ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನೇ ಕಣಕ್ಕಿಳಿಸಿ: ಕಾಂಗ್ರೆಸ್ ಅಭ್ಯರ್ಥಿಯಿಂದಲೇ ಒತ್ತಾಯ

ಕೋಲಾರ: 'ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಗಬೇಕು' ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇನ್ನೂ ಅವಕಾಶವಿದೆ. ಅವರನ್ನೇ ಕಣಕ್ಕಿಳಿಸುವಂತೆ ನಾನು ಮುಖಂಡರಿಗೆ ಮನವಿ ಮಾಡುತ್ತೇನೆ'' ಎಂದು ಹೇಳಿದರು.
ನಾನು ಕೋಲಾರ ಕ್ಷೇತ್ರ ಬೇಕೆಂದು ಕೇಳಿದವನಲ್ಲ, ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದವನೂ ಅಲ್ಲ. ಪಟ್ಟಿ ಬಿಡುಗಡೆಯಾದ ನಂತರ ನನ್ನ ಗಮನಕ್ಕೆ ಬಂದಿದೆ’ ಎಂದರು.
ಕೋಲಾರ ಕಾಂಗ್ರೆಸ್‌ನಲ್ಲಿ ಕಚೇರಿಯಲ್ಲಿ ಮಾರಾಮಾರಿ
ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡಯಗಂಡೆ ಬೆನ್ನಲ್ಲೇ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯುವ ವೇಳೆ ಕೊತ್ತೂರು ಮಂಜುನಾಥ್ ಅವರ ಪರ-ವಿರೋಧ ಚರ್ಚೆಯಲ್ಲಿ ಮಾರಾಮಾರಿ ನಡೆದಿದ್ದು ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಆನೇಕಲ್ ಮೂಲದ ಎ.ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷದ ಕಚೇರಿ ಪ್ರವೇಶ ಮಾಡಿದ ಕೂಡಲೇ ಇದೇ ರೀತಿಯಲ್ಲಿ ಗಲಾಟೆ ನಡೆದಿತ್ತು.
ಇದೀಗ ಕೊತ್ತೂರು ಮಂಜುನಾಥ್ ಹೆಸರು ಘೋಷಣೆಯಾದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೆ ಎಂ.ಎಲ್.ಸಿ.ಅನಿಲ್ ಕುಮಾರ್ ಅವರೇ ಇದಕ್ಕೆ ಕಾರಣ ಎಂದು ತರಾಟೆಗೆ ತೆಗೆದುಕೊಂಡರು. ವಿಧಾನ ಪರಿಷತ್ ಸದಸ್ಯ ನಝೀರ್ ಅಹ್ಮದ್ ಮದ್ಯ ಪ್ರವೇಶ ಮಾಡಿ ನಾಳೆ ರಾಹುಲ್ ಗಾಂಧಿ ಕೋಲಾರದಲ್ಲಿ ನಡೆಯುವ ಜೈ ಭಾರತ್ ಸಮಾವೇಶ ವೇಳೆ ಒತ್ತಾಯ ಮಾಡುವುದಾಗಿ ಹೇಳಿ ಪರಿಸ್ಥಿತಿ ನಿಭಾಯಿಸಿದ್ದಾರೆ.







