ಬಿಹಾರ: ಬ್ಯಾಂಕಿನ ಇಬ್ಬರು ಕಾವಲುಗಾರರನ್ನು ಕೊಂದು 13 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

ಸರನ್,ಎ.14: ಬಿಹಾರದ ಸರನ್ ಜಿಲ್ಲೆಯಲ್ಲಿ ಗುರುವಾರ ಸರಕಾರಿ ಸ್ವಾಮ್ಯದ ಬ್ಯಾಂಕ್ ಶಾಖೆಯ ಇಬ್ಬರು ಭದ್ರತಾ ಕಾವಲುಗಾರರನ್ನು ಗುಂಡಿಕ್ಕಿ ಹತ್ಯೆಗೈದ ಶಸ್ತ್ರಸಜ್ಜಿತ ದುಷ್ಕರ್ಮಿಗಳು 13.28 ಲ.ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗಣೇಶ್ ಶಾ ಮತ್ತು ರಾಮನರೇಶ್ ರಾಯ್ ಮೃತ ವ್ಯಕ್ತಿಗಳಾಗಿದ್ದಾರೆ.
ಅಪರಾಹ್ನ 12:30ರ ಸುಮಾರಿಗೆ ಐವರು ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಶಾಖೆಗೆ ನುಗ್ಗಿದ್ದರು. ಭದ್ರತಾ ಕಾವಲುಗಾರರು ತಡೆದಾಗ ಅವರಿಗೆ ಗುಂಡಿಕ್ಕಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಅವರಿಬ್ಬರೂ ಕೊನೆಯುಸಿರೆಳೆದಿದ್ದಾರೆ ಎಂದು ಬಿಹಾರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪರಾಧಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಪೂಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
बिहार के छपरा में लुटेरों ने दिनदहाड़े बैंक में घुसकर करीब 12 लाख लूट लिये. सुरक्षा में तैनात दो जवानों को गोली मारी, एक की मौत, दूसरे का चल रहा इलाज. CCTV फुटेज में दिखा अपराधियों का बेख़ौफ़ चेहरा. pic.twitter.com/FI7lFtLPj1
— Utkarsh Singh (@UtkarshSingh_) April 13, 2023







