮೆಣಸಿನಕಾಯಿ ಕೂಡಾ ರಾಜ್ಯಕ್ಕೆ ಲಗ್ಗೆ ಇಡಲು ತಯಾರಾಗುತ್ತಿದೆ ಎಂಬ ಸುದ್ದಿಯಿದೆ.ಭಾರತವೆಂದರೆ ಕೇವಲ ಗುಜರಾತ್ & ಉತ್ತರ ಭಾರತ ಮಾತ್ರವಲ್ಲ ಎಂಬ ಪಾಠವನ್ನು @BJP4Indiaಗೆ ಯಾರಾದರೂ ತಿಳಿಸಬೇಕಿದೆ.1/2 pic.twitter.com/hSZXjwczzX
— Janata Dal Secular (@JanataDal_S) April 14, 2023
ನಂದಿನಿಯ ಹಾಲಿಗೆ ಅಮೂಲ್ ಎಂಬ ಹುಳಿ ಹಿಂಡಿದ ನಂತರ ಗುಜರಾತಿನ ಮೆಣಸಿನ ರಾಜ್ಯಕ್ಕೆ ಲಗ್ಗೆ ಇಟ್ಟು, ಕರುನಾಡಿನ ರೈತರಿಗೆ ಸಂಕಷ್ಟ ತಂದೊಡ್ಡಿದೆ.
— Karnataka Congress (@INCKarnataka) April 14, 2023
ಇದೆಲ್ಲದರ ಹಿಂದೆ ಇರುವವರು ಯಾರು?
ಮೆಣಸು ಬೆಳೆಯಲ್ಲಿ ಗುಜರಾತಿಗಿಂತ ಕರ್ನಾಟಕವೇ ಮುಂದಿದ್ದರೂ ಅಲ್ಲಿನ ಮೆಣಸನ್ನು ಇಲ್ಲಿಗೆ ತಂದು ರಾಜ್ಯದ ಮಾರುಕಟ್ಟೆಯನ್ನು ಕುಲುಷಿತಗೊಳಿಸುತ್ತಿರುವವರು ಯಾರು? pic.twitter.com/PBosxE0Y0n