ಜೆಡಿಎಸ್ ನ ಭರವಸೆ ಪತ್ರ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಬೆಂಗಳೂರು, ಎ.15: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಜೆಡಿಎಸ್ ಪರಿಹಾರ ಭರವಸೆ ಪತ್ರವನ್ನು ಬಿಡುಗಡೆ ಮಾಡಿದರು.
ಶನಿವಾರ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ, ಪ್ರಣಾಳಿಕೆ ಕರಡು ರಚನಾ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಹಾಗೂ ಸದಸ್ಯ ಕುಪೇಂದ್ರ ರೆಡ್ಡಿ, ಸರವಣ ಹಾಜರಿದ್ದರು.
ಜೆಡಿಎಸ್ನ 12 ಭರವಸೆಗಳಿವು
1. ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ
2. ಕನ್ನಡವೇ ಮೊದಲು
3. ಶಿಕ್ಷಣವೇ ಆಧುನಿಕ ಶಕ್ತಿ
4. ಆರೋಗ್ಯ ಸಂಪತ್ತು
5. ರೈತ ಚೈತನ್ಯ
6. ಹಿರಿಯ ನಾಗರಿಕರಿಗೆ ಸನ್ಮಾನ
7. ಯುವಜನ ಸಬಲೀಕರಣ
8. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
9. ವಿಕಲಚೇತನರಿಗೆ ಆಸರೆ
10. ವೃತ್ತಿನಿರತ ವಕೀಲರ ಅಭ್ಯುದಯ
11. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
12. ಆರಕ್ಷರಿಗೆ ಅಭಯ
Next Story