ಮಂಗಳೂರು | ವಾರದ ಸಂತೆಗೆ ಮನಪಾ ಅಡ್ಡಿ: ಆರೋಪ

ಮಂಗಳೂರು, ಎ.16: ನಗರದ ಪುರಭವನದ ಬಳಿ ಪ್ರತಿ ರವಿವಾರ ನಡೆಯುವ 'ಸಂಡೆ ಬಝಾರ್' (ವಾರದ ಸಂತೆ)ಗೆ ಮನಪಾ ಅಧಿಕಾರಿಗಳು ಇಂದು ಬೆಳಗ್ಗೆ ಅಡ್ಡಿಪಡಿಸಿರುವ ಆರೋಪ ಕೇಳಿ ಬಂದಿದೆ.
ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಸಣ್ಣಪುಟ್ಟ ವ್ಯಾಪಾರಿಗಳು ಸ್ಥಳೀಯರೊಂದಿಗೆ ಕೂಡಿ ದಿನಸಿ ಸಾಮಗ್ರಿ, ಹಣ್ಣು ಹಂಪಲು, ತರಕಾರಿ, ಆಟಿಕೆ, ಬಟ್ಟೆಬರೆ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ. ಹೊರ ರಾಜ್ಯ, ಹೊರ ಜಿಲ್ಲೆಗಳ ಕಾರ್ಮಿಕರು ಈ ವ್ಯಾಪಾರಿಗಳ ಗ್ರಾಹಕರಾಗಿರುತ್ತಾರೆ. ರವಿವಾರ ಮುಂಜಾನೆಯಿಂದ ಅಪರಾಹ್ನದವರೆಗೆ ಈ ವಾರದ ಸಂತೆ ನಡೆಯುತ್ತದೆ. ಇದೀಗ ಮನಪಾ ಅಧಿಕಾರಿಗಳು ಏಕಾಎಕಿ ಸಿಬ್ಬಂದಿಯ ಜೊತೆಗೂಡಿ ವಾರದ ಸಂತೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಮನಪಾದ ಈ ಕಾರ್ಯಾಚರಣೆಯ ಬಗ್ಗೆ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಮುಖಂಡ ಬಿ.ಕೆ. ಇಮ್ತಿಯಾಝ್ ಖಂಡಿಸಿದ್ದಾರೆ.










