Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಫೇಲ್ ವಾಚ್ ನ ಖರೀದಿ ರಸೀದಿ ತೋರಿಸಿದ...

ರಫೇಲ್ ವಾಚ್ ನ ಖರೀದಿ ರಸೀದಿ ತೋರಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ವಿವಾದಗಳಿಗೆ ಅಂತ್ಯ ಹಾಡುವ ಬದಲು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಪೂರ್ಣ ರಸೀದಿ

15 April 2023 7:36 PM IST
share
ರಫೇಲ್ ವಾಚ್ ನ ಖರೀದಿ ರಸೀದಿ ತೋರಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ವಿವಾದಗಳಿಗೆ ಅಂತ್ಯ ಹಾಡುವ ಬದಲು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಪೂರ್ಣ ರಸೀದಿ

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಬಳಸುತ್ತಿರುವ ಬೆಲ್ ಆ್ಯಂಡ್ ರಾಸ್ ವಿಶೇಷ ಆವೃತ್ತಿಯ ರಫೇಲ್ ವಾಚ್ ನ ಸುತ್ತ ಊಹಾಪೋಹಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇವುಗಳಿಗೆ ಅಂತ್ಯ ಹಾಡುವ ಪ್ರಯತ್ನವಾಗಿ ಅಣ್ಣಾಮಲೈ ತಾನು ನಿಜಕ್ಕೂ ವಾಚ್ ಅನ್ನು 2021, ಮೇ 27ರಂದು ಕೊಯಿಮತ್ತೂರಿನ ತನ್ನ ಸ್ನೇಹಿತನಿಂದ ಖರೀದಿಸಿದ್ದನ್ನು ಸಾಬೀತುಗೊಳಿಸಲು ಬಿಲ್ ನ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ. ಶುಕ್ರವಾರ ರಾಜ್ಯ ಬಿಜೆಪಿಯು ಆಯೋಜಿಸಿದ್ದ ‘ಡಿಎಂಕೆ ಫೈಲ್ಸ್ ’ನ ಬಿಡುಗಡೆ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಬಿಲ್ ಅನ್ನು ಪ್ರದರ್ಶಿಸಿದರು. ಡಿಎಂಕೆ ಫೈಲ್ಸ್ ಆಡಳಿತ ಪಕ್ಷದ ವಿರುದ್ಧ ಹಲವು ಆರೋಪಗಳನ್ನು ಬೆಟ್ಟುಮಾಡಿದ್ದು, ಅನೇಕ ಬಿಜೆಪಿ ನಾಯಕರ ಆಸ್ತಿಗಳು ಮತ್ತು ಉದ್ಯಮಗಳ ವಿವರಗಳನ್ನು ಒಳಗೊಂಡಿದೆ. ಆದರೆ ಅಣ್ಣಾಮಲೈ ಬಯಸಿದ್ದಂತೆ ವಿವಾದಗಳಿಗೆ ಅಂತ್ಯ ಹಾಡುವ ಬದಲು ಅಪೂರ್ಣ ರಸೀದಿಯು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು thenewsminute.com ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ತಾನು ಚೇರಲತ್ತನ್ ರಾಮಕೃಷ್ಣನ್ ರಿಂದ ವಾಚ್ ಅನ್ನು ಖರೀದಿಸಿದ್ದಾಗಿ ಹೇಳಿದರು. ‘ಡಸಾಲ್ಟ್ ಏವಿಯೇಷನ್ ಬೆಲ್ ಆ್ಯಂಡ್ ರಾಸ್ನ ಸಹಯೋಗದಲ್ಲಿ ರಫೇಲ್ ವಾಚ್ಗಳನ್ನು ತಯಾರಿಸುತ್ತದೆ. ತಯಾರಾಗಿದ್ದ ಒಟ್ಟು 500 ವಾಚ್ಗಳ ಪೈಕಿ ಕೇವಲ ಎರಡು ಭಾರತದಲ್ಲಿ ಮಾರಾಟಗೊಂಡಿದ್ದವು. ಒಂದು ವಾಚ್ ಮುಂಬೈನಲ್ಲಿ ಮಾರಾಟವಾಗಿದ್ದು, ಎಂಎನ್ಸಿಯೊಂದರ ಹಿರಿಯ ಅಧಿಕಾರಿಯೋರ್ವರು ಅದನ್ನು ಖರೀದಿಸಿದ್ದರು. ವಿವಾದಗಳಿಂದಾಗಿ ಭಾರತದಲ್ಲಿ ಬೇರೆ ಯಾರು ಈ ವಾಚ್ ಅನ್ನು ಖರೀದಿಸಿದ್ದಾರೆ ಎನ್ನುವುದನ್ನು ನಾವು ಪತ್ತೆ ಹಚ್ಚಿದ್ದೆವು. ನಾನು ಈ ವಾಚ್ ಅನ್ನು 2021,ಮೇ 27ರಂದು ಖರೀದಿಸಿದ್ದೆ. ಚೇರಲತ್ತನ್ ರಾಮಕೃಷ್ಣನ್ ವಾಚ್ ನ ಮೂಲಮಾಲಿಕರಾಗಿದ್ದು,ಅವರು ಮಾರ್ಚ್ 2021ರಲ್ಲಿ ಕೊಯಮತ್ತೂರಿನ ಜಿಮ್ಸನ್ ಟೈಮ್ಸ್ ಪ್ರೈ.ಲಿ.ನಿಂದ ಇದನ್ನು ಖರೀದಿಸಿದ್ದು,ಬಿಲ್ ಅವರ ಹೆಸರಿನಲ್ಲಿದೆ. ವಾಚ್ ಮಾರಾಟಕ್ಕೆ ಲಭ್ಯವಿದೆ ಎನ್ನುವುದು ಗೊತ್ತಾದಾಗ ನಾನು ಅವರನ್ನು ಸಂಪರ್ಕಿಸಿ ವಾಚ್ ಅನ್ನು ಖರೀದಿಸಿದ್ದೆ’ ಎಂದು ತಿಳಿಸಿದರು.

ರಫೇಲ್ ವಾಚ್ ನ ಖರೀದಿಯ ಡೆಲಿವರಿ ಚಲನ್ ಮತ್ತು ರಸೀದಿಯನ್ನು ಹೊಸದಾಗಿ ಆರಂಭಿಸಲಾಗಿರುವ enmannenmakkal.com  ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.

ವಾಚ್ ನ ಒಟ್ಟು ಮೌಲ್ಯವು 4,50,000 ರೂ.ಗಳಾಗಿವೆ. ಎರಡು ತಿಂಗಳುಗಳ ಬಳಿಕ ಚೇರಲತ್ತನ್ನ ರಾಮಕೃಷ್ಣನ್ ವಾಚ್ ಅನ್ನು ಮೂರು ಲಕ್ಷ ರೂ.ಗೆ ಅಣ್ಣಾಮಲೈಗೆ ಮಾರಾಟ ಮಾಡಿದ್ದಾರೆ. ಡೆಲಿವರಿ ಚಲನ್ನೊಂದಿಗೆ ವಾಚ್ ನ ಮಾರಾಟ ಮೊತ್ತವಾಗಿ ಅಣ್ಣಾಮಲೈ ಅವರಿಂದ ಮೂರು ಲ.ರೂ.ನಗದು ಪಡೆದಿರುವುದಕ್ಕೆ ರಾಮಕೃಷ್ಣನ್ ಅವರು ರೆವಿನ್ಯೂ ಸ್ಟಾಂಪ್ ಮೇಲೆ ಸಹಿ ಮಾಡಿ ನೀಡಿರುವ ರಸೀದಿಯನ್ನೂ ಲಗತ್ತಿಸಲಾಗಿದೆ.

ಅಣ್ಣಾಮಲೈ ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನೂ ಬಿಡುಗಡೆಗೊಳಿಸಿದ್ದಾರೆ. ಆದರೆ ವಾಚ್ ನ ಖರೀದಿಗಾಗಿ ಅಣ್ಣಾಮಲೈ ಹೇಗೆ ಚೇರಲತ್ತನ್ ರಾಮಕೃಷ್ಣನ್ರಿಗೆ ಹಣವನ್ನು ಪಾವತಿಸಿದ್ದರು ಎನ್ನುವುದು ಈಗಲೂ ಸ್ಪಷ್ಟವಾಗಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್ ಮೂರು ಲಕ್ಷ ರೂ.ಗಳನ್ನು ಹಿಂಪಡೆದುಕೊಂಡಿದ್ದನ್ನು ಅಥವಾ ಮೂರು ಲಕ್ಷ ರೂ.ಗಳ ಹಣಪಾವತಿಯನ್ನು ತೋರಿಸಿಲ್ಲ.

ಬಿಲ್ ಅನ್ನು ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಡಿಎಂಕೆ ದಾಖಲೆಗಳಲ್ಲಿನ ವ್ಯತ್ಯಾಸಗಳನ್ನು ಬೆಟ್ಟು ಮಾಡಿದೆ. ಜಿಮ್ಸನ್ ಟೈಮ್ಸ್ ನ ಡೆಲಿವರಿ ಚಲನ್ ಮತ್ತು ಅಣ್ಣಾಮಲೈ ತೋರಿಸಿರುವ ರಸೀದಿಯಲ್ಲಿ ಸೀರಿಯಲ್ ನಂಬರ್ ತಾಳೆಯಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಡಿಎಂಕೆಯ ವಿದ್ಯಾರ್ಥಿ ಘಟಕದ ನಾಯಕ ಹಾಗೂ ವಕ್ತಾರ ರಾಜೀವ್ ಗಾಂಧಿ ಅವರು ಟ್ವಿಟರ್ ನಲ್ಲಿ ಎತ್ತಿ ತೋರಿಸಿದ್ದಾರೆ. ಜಿಮ್ಸನ್ ಟೈಮ್ಸ್ ನ ಡೆಲಿವರಿ ಚಲನ್ ನಲ್ಲಿ ರಫೇಲ್ ವಾಚ್ ನ ಮಾಡೆಲ್ ನಂ. (BRO394-RAFALE-CE) ಮತ್ತು ಸೀರಿಯಲ್ ನಂ. BRO394EBL147ಎಂದು ನಿರ್ದಿಷ್ಟಪಡಿಸಲಾಗಿದೆ. ಅಣ್ಣಾಮಲೈ ತೋರಿಸಿರುವ ರಸೀದಿಯಲ್ಲಿ ರಫೇಲ್ ವಾಚ್ ನ ಮಾಡೆಲ್ ನಂ. BRO394-RAFALE-CE-N ಮತ್ತು ಸೀರಿಯಲ್ ನಂ. BRO394DAR147.1 ಎಂದು ಉಲ್ಲೇಖಿಸಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರು ಫ್ರಾನ್ಸ್ ನ ವಾಚ್ ತಯಾರಿಕೆ ಕಂಪನಿ ಬೆಲ್ ಆ್ಯಂಡ್ ರಾಸ್ನಿಂದ ರಫೇಲ್ ವಾಚ್ ನ ದುಬಾರಿ ಸಂಗ್ರಾಹಕರ ಆವೃತ್ತಿಯ ಬಗ್ಗೆ ಅಣ್ಣಾಮಲೈರನ್ನು ಪ್ರಶ್ನಿಸಿದ ಬಳಿಕ ವಿವಾದ ಸೃಷ್ಟಿಯಾಗಿತ್ತು. ಕೇವಲ ನಾಲ್ಕು ಮೇಕೆಗಳು ತನ್ನ ಆಸ್ತಿ ಎಂದು ಹೇಳಿಕೊಳ್ಳುವ ಅಣ್ಣಾಮಲೈಗೆ ದುಬಾರಿ ವಾಚ್ ಖರೀದಿಸಲು ಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದ ಅವರು,ವಾಚ್ನ ರಸೀದಿಯನ್ನು ತೋರಿಸುವಂತೆ ಒತ್ತಾಯಿಸಿದ್ದರು.

ರಫೇಲ್ ಯುದ್ಧವಿಮಾನಗಳನ್ನು ಉಲ್ಲೇಖಿಸಿದ್ದ ಅಣ್ಣಾಮಲೈ, ತಾನು ದೇಶಕ್ಕಾಗಿ ಮತ್ತು ತಾನು ರಾಷ್ಟ್ರವಾದಿಯಾಗಿರುವುದರಿಂದ ಈ ವಾಚ್ ಅನ್ನು ಧರಿಸಿದ್ದೇನೆ ಎಂದು ಹೇಳಿದ್ದರು. ರಫೇಲ್ ಯುದ್ಧ ವಿಮಾನ ಕೂಡ ಡಸಾಲ್ಟ್ ತಯಾರಿಕೆಯಾಗಿದ್ದು,ಅವುಗಳನ್ನು ಬಿಜೆಪಿ ನೇತೃತ್ವದ ಕೇಂದ್ರವು ಖರೀದಿಸಿದೆ. ‘ನಾನು ಧರಿಸಿರುವ ವಾಚ್ ಅನ್ನು ಭಾರತವು ರಫೇಲ್ ಯುದ್ಧವಿಮಾನಗಳಿಗೆ ಬೇಡಿಕೆ ಸಲ್ಲಿಸಿದಾಗ ತಯಾರಿಸಲಾಗಿತ್ತು. ಅದನ್ನು ವಿಮಾನದ ಬಿಡಿಭಾಗಗಳಿಂದ ನಿರ್ಮಿಸಲಾಗಿದೆ. ರಫೇಲ್ ವಿಮಾನದಲ್ಲಿ ಹಾರಾಡುವ ಅವಕಾಶ ನನಗೆ ಸಿಕ್ಕಿಲ್ಲ,ಹೀಗಾಗಿ ಓರ್ವ ರಾಷ್ಟ್ರವಾದಿಯಾಗಿ ನಾನು ರಫೇಲ್ವಾಚ್ನ್ನು ಧರಿಸಿದ್ದೇನೆ’ಎಂದು ಅಣ್ಣಾಮಲೈ ಸಮಜಾಯಿಷಿ ನೀಡಿದ್ದರು.

share
Next Story
X