ಎಪ್ರಿಲ್ 14ನ್ನು ಅಂಬೇಡ್ಕರ್ ಸಮಾನತೆ ದಿನವೆಂದು ಘೋಷಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯ ಪ್ರಾಂತ

ಟೊರಂಟೊ, ಎ.14: ಕೆನಡಾದ ಬ್ರಿಟಿಷ್ ಕೊಲಂಬಿಯ ಪ್ರಾಂತದಲ್ಲಿ ಎಪ್ರಿಲ್ 14ನ್ನು ಡಾ. ಬಿ. ಆರ್. ಅಂಬೇಡ್ಕರ್ ಸಮಾನತೆ ದಿನವೆಂದು ಘೋಷಿಸಿದೆ. ಜತೆಗೆ, ಇಲ್ಲಿ ಎಪ್ರಿಲ್ ತಿಂಗಳನ್ನು ದಲಿತ ಇತಿಹಾಸ ತಿಂಗಳು ಎಂದೂ ಆಚರಿಸಲಾಗುತ್ತಿದೆ.
ಈ ದಿನವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಸಮರ್ಪಣೆಯ ಪರಂಪರೆಯನ್ನು ನೆನಪಿಟ್ಟುಕೊಳ್ಳಲು ಮತ್ತು ಗೌರವಿಸಲು ಒಂದು ಅವಕಾಶವಾಗಿದೆ. ಇದು ಬ್ರಿಟಿಷ್ ಕೊಲಂಬಿಯಾ ಮತ್ತು ಪ್ರಪಂಚದಾದ್ಯಂತದ ಜನರಿಗೆ ಪ್ರೇರಣೆಯಾಗಿದೆ ಎಂದು ಪ್ರಾಂತೀಯ ಸರಕಾರ ಹೇಳಿದೆ.
ಒಟ್ಟಾವದಲ್ಲಿನ ಭಾರತೀಯ ಹೈಕಮಿಷನ್ ಕೂಡಾ ಅಂಬೇಡ್ಕರ್ ಜಯಂತಿ ಆಚರಣೆಯ ಪ್ರಯುಕ್ತ ಅವರ ಜೀವನ ಮತ್ತು ಸಾಧನೆಯ ಕುರಿತಾದ `ಮೂಕನಾಯಕ- ಧ್ವನಿಯಿಲ್ಲದವರ ನಾಯಕ' ಎಂಬ ಸಾಕ್ಷ್ಯಚಿತ್ರ ಹಾಗೂ ಚಿತ್ರಪ್ರದರ್ಶನ ಏರ್ಪಡಿಸಿದೆ. ಕಳೆದ ತಿಂಗಳು ಟೊರಂಟೊ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್(ಟಿಡಿಎಸ್ಬಿ) ಜಾತಿ ಆಧಾರಿತ ದಬ್ಬಾಳಿಕೆಯನ್ನು ಗುರುತಿಸುವ ನಿರ್ಣಯವನ್ನು ಅಂಗೀಕರಿಸಿದೆ.
Next Story