Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅಪರಾಧದ ಬೆನ್ನು ಹತ್ತಿ...

ಅಪರಾಧದ ಬೆನ್ನು ಹತ್ತಿ...

ರಶ್ಮಿ ಎಸ್.ರಶ್ಮಿ ಎಸ್.16 April 2023 6:47 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಪರಾಧದ ಬೆನ್ನು ಹತ್ತಿ...

ಎಲೆಕ್ಷನ್ ಭರಾಟೆ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಶಿವಾಜಿ ಸುರತ್ಕಲ್ ಸಿನೆಮಾ ಸಖತ್ ಸೌಂಡ್ ಮಾಡ ತೊಡಗಿದೆ. ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಎನ್ನಿಸುವಂತಿರುವ ಈ ಚಿತ್ರ ನಿರೀಕ್ಷೆಯಂತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಎರಡು ವರ್ಷಗಳ ಹಿಂದೆ ಬಂದಿದ್ದ ಶಿವಾಜಿ ಸುರತ್ಕಲ್ ಚಿತ್ರ, ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈಗ ಅದರ ಸೀಕ್ವೆನ್ಸ್ ಶಿವಾಜಿ ಸುರತ್ಕಲ್ 2 ಬಂದಿದೆ. ಚಿತ್ರರಸಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ಕೇಸು ಹೊತ್ತು ತಂದಿರುವ ಶೆರ್ಲಾಕ್ ಹೋಮ್ಸ್, ಶಿವಾಜಿ ಸುರತ್ಕಲ್ ಎಲ್ಲರ ತಲೆಗೂ ಅನುಮಾನದ ಹುಳ ಬಿಡುವುದರಲ್ಲಿ ಯಶಸ್ವಿಯಾಗಿದ್ದಾನೆ. ಎಲ್ಲರನ್ನೂ ಕನ್ಫ್ಯೂಸ್ ಮಾಡುತ್ತ ಕೊನೆಗೆ ಕೇಸ್ನಲ್ಲಿ ತನ್ನನ್ನು ತಾನು ಸಿಕ್ಕಿಹಾಕಿಸಿಕೊಂಡು, ಎಲ್ಲರಲ್ಲೂ ಸಸ್ಪೆನ್ಸ್ ಮೂಡಿಸುತ್ತಾನೆ. ಹೇಗೆ ತನ್ನನ್ನು ತಾನು ಈ ಕೇಸ್ನಲ್ಲಿ ಸಿಲುಕುವಂತೆ ಮಾಡುತ್ತಾನೆ, ಆ ವ್ಯೆಹದಿಂದ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ತಿರುಳು.

ಕ್ರೈಂ ಸಸ್ಪೆನ್ಸ್ ಕಥೆಯನ್ನು ರೋಚಕವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ಇಲ್ಲಿ ಚಿತ್ರದ ಬಗ್ಗೆ ತಮಗಿರುವ ಶ್ರದ್ಧೆಯನ್ನು ಸಾಬೀತು ಮಾಡಿದ್ದಾರೆ. ಸಾಕಷ್ಟು ಟ್ವಿಸ್ಟ್ ಳು ಸಿನೆಮಾದ ಕುತೂಹಲವನ್ನು ಹೆಚ್ಚಿಸಿವೆ. ಪೊಲೀಸ್ ಇಲಾಖೆಯ ಶೆರ್ಲಾಕ್ ಹೋಮ್ಸ್ ಶಿವಾಜಿ ಸುರತ್ಕಲ್ ಒಂದು ಕೊಲೆಯನ್ನು ಭೇದಿಸುವುದಕ್ಕೆ ಹೊರಡುತ್ತಾನೆ. ಅಂತಹ ಸಮಯದಲ್ಲಿಯೇ ಅಪ್ಪಮಗಳ ಒಂದು ಸೆಂಟಿಮೆಂಟ್ ಕಥೆ ಕೂಡ ಶುರುವಾಗುತ್ತದೆ. ಜೊತೆಗೆ ಸರಣಿ ಹತ್ಯೆಗಳ ಬೆನ್ನುಬೀಳುವ ಶಿವಾಜಿ ಹೇಗೆ ಆ ಕೊಲೆಯ ರಹಸ್ಯವನ್ನು ಭೇದಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಇನ್ನೇನು ಕೊಲೆಯ ಜಾಡು ಪತ್ತೆಯಾಗುತ್ತದೆ ಅನ್ನುವಾಗಲೇ ಕೊಲೆಗಾರ ತಪ್ಪಿಸಿಕೊಳ್ಳುತ್ತಾನೆ. ಕೊನೆಗೆ ಆ ಕೊಲೆಗಾರ ಹೇಗೆ ಪತ್ತೆಯಾಗುತ್ತಾನೆ ಎನ್ನುವುದರಲ್ಲಿಯೇ ಸಿನೆಮಾದ ಮಜಾ ಇರುವುದು.

ಈ ಕಳ್ಳ ಪೊಲೀಸ್ ಆಟದಲ್ಲಿ ನಿರ್ದೇಶಕರು ನಿಜಕ್ಕೂ ಗೆದ್ದಿದ್ದಾರೆ. ಪ್ರೇಕ್ಷಕರಲ್ಲಿ ಅನುಮಾನ ಹುಟ್ಟಿಸಿ, ಸಿನೆಮಾದ ಬಗ್ಗೆ ಕುತೂಹಲ ಬರುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪ್ರತೀ ಹೆಜ್ಜೆಗೂ, ಪ್ರತೀ ಪಾತ್ರದ ಮೇಲೂ ಅನುಮಾನ ಹುಟ್ಟುವಂತೆ ಮಾಡಿ, ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಲ್ಲಿ ಫ್ಲ್ಯ್ಲಾಶ್ಬ್ಯಾಕ್ ಬಂದು, ಕುತೂಹಲಕ್ಕೆ ಬ್ರೇಕ್ ಬೀಳುತ್ತದಾದರೂ, ಸಿನೆಮಾದ ಕಥೆ ಸರಿಯಾದ ಜಾಡಿನಲ್ಲೇ ಸಾಗುವುದು ಮಾತ್ರ ಖುಷಿ ಕೊಡುವ ವಿಷಯ.

ಕ್ರೈಂ, ಸಸ್ಪೆನ್ಸ್ ಸಿನೆಮಾ ಆದರೂ, ಸಂಬಂಧಗಳ ಬೆಲೆ, ಬಾಂಧವ್ಯ ಮಹತ್ವ ಎಲ್ಲವೂ ಈ ಚಿತ್ರದಲ್ಲಿ ಬಂದುಹೋಗುತ್ತವೆ. ಶಿವಾಜಿ ಸುರತ್ಕಲ್ ಪಾತ್ರದಲ್ಲಿ ರಮೇಶ್ ಅರವಿಂದ್ ಗಮನ ಸೆಳೆಯುತ್ತಾರೆ. ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಪಾತ್ರದಲ್ಲಿ ತಮಿಳು ನಟ ನಾಸಿರ್ ಅಭಿನಯವನ್ನು ಮೆಚ್ಚಲೇಬೇಕು. ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಗಮನ ಸೆಳೆದರೆ, ಬಾಲನಟಿ ಆರಾಧ್ಯ ಅಭಿನಯ ಕೂಡ ಮೆಚ್ಚುವಂತಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ರಶ್ಮಿ ಎಸ್.
ರಶ್ಮಿ ಎಸ್.
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X