ಮೆಹುಲ್ ಚೋಕ್ಸಿಯನ್ನು ಆ್ಯಂಟಿಗುವಾದಿಂದ ತೆರವುಗೊಳಿಸದಂತೆ ಹೈಕೋರ್ಟ್ ಆದೇಶ

ರೊಸೇವು: ಸುಮಾರು 13 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತದ ತನಿಖಾಧಿಕಾರಿಗಳಿಗೆ ಬೇಕಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯವರನ್ನು ಆ್ಯಂಟಿಗುವಾ ಮತ್ತು ಬರ್ಬುಡಾದಿಂದ ತೆರವುಗೊಳಿಸದಂತೆ ಅಲ್ಲಿನ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಸಿವಿಲ್ ದಾವೆ ಹೂಡಿರುವ ಮೆಹುಲ್ ಚೋಕ್ಸಿ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸದೇ ಆಂಟಿಗುವಾ ಟಾರ್ನಿ ಜನರಲ್ ಮತ್ತು ಮುಖ್ಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವಂತಿಲ್ಲ ಎಂಬ ವಾದ ಮಂಡಿಸಿದ್ದರು. ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮತ್ತು ಗೌರವಕ್ಕೆ ಚ್ಯುತಿ ತರುವ ಅಥವಾ ಶಿಕ್ಷೆ ನೀಡುವ ಸಾಧ್ಯತೆ ದೆ ಎಂಬ ಪ್ರತಿಪಾದನೆಗೆ ಸೂಕ್ತ ಸಕಾರಣಗಳಿವೆ ಎಂದು ಚೋಕ್ಸಿ ವಿವರಿಸಿದ್ದರು ಎಂದು Isle ನ್ಯೂಸ್ ವರದಿ ಮಾಡಿದೆ.
ತಮ್ಮ ಪ್ರತಿಪಾದನೆ ಬಗ್ಗೆ ತನಿಖೆಗೆ ಆಗ್ರಹಿಸಿದ ಚೋಕ್ಸಿ, ಆ್ಯಂಟಿಗುವಾ ಮತ್ತು ಬಬುರ್ಡಾದಿಂದ 2021ರ ಮೇ 23ರಿಂದ ಬಲವಂತವಾಗಿ ತೆರವುಗೊಳಿಸುವ ಕಾರಣದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಚೋಕ್ಸಿ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಚೋಕ್ಸಿಯನ್ನು ಆ್ಯಂಟಿಗುವಾ ಹಾಗೂ ಬರ್ಬುಡಾದಿಂದ ತೆರವುಗೊಳಿಸದಂತೆ ಆದೇಶಿಸಿದೆ.





