ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಪಾರ್ಕಿನ್ಸನ್ ದಿನಾಚರಣೆ

ಕೊಣಾಜೆ: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಇಲ್ಲಿ ವಿಶ್ವ ಪಾರ್ಕಿನ್ಸನ್ ದಿನಾಚರಣೆಯ ಅಂಗವಾಗಿ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವ್ಯೆದ್ಯಕೀಯ ಅಧೀಕ್ಷಕರಾದ ಡಾ. ಹಬೀಬ್ ರೆಹಮಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸುಮಾರು ನೂರಕ್ಕೂ ಅಧಿಕ ಹಿರಿಯ ನಾಗರಿಕರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾ ಅಧಿಕಾರಿ ಪಾರ್ಕಿನ್ಸನ್ ಖಾಯಿಲೆಯು ಯಾರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ, ರೋಗ ಲಕ್ಷಣಗಳು, ನಿವಾರಣೆ ಹಾಗೂ ಪರಿಹಾರ ಮಾರ್ಗೋಪಾಯಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಆಸ್ಪತ್ರೆಯ ಮಾರುಕಟ್ಟೆ ವಿಭಾಗವು ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯರಾದ ಡಾ. ಕಿಶೋರ್ ಕುಮಾರ್ ಉಬರಂಗಳ ಮತ್ತು ಡಾ. ಕರಣ್ ಹೆಗಡೆ, ಹಾಗೂ ವಿಭಾಗದ ಕಲಿಕಾ ವಿಧ್ಯಾರ್ಥಿ ವೈದ್ಯರುಗಳು, ಆಸ್ಪತ್ರೆಯ ಆಡಳಿತ ವಿಭಾಗದ ಸಿಬಂದಿಗಳು ಪಾಲ್ಗೊಂಡಿದ್ದರು.
ವಿಶ್ವ ಪಾರ್ಕಿನ್ಸನ್ ದಿನಾಚರಣೆಯ ಅಂಗವಾಗಿ ಹಿರಿಯ ನಾಗರೀಕರಿಗೆ ಪಾರ್ಕಿನ್ಸನ್ ಖಾಯಿಲೆಯ ಬಗ್ಗೆ ವಿಶೇಷ ತಪಾಸಣೆ ಮತ್ತು ಸಲಹೆ ಸೂಚನೆಗಳನ್ನು ನೀಡಲಾಯಿತು.