ರಾಜ್ಯದಲ್ಲಿ ಬಿಸಿಗಾಳಿ: ಪೌರಕಾರ್ಮಿಕರಿಗೆ ಅರ್ಧದಿನ ರಜೆ ನೀಡಲು ಒತ್ತಾಯ

ಬೆಂಗಳೂರು, ಎ.15: ರಾಜ್ಯದಲ್ಲಿ ಬಿಸಿಗಾಳಿ ವಾತವರಣವಿರುವ ಕಾರಣ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಪ್ರತಿನಿತ್ಯ ಅರ್ಧದಿನ ರಜೆಯನ್ನು ತಕ್ಷಣದಿಂದಲೇ ಘೋಷಿಸಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಒತ್ತಾಯಿಸಿದೆ.
ಶನಿವಾರ ಈ ಕುರಿತು ಸರಕಾರಕ್ಕೆ ಪತ್ರವನ್ನು ಬರೆದಿದ್ದು, ಪೌರಕಾರ್ಮಿಕರಿಗೆ ಹಾಗಾಗ್ಗೆ ಕೆಲಸದಿಂದ ವಿರಾಮವನ್ನು ನೀಡಬೇಕು. ಕುಡಿಯುವ ನೀರನ್ನು ಒದಗಿಸಬೇಕು. ಓಆರ್‍ಎಸ್, ಮಜ್ಜಿಗೆಯನ್ನು ಪ್ರತಿನಿತ್ಯ ನೀಡಬೇಕು. ಹಾಗೆಯೇ ರಾಜ್ಯ ವಿಪತ್ತು ನಿರ್ವಹಣೆ ಸಂಸ್ಥೆಯು ಪ್ರಕಟಿಸಿದ ‘ರಾಜ್ಯ ಬಿಸಿಗಾಳಿ ಕ್ರಿಯಾ ಯೋಜನೆ-2022ಅನ್ನು ಸರಿಯಾಗಿ ಅನುಷ್ಟಾನ ಮಾಡಬೇಕು ಎಂದು ಮನವಿ ಮಾಡಿದೆ.
Next Story





