ಎಲ್ಲಾ ಸಮಯಗಳಲ್ಲೂ ಆಝಾನ್ ಕರೆಗೆ ಧ್ವನಿವರ್ಧಕ ಬಳಸಲು ಅನುಮತಿಸಿದ ಅಮೆರಿಕದ ಮಿನ್ನಿಯಾಪೊಲಿಸ್ ನಗರ

ವಾಷಿಂಗ್ಟನ್: ಮಸೀದಿಗಳಲ್ಲಿ ನೀಡಲಾಗುವ ಪ್ರಾರ್ಥನಾ ಕರೆ–ಆಝಾನ್ ʼ ಅನ್ನು ದಿನದ ಐದು ಬಾರಿಯೂ ವರ್ಷಾದ್ಯಂತ ಧ್ವನಿವರ್ಧಕಗಳ ಮೂಲಕ ಕೇಳಿಸಲು ಮಿನ್ನಿಯಾಪೊಲಿಸ್ ನಗರ ಕೌನ್ಸಿಲ್ ಅನುಮತಿ ನೀಡಿದೆ. ಈ ರೀತಿ ಆಝಾನ್ ಅನ್ನು ಧ್ವನಿವರ್ಧಕಗಳ ಮೂಲಕ ಎಲ್ಲಾ ಹೊತ್ತುಗಳಲ್ಲಿ ಕೇಳಿಸಲು ಅನುಮತಿಸಿದ ಅಮೆರಿಕಾದ ಮೊದಲ ಪ್ರಮುಖ ನಗರ ಮಿನಿಯಾಪೊಲಿಸ್ ಆಗಿದೆ. ನಗರದಲ್ಲಿ ಕಳೆದ ವರ್ಷ ಆಝಾನ್ ಕರೆಯನ್ನು ಬೆಳಿಗ್ಗೆ 7 ರಿಂದ ರಾತ್ರಿ 10 ಗಂಟೆಗೆ ಅನುಮತಿಸಲಾಗಿದ್ದರೂ, ಮುಂಜಾವಿನ ಹೊತ್ತು ಹಾಗೂ ತಡರಾತ್ರಿ ಮಾತ್ರ ಅಲ್ಲಿನ ನಿಯಮಗಳಿಂದಾಗಿ ಅನುಮತಿಯಿರಲಿಲ್ಲ. ನಗರಕ್ಕೆ ಸಂಬಂಧಿಸಿದ ಶಬ್ದ ಕುರಿತಾದ ಅಧ್ಯಾದೇಶವನ್ನು ಮಿನ್ನಿಯಾಪೊಲಿಸ್ ಸಿಟಿ ಕೌನ್ಸಿಲ್ ಗುರುವಾರ ತಿದ್ದಪಡಿ ತರಲು ಸರ್ವಾನುಮತದಿಂದ ಒಪ್ಪಿದೆ. ಮುಂಜಾನೆ ಮತ್ತು ತಡೆ ಸಂಜೆ ಆಜಾನ್ ಕರೆಗೆ ಈ ಅಧ್ಯಾದೇಶ ಕೆಲವೊಂದು ಶಬ್ದ ಮಾಲಿನ್ಯ ಸಂಬಂಧಿ ನಿರ್ಬಂಧಗಳಿಂದಾಗಿ ತಡೆಯೊಡ್ಡಿತ್ತು. ಆದರೆ ಈಗ ಈ ತಿದ್ದುಪಡಿಯನ್ನು ಪವಿತ್ರ ರಮಝಾನ್ ತಿಂಗಳಿನಲ್ಲಿ ಮಾಡಲಾಗಿರುವುದು ಇನ್ನಷ್ಟು ಮಹತ್ವ ಪಡೆದಿದೆ. "ಸಂವಿಧಾನ ರಾತ್ರಿ ಹೊತ್ತು ಮಲಗುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯದ ಆಧಾರದಲ್ಲಿ ಸ್ಥಾಪಿತವಾದ ದೇಶವೊಂದು ತನ್ನ ಮಾತನ್ನು ಉಳಿಸಿಕೊಂಡಿದೆ ಎಂದು ಮಿನ್ನಿಯಾಪೊಲಿಸ್ ನಗರದ ಈ ಕ್ರಮವು ತಿಳಿಸುತ್ತದೆ," ಎಂದು ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ ಇದರ ಮಿನ್ನೆಸೊಟ ಘಟಕದ ಕಾರ್ಯಕಾರಿ ನಿರ್ದೇಶಕ ಜಯ್ಲಾನಿ ಹುಸೇನ್ ಹೇಳಿದ್ದಾರೆ. ಮಿನ್ನಿಯಾಪೊಲಿಸ್ ನಗರ ಕೌನ್ಸಿಲ್‌ನಲ್ಲಿ 13 ಮಂದಿ ಮುಸ್ಲಿಂ ಸದಸ್ಯರಿದ್ದಾರೆ. ಕೌನ್ಸಿಲ್ ಕ್ರಮಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ. ಮೇಯರ್ ಜೇಕಬ್ ಫ್ರೇ ಈ ತಿದ್ದುಪಡಿಗೆ ಮುಂದಿನ ವಾರ ಸಹಿ ಹಾಕುವ ನಿರೀಕ್ಷೆಯಿದೆ.
Next Story





