Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಠ್ಯಕ್ರಮದ ತರ್ಕಬದ್ಧತೆಗಾಗಿ...

ಪಠ್ಯಕ್ರಮದ ತರ್ಕಬದ್ಧತೆಗಾಗಿ ಎನ್‌ಸಿಇಆರ್‌ಟಿ 25 ತಜ್ಞರು,16 ಸಿಬಿಎಸ್ಇ ಶಿಕ್ಷಕರೊಂದಿಗೆ ಸಮಾಲೋಚಿಸಿತ್ತು: ಕೇಂದ್ರ

ಪಠ್ಯದಲ್ಲಿ ಗೋಡ್ಸೆ, ಗುಜರಾತ್ ಗಲಭೆ, ಮೊಘಲ್ ಭಾಗಗಳನ್ನು ಕೈಬಿಟ್ಟ ಪ್ರಕರಣ

15 April 2023 10:17 PM IST
share
ಪಠ್ಯಕ್ರಮದ ತರ್ಕಬದ್ಧತೆಗಾಗಿ ಎನ್‌ಸಿಇಆರ್‌ಟಿ 25 ತಜ್ಞರು,16 ಸಿಬಿಎಸ್ಇ ಶಿಕ್ಷಕರೊಂದಿಗೆ ಸಮಾಲೋಚಿಸಿತ್ತು: ಕೇಂದ್ರ
ಪಠ್ಯದಲ್ಲಿ ಗೋಡ್ಸೆ, ಗುಜರಾತ್ ಗಲಭೆ, ಮೊಘಲ್ ಭಾಗಗಳನ್ನು ಕೈಬಿಟ್ಟ ಪ್ರಕರಣ

ಹೊಸದಿಲ್ಲಿ,ಎ.15: ಕೇಂದ್ರ ಶಿಕ್ಷಣ ಸಚಿವಾಲಯವು ತಿಳಿಸಿರುವಂತೆ  ಎನ್‌ಸಿಇಆರ್‌ಟಿ ತನ್ನ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು 25 ಬಾಹ್ಯ ತಜ್ಞರು ಮತ್ತು 16 ಸಿಬಿಎಸ್ಇ ಶಿಕ್ಷಕರೊಂದಿಗೆ ಸಮಾಲೋಚನೆಗಳನ್ನು ನಡೆಸಿತ್ತು. ಈ ಪ್ರಕ್ರಿಯೆಯ ಭಾಗವಾಗಿ ಶಾಲಾ ಪಠ್ಯಪುಸ್ತಕಗಳಿಂದ ಮುಘಲರು,ಮಹಾತ್ಮಾ ಗಾಂಧಿ, ಅವರ ಹಂತಕ ನಾಥುರಾಮ ಗೋಡ್ಸೆ, ಹಿಂದು ಉಗ್ರವಾದಿಗಳ ಉಲ್ಲೇಖ, 2002ರ ಗುಜರಾತ ಗಲಭೆಗಳು ಮತ್ತು ವೌಲಾನಾ ಆಝಾದ್ ಸೇರಿದಂತೆ ಹಲವಾರು ಭಾಗಗಳನ್ನು ಕೈಬಿಟ್ಟಿರುವುದು ವಿವಾದವನ್ನು ಸೃಷ್ಟಿಸಿದ್ದು,ಇದು ಸೇಡಿನೊಂದಿಗಿನ ‘ವೈಟ್ವಾಷ್ ’ ಎಂದು ಪ್ರತಿಪಕ್ಷಗಳು ದೂಷಿಸಿವೆ.

ತರ್ಕಬದ್ಧತೆಯ ಭಾಗವಾಗಿ ಮಾಡಲಾದ ಬದಲಾವಣೆಗಳನ್ನು ಅಧಿಸೂಚಿಸಲಾಗಿದ್ದರೂ ಅವುಗಳಲ್ಲಿ ಕೆಲವು ವಿವಾದಾತ್ಮಕ ಅಳಿಸುವಿಕೆಗಳನ್ನು ಉಲ್ಲೇಖಿಸಲಾಗಿಲ್ಲ ಎನ್ನುವುದು ವಿವಾದದ ಕೇಂದ್ರಬಿಂದುವಾಗಿದೆ. ಇದು ಈ ಭಾಗಗಳನ್ನು ಗುಟ್ಟಾಗಿ ಕೈಬಿಡಲು ಪ್ರಯತ್ನಗಳ ಕುರಿತು ಆರೋಪಗಳಿಗೆ ಕಾರಣವಾಗಿದೆ.

ಕೆಲವು ಲೋಪಗಳು ಸಂಭಾವ್ಯ ಕಣ್ತಪ್ಪಿನಿಂದ ಸಂಭವಿಸಿವೆ ಎಂದು ಎನ್ಸಿಇಆರ್ಟಿ ಸಮಜಾಯಿಷಿ ನೀಡಿದೆಯಾದರೂ ಅವು ತಜ್ಞರ ಶಿಫಾರಸುಗಳನ್ನು ಆಧರಿಸಿದ್ದವು ಎಂದು ಹೇಳುವ ಮೂಲಕ ಪಠ್ಯಗಳಲ್ಲಿ ಅವುಗಳ ಮರುಸೇರ್ಪಡೆಗೆ ನಿರಾಕರಿಸಿದೆ.

ಹೇಗಿದ್ದರೂ 2024ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಜಾರಿಗೊಳ್ಳುವಾಗ ಪಠ್ಯಪುಸ್ತಕಗಳು ಪರಿಷ್ಕರಣಗೊಳ್ಳಲಿವೆ ಎಂದು ಅದು ಹೇಳಿಕೊಂಡಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಶಿಕ್ಷಣ ಸಚಿವಾಲಯವು,ಎನ್ಸಿಇಆರ್ಟಿಯು ತನ್ನ ಆಂತರಿಕ ತಜ್ಞರಲ್ಲದೆ ಸಂಶೋಧನೆ,ಅಭಿವೃದ್ಧಿ,ತರಬೇತಿ ಮತ್ತು ವಿಸ್ತರಣೆಗೆ ಸಂಬಂಧಿತ ಕ್ಷೇತ್ರಗಳಲ್ಲಿಯ ವಿವಿಗಳು/ಸಂಸ್ಥೆಗಳ ತಜ್ಞರು ಮತ್ತು ಶಿಕ್ಷಕರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿತ್ತು ಎಂದು ತಿಳಿಸಿದೆ.

ತೀವ್ರ ವಿವಾದಕ್ಕೆ ಒಳಗಾಗಿರುವ ಅಳಿಸುವಿಕೆಗಳು ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ್ದು,ಅದಕ್ಕಾಗಿ ಎನ್ಸಿಇಆರ್ಟಿ ಅನುಕ್ರಮವಾಗಿ ಐದು ಮತ್ತು ಇಬ್ಬರು ಬಾಹ್ಯ ತಜ್ಞರೊಂದಿಗೆ ಸಮಾಲೋಚಿಸಿತ್ತು ಎಂದು ಸಚಿವಾಲಯವು ತನ್ನ ಉತ್ತರದಲ್ಲಿ ಹೇಳಿದೆ.

share
Next Story
X