Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಜಾಸತ್ತೆಯಲ್ಲಿ ‘ಅಕೌಂಟಬಿಲಿಟಿ’ಯ ಅರ್ಥ...

ಪ್ರಜಾಸತ್ತೆಯಲ್ಲಿ ‘ಅಕೌಂಟಬಿಲಿಟಿ’ಯ ಅರ್ಥ ಏನು?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು15 April 2023 12:54 PM IST
share
ಪ್ರಜಾಸತ್ತೆಯಲ್ಲಿ ‘ಅಕೌಂಟಬಿಲಿಟಿ’ಯ ಅರ್ಥ ಏನು?

ಒಬ್ಬ ಜನಪ್ರತಿನಿಧಿ ಜನರಿಂದ ಆಯ್ಕೆ ಆಗಿ, ಐದು ವರ್ಷ ತನ್ನ ಕ್ಷೇತ್ರವನ್ನು ತಾನು ಸದಸ್ಯನಾ/ಳಾಗಿರುವ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರತಿನಿಧಿಸಿದ ಬಳಿಕ, ಆ ಜನಪ್ರತಿನಿಧಿಯ ಐದು ವರ್ಷದ ಸಾಧನೆಗಳ ಮೌಲ್ಯಮಾಪನ ಹೇಗೆ ನಡೆಯಬೇಕು? ಇತ್ತೀಚೆಗಿನ ತನಕವೂ ಅದು ಆ ಜನಪ್ರತಿನಿಧಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿ, ಜನರೇ ಅವರನ್ನು ಪುರಸ್ಕರಿಸುವುದು ಅಥವಾ ತಿರಸ್ಕರಿಸುವುದು ಸಾಮಾನ್ಯ ಸಂಪ್ರದಾಯವಾಗಿತ್ತು.

‘‘ಜನತಾ ನ್ಯಾಯಾಲಯದ ತೀರ್ಪು’’, ಶಿಕ್ಷೆ, ಶಿಕ್ಷೆ ಅನುಭವಿಸಿದ ಬಳಿಕ ಪಶ್ಚಾತ್ತಾಪ ಪಟ್ಟಿರುವ ವ್ಯಕ್ತಿಯ ಮರು ಆಯ್ಕೆ ಅಥವಾ ಪರ್ಯಾಯ ಆಯ್ಕೆ- ಇವೆಲ್ಲ ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯ ಭಾಗವಾಗಿತ್ತು. ಆದರೆ ಈಗ ರಾಜಕೀಯ ಪಕ್ಷಗಳು ‘‘ಚುನಾವಣೆ ಗೆಲ್ಲುವ ಯಂತ್ರ’’ಗಳಾಗಲು ಹೊರಟ ಬಳಿಕ, ವರಸೆಯೇ ಬದಲಾಗಿದೆ. ಅವು ಹೊಸದೊಂದು ಸುಲಭ ಹಾದಿಯನ್ನು ಕಂಡುಕೊಂಡಿವೆ.

ತನ್ನ ಹಾಲಿ ಜನಪ್ರತಿನಿಧಿಗಳನ್ನು ಜನತಾ ನ್ಯಾಯಾಲಯದ ಪರೀಕ್ಷೆಗೆ ಒಡ್ಡದೆ, ತಾವೇ ಮುಂಚಿತವಾಗಿ ಬದಲಾಯಿಸುವ ಮೂಲಕ ಜನರ ನ್ಯಾಯತೀರ್ಮಾನದ ಹಕ್ಕನ್ನು ಕಸಿದುಕೊಂಡಿರುವುದು ಈ ಹೊಸ ಹಾದಿ. ಹಾಲಿ ಆಡಳಿತ ಪಕ್ಷ (ಕೇಂದ್ರ ಮತ್ತು ನಮ್ಮ ರಾಜ್ಯಗಳೆರಡರಲ್ಲೂ) ಈ ಹಿಂದೆ ಕಲವು ವರ್ಷಗಳಿಂದ ಮತ್ತು ತೀರಾ ಇತ್ತೀಚೆಗೆ ಹೇಳಬೇಕೆಂದರೆ, ಗುಜರಾತ್, ಉತ್ತರಪ್ರದೇಶ ಸೇರಿದಂತೆ ಹಲವೆಡೆ ವಿಧಾನಸಭಾ ಚುನಾವಣೆಗಳಲ್ಲಿ, ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಿ ದಡ ಸೇರಲು ಈ ರೀತಿಯ ಪ್ರಯೋಗ ನಡೆಸಿ ಯಶಸ್ವಿ ಆದದ್ದನ್ನು, ಈಗ ಯಶಸ್ಸಿಗೆ ‘‘ಪೂರ್ವೋದಾಹರಣೆ’’ ಎಂದು ಮಾನ್ಯ ಮಾಡಿಕೊಂಡಿದೆ. ಮಾತ್ರವಲ್ಲದೆ, ಯಶಸ್ಸಿನ ‘‘ಚಾಣಕ್ಯ ಮಹಾತಂತ್ರ ಮಾದರಿ’’ ಎಂದು ಮುಂದಿಡುತ್ತಿದೆ, ಈಗ ಕರ್ನಾಟಕದಲ್ಲೂ ವಿಧಾನಸಭಾ ಚನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅದೇ ತಂತ್ರವನ್ನು ಅನುಸರಿಸಲಾಗಿದೆ. ಆಡಳಿತ ಪಕ್ಷ ಪ್ರಕಟಿಸಿರುವ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ 52 ಹೊಸಮುಖಗಳಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಲವು ಸಚಿವರು, ಹಾಲಿ ಶಾಸಕರು ಜನತಾ ನ್ಯಾಯಾಲಯಕ್ಕೆ ತೆರಳುವ ಅವಕಾಶ ವಂಚಿತರಾಗಿದ್ದಾರೆ. ಇದಕ್ಕೆ ಸಮರ್ಥನೆಯಾಗಿ, ‘‘ವ್ಯಕ್ತಿಯಲ್ಲ ಪಕ್ಷ ಮುಖ್ಯ’’ ಎಂಬ ಹೊಸ ವ್ಯಾಖ್ಯಾನವನ್ನು ಮುಂದಿಡಲಾಗುತ್ತಿದೆ. ಸಾಂವಿಧಾನಿಕವಾದ ಜನಪ್ರತಿನಿಧಿಗಳ ಸಭೆಯ (ವಿಧಾನಮಂಡಲ/ಸಂಸತ್ತು) ಮೂಲ ಸ್ವರೂಪ, ಅದರ ಸದಸ್ಯರು ತಮ್ಮ ಕ್ಷೇತ್ರವನ್ನು, ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಆ ಜನಪ್ರತಿನಿಧಿ ಸಭೆಯಲ್ಲಿ ಪ್ರತಿನಿಧಿಸಿ, ಕಾನೂನು-ನೀತಿಗಳ ನಿರೂಪಣೆಯಲ್ಲಿ ಪಾಲ್ಗೊಳ್ಳುವುದೇ ಹೊರತು ರಾಜಕೀಯ ಪಕ್ಷಗಳನ್ನು ಅಲ್ಲಿ ಪ್ರತಿನಿಧಿಸುವುದಲ್ಲ.

ನಿಜಕ್ಕೆಂದರೆ 1985ರಲ್ಲಿ ಬಂದ ಸಂವಿಧಾನದ 52ನೇ ತಿದ್ದುಪಡಿಯ ತನಕವೂ ಸಂವಿಧಾನದಲ್ಲಿ ರಾಜಕೀಯ ಪಕ್ಷಗಳ ಪ್ರಸ್ತಾಪವೇ ಇಲ್ಲ! ಸಂವಿಧಾನವು ಜನಪ್ರತಿನಿಧಿಗಳಿಗೆ ಒಂದು ರಾಜಕೀಯ ಗುಂಪಾಗುವ ಹಕ್ಕನ್ನು ಮಾತ್ರ ಕೊಟ್ಟಿತ್ತು. ಜನಪ್ರಾತಿನಿಧ್ಯ ಕಾಯ್ದೆ 1951, ತನ್ನ ಸೆಕ್ಷನ್ 29ಎ ಅಡಿಯಲ್ಲಿ ರಾಜಕೀಯ ಗುಂಪುಗಳನ್ನು ಪಕ್ಷವಾಗಿ ನೋಂದಾಯಿಸಿಕೊಳ್ಳುವ ಅಧಿಕಾರವನ್ನು ಕೊಟ್ಟಿತ್ತು. 52ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರ್ಪಡೆಗೊಂಡ ಹತ್ತನೇ ಷೆಡ್ಯೂಲ್, ಪಕ್ಷಾಂತರಕ್ಕಾಗಿ ಅನರ್ಹತೆಯ ಪ್ರಶ್ನೆ ಎದುರಾಗುವ ನಿರ್ದಿಷ್ಟ ಸಂದರ್ಭಕ್ಕೆ ಮಾತ್ರ ರಾಜಕೀಯ ಪಕ್ಷಗಳ ಬಗ್ಗೆ ಪ್ರಸ್ತಾಪ ಮಾಡುತ್ತದೆ ಎಂಬುದು ಬಹಳ ಗಮನಾರ್ಹವಾದ ಸಂಗತಿ. ಅದು ಬಿಟ್ಟರೆ, ರಾಜಕೀಯ ಪಕ್ಷಗಳಿಗೆ ಯಾವುದೇ ಸಾಂವಿಧಾನಿಕ ಸ್ಥಾನಮಾನ ಈವತ್ತಿಗೂ ಇಲ್ಲ!! ದೇಶದ ಯಾವನೇ ಪ್ರಜೆಗೆ ಚುನಾವಣೆಗೆ ಸ್ಪರ್ಧಿಸುವ ಮೂಲಭೂತ ಅರ್ಹತೆಗಳಿದ್ದರೆ ಅವರು ಚುನಾವಣೆಗಳಿಗೆ ಸ್ಪರ್ಧೆ ಮಾಡಬಹುದು ಎಂಬುದು ನಿಜವಾದರೂ, ಅಧಿಕಾರದಲ್ಲಿ ಒಂದು ಅವಧಿ ಪೂರೈಸಿದ ಒಬ್ಬ ಜನಪ್ರತಿನಿಧಿ ಜನತಾ ನ್ಯಾಯಾಲಯದಲ್ಲಿ ತನ್ನ ಕರ್ತವ್ಯ ನಿರ್ವಹಣೆಯ ಬಗ್ಗೆ ಜನರ ಅಭಿಪ್ರಾಯ ಪಡೆಯದೆ, ಯಾವುದೋ ರಾಜಕೀಯ ಅಜೆಂಡಾಗಳ ಕಾರಣಕ್ಕಾಗಿ ತನ್ನ ಅಕೌಂಟಬಿಲಿಟಿಯನ್ನು ಬಲಿಕೊಡುವುದು ದೇಶದ ಜನತೆಯ ದೀರ್ಘಕಾಲಿಕ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.

ಪ್ರತೀ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ‘ಹೈಕಮಾಂಡ್’ ಅನ್ನಿಸಿಕೊಂಡವರು ಹೊರಗಿನಿಂದ ಹಸ್ತಕ್ಷೇಪ ಮಾಡಿ, ಯಾವುದೋ ಒಂದು ಹೊಸ ಮುಖ ಆರಿಸಿಕೊಟ್ಟು, ಚುನಾವಣೆಯಲ್ಲಿ ಅಂತಹ ಆಯ್ಕೆಗಳ ನಡುವೆಯೇ ನಿಮಗೆ ಸರಿಕಂಡದ್ದನ್ನು ಆಯ್ಕೆ ಮಾಡಿ ಎಂದು ಕ್ಷೇತ್ರದ ಜನತೆಯ ಮೇಲೆ ತಮ್ಮ ಹಿತಾಸಕ್ತಿಗಳನ್ನು ಹೇರುವ ಈ ಅನೈತಿಕ ಕ್ರಮದ ಬಗ್ಗೆ ಚರ್ಚೆ ಆಗಬೇಕಿದೆ.

ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಇರಬೇಕು ಎಂದಾದರೆ, ಅದು ಇರಬೇಕಾದುದು ಆ ಜನಪ್ರತಿನಿಧಿ ಪ್ರತಿನಿಧಿಸುವ ಕ್ಷೇತ್ರದ ಮತದಾರರ ಬಳಿ. ಹಾಗಾಗಿ, ಒಬ್ಬ ಜನಪ್ರತಿಧಿ ನಾಲಾಯಕ್ ಎಂದಾದರೆ, ಅವರನ್ನು ಅವಧಿಯ ನಡುವೆಯೇ ‘‘ವಾಪಸ್ ಕರೆಸಿಕೊಳ್ಳುವ’’ ಹಕ್ಕಿನ ಬಗ್ಗೆ ಚರ್ಚೆ ಆರಂಭವಾಗಬೇಕು. ಈಗ ಯಾರೋ ಹೊರಗಿನವರು ‘‘ಗೆಲ್ಲುವ ಸೂತ್ರ’’ ಅನ್ವಯಿಸಿ, ಜಾತಿ, ಧರ್ಮ, ಹಣ, ಕ್ರಿಮಿನಲ್ ಹಿನ್ನೆಲೆಗಳಿರುವವರನ್ನೆಲ್ಲ ಮುಂದೊಡ್ಡಿ, ಅವರನ್ನು ಹಣಬಲ, ತೋಳ್ಬಲಗಳಿಂದ ಗೆಲ್ಲಿಸಹೊರಟಿದ್ದರ ಫಲವೇ ಇಂದು ರಾಜಕೀಯ ಕ್ಷೇತ್ರ ಸ್ಕೌಂಡ್ರಲ್‌ಗಳ ಮೊದಲ ಆಯ್ಕೆ ಮತ್ತು ಸಭ್ಯಸ್ಥರ ಕೊನೆಯ ಆಯ್ಕೆ ಆಗಿಬಿಟ್ಟಿರುವುದು.

ಈ ಸಾಂವಿಧಾನಿಕ ತಿರುಚಾಟ ಇಂದು ಒಂದು ರಾಜಕೀಯ ಪಕ್ಷದ ಪ್ರಶ್ನೆ ಅಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಉಚ್ಛ್ರಾಯ ಕಾಲದಲ್ಲಿ ಇಂತಹ ಜನವಿರೋಧಿ ನಡೆಗಳನ್ನು ನಡೆದಿವೆ. ಈ ಬಗ್ಗೆ ಆಕ್ಷೇಪಗಳು ಎದ್ದಾಗಲೆಲ್ಲ ಅವರು ಇವರನ್ನು ತೋರಿಸಿಕೊಂಡು ಇವರು ಅವರನ್ನು ದೂರಿಕೊಂಡು ಮತದಾರರನ್ನು ಏಮಾರಿಸುತ್ತಿದ್ದಾರೆ. ಸಮಾಜ ತನ್ನ ನಾಯಕತ್ವ ಎಂತಹದಿರಬೇಕು ಎಂದು ತೀರ್ಮಾನಕ್ಕೆ ಬರುವುದಕ್ಕೆ ಇದು ಸಕಾಲ. ಕಣ್ಣೆದುರೇ ಸಂವಿಧಾನ ವಿರೋಧಿ ಶಕ್ತಿಗಳು, ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲದವರು ಸೇರಿಕೊಂಡು ಒಟ್ಟು ನಾಗರಿಕ ವ್ಯವಸ್ಥೆಯನ್ನೇ ಹಾಳುಗೆಡಹುತ್ತಿರುವುದನ್ನು ನೋಡಿದ ಬಳಿಕವೂ ನಮಗ್ಯಾಕೆ ರಾಜಕೀಯ, ನಾವೆಲ್ಲ ಸಭ್ಯರು-ಸುಸಂಸ್ಕೃತರು; ರಾಜಕೀಯ ನಮಗೆ ಹೇಳಿಸಿದ್ದಲ್ಲ ಎಂದು ಸುಮ್ಮನುಳಿದರೆ ಇದಕ್ಕಿಂತ ಕೇಡುಗಾಲ ಬರಲಿದೆ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X