Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪುಲ್ವಾಮಾ ದಾಳಿ ಲೋಪದ ಬಗ್ಗೆ ಎಂದಿಗೂ...

ಪುಲ್ವಾಮಾ ದಾಳಿ ಲೋಪದ ಬಗ್ಗೆ ಎಂದಿಗೂ ದೇಶಕ್ಕೆ ತಿಳಿಯಲ್ಲ, ಪ್ರಧಾನಿ ಈ ಕುರಿತು ಮಾತಾಡಲ್ಲ: ಸತ್ಯಪಾಲ್ ಮಲಿಕ್

'The Wire' ಸಂದರ್ಶನದ ಬಳಿಕ ರವೀಶ್‌ ಕುಮಾರ್‌ಗೆ ಸಂದರ್ಶನ ನೀಡಿದ ಕಾಶ್ಮೀರದ ಮಾಜಿ ರಾಜ್ಯಪಾಲ

16 April 2023 1:57 PM IST
share
ಪುಲ್ವಾಮಾ ದಾಳಿ ಲೋಪದ ಬಗ್ಗೆ ಎಂದಿಗೂ ದೇಶಕ್ಕೆ ತಿಳಿಯಲ್ಲ, ಪ್ರಧಾನಿ ಈ ಕುರಿತು ಮಾತಾಡಲ್ಲ: ಸತ್ಯಪಾಲ್ ಮಲಿಕ್
'The Wire' ಸಂದರ್ಶನದ ಬಳಿಕ ರವೀಶ್‌ ಕುಮಾರ್‌ಗೆ ಸಂದರ್ಶನ ನೀಡಿದ ಕಾಶ್ಮೀರದ ಮಾಜಿ ರಾಜ್ಯಪಾಲ

ಹೊಸದಿಲ್ಲಿ: 'The Wire' ಸುದ್ದಿ ಸಂಸ್ಥೆಯ ಕರಣ್ ಥಾಪರ್ ಅವರಿಗೆ ಸಂದರ್ಶನ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ಪುಲ್ವಾಮಾ ದಾಳಿ ಸಂದರ್ಭದಲ್ಲಿನ ಲೋಪಗಳ ಕುರಿತು ಹಲವಾರು ವಿಷಯಗಳನ್ನು ಬಹಿರಂಗಗೊಳಿಸಿದ್ದರು. ಇದರ ಬೆನ್ನಿಗೇ NDTVಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರಿಗೆ ಸಂದರ್ಶನ ನೀಡಿರುವ ಅವರು, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದು, ನಾನು ಈ ಲೋಪಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದರೂ, ಅವರು ನನಗೆ ಮೌನವಾಗಿರುವಂತೆ ಸೂಚಿಸಿದ್ದರು ಎಂಬ ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಕರಣ್ ಥಾಪರ್ ಅವರೊಂದಿಗಿನ ತಮ್ಮ ಸಂದರ್ಶನವನ್ನು ಸಮರ್ಪಕವಾಗಿ ಪ್ರಸಾರ ಮಾಡುವಲ್ಲಿ ಮಾಧ್ಯಮ ಸಂಸ್ಥೆಗಳು ವಿಫಲವಾಗಿದ್ದು, ಕೆಲವೇ ಮಾಧ್ಯಮ ಸಂಸ್ಥೆಗಳು ಮಾತ್ರ ಅದನ್ನು ಬಿತ್ತರಿಸಿವೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಾತಿಗೆ ಪ್ರತಿಕ್ರಿಯಿಸಿರುವ ರವೀಶ್ ಕುಮಾರ್, ನಾನು ಆ ಸಂದರ್ಶನವನ್ನು ಪ್ರಸಾರ ಮಾಡಿದೆ ಹಾಗೂ ನಾನು ಅದರ ಕುರಿತು ನಿರ್ಲಕ್ಷ್ಯ ತೋರಲಿಲ್ಲ ಎಂಬುದನ್ನು ತೋರಿಸಲು ನಾನು ಸತ್ಯಪಾಲ್ ಮಲಿಕ್ ಅವರನ್ನು ಸಂದರ್ಶಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಗೂ ಮೊದಲು ಸಿಆರ್‌ಪಿಎಫ್ ಯೋಧರ ಸಾಗಣೆಗೆ ಐದು ವಿಮಾನಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಅವನ್ನು ಒದಗಿಸಲಿಲ್ಲ. ಅಲ್ಲದೆ ಅಲ್ಲಿ ಇನ್ನೂ ಹಲವು ಲೋಪಗಳಾಗಿದ್ದು, ಶಿಷ್ಟಾಚಾರದ ಪ್ರಕಾರ, ಯೋಧರ ಕಣ್ಗಾವಲು ವಾಹನವು ಆಕಾಶದಲ್ಲಿ ಹಾರಾಟ ನಡೆಸುವ ಬದಲು ರಸ್ತೆ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆ ಮಾರ್ಗವಾಗಿ ತೆರಳುವ ವಾಹನಗಳನ್ನು ತಪಾಸಣೆ ಮಾಡಲು ಯಾವುದೇ ಗಸ್ತು ವಾಹನಗಳಾಗಲಿ, ತಪಾಸಣಾ ಠಾಣೆಗಳಾಗಲಿ ಇರಲಿಲ್ಲ ಎಂದು ಸತ್ಯಪಾಲ್ ಮಲಿಕ್ ವಿವರಿಸಿದ್ದಾರೆ.

ಯೋಧರ ಕಣ್ಗಾವಲು ವಾಹನವು ಶಿಷ್ಟಾಚಾರದ ಪ್ರಕಾರ ಆಕಾಶ ಮಾರ್ಗವಾಗಿ ತೆರಳುವ ಬದಲು ರಸ್ತೆ ಮಾರ್ಗವಾಗಿ ಏಕೆ ತೆರಳುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಕಣ್ಗಾವಲು ವಾಹನ ತೆರಳುವ ಮುನ್ನ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಜಿಪ್ಸಿ ತಡೆಯಬೇಕಿದ್ದರೂ, ಕಣ್ಗಾವಲು ವಾಹನವನ್ನು ಮೊದಲು ತೆರಳಲು ಬಿಡದೆ,  ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟಿದ್ದೇಕೆ? ಎಂದು ಮಲಿಕ್ ಗಂಭೀರ ಪ್ರಶ್ನೆಯೆತ್ತಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನನಗೆ ಕರೆ ಮಾಡಿ, ಸರ್ಕಾರದ ಲೋಪಗಳ ಕುರಿತು ಏನೂ ಮಾತಾಡಬಾರದೆಂದು ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಕರೆ ಮಾಡಿ ಮೌನವಾಗಿರುವಂತೆ ಸೂಚಿಸಿದರು ಎಂದು ಮಲಿಕ್ ಬಹಿರಂಗಗೊಳಿಸಿದ್ದಾರೆ.

"ದಾಳಿಯ ಒಂದು ಗಂಟೆಯ ನಂತರ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿದರು ಮತ್ತು ನಾನವರಿಗೆ ನಮ್ಮ ಲೋಪಗಳ ಕುರಿತು ತಿಳಿಸಿದೆ. ಅದಕ್ಕವರು ನನಗೆ ಮೌನವಾಗಿರುವಂತೆ ಸೂಚಿಸಿದರು. ಆದರೆ ನಾನು ಆ ಹೊತ್ತಿಗೆ ಒಂದೆರಡು ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದೆ" ಎಂದು ಹೇಳಿದ್ದಾರೆ.

ಒಂದು ವೇಳೆ ದಾಳಿಗೂ ಮುಂಚೆ ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಸ್ಥಳಾಂತರಿಸಿರುವುದಕ್ಕೂ ದಾಳಿಗೂ ಏನಾದರೂ ಸಂಬಂಧವಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಲಿಕ್, ಅದು ಸತ್ಯವಲ್ಲ, ಅಲ್ಲೇನಾದರೂ ಅಂತಹ ಬೆಳವಣಿಗೆಗಳು ಸಂಭವಿಸಿದ್ದರೆ ಅದರ ಬಗ್ಗೆ ನನಗೆ ತಿಳಿದಿರುತ್ತಿತ್ತು ಎಂದು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದಂತೆ ಗುಪ್ತಚರ ವೈಫಲ್ಯ ಸಂಭವಿಸಿರಬಹುದೇ ಎಂಬ ರವೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿರುವ ಮಲಿಕ್, ನಾನದನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಿಲ್ಲ ಮತ್ತು ನಾನು ಆ ರಾಜ್ಯದ ರಾಜ್ಯಪಾಲನಾಗಿದ್ದುದರಿಂದ ನಾನೂ ಕೂಡಾ ದೂಷಣೆಗೆ ಯೋಗ್ಯ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

"ಅದು ಗುಪ್ತಚರ ವೈಫಲ್ಯವಾಗಿರಲಿಕ್ಕೂ ಸಾಕು. ಸ್ಫೋಟಕಗಳು ತುಂಬಿದ್ದ ವಾಹನವು ರಾಜ್ಯದಲ್ಲಿ ಹತ್ತು ದಿನಗಳಿಂದ ಓಡಾಡುತ್ತಿದ್ದರೂ ಅದನ್ನು ಯಾರೂ ತಡೆದಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಒಂದು ತಿಂಗಳು ಮುಂಚಿತವಾಗಿಯೇ ಸಂಭವನೀಯ ದಾಳಿಯ ಬಗ್ಗೆ ಗುಪ್ತಚರ ವಿಭಾಗದ ಎಚ್ಚರಿಕೆ ಇದ್ದರೂ, ಕೂಡು ಮಾರ್ಗಗಳಲ್ಲೇಕೆ ತಪಾಸಣಾ ಸಿಬ್ಬಂದಿಗಳನ್ನು ನೇಮಿಸಲಿಲ್ಲ" ಎಂದು ಪ್ರಶ್ನಿಸಿರುವ ಮಲಿಕ್, "ದಾಳಿ ನಡೆಯುವವರೆಗೂ ನನಗೆ ಸಿಆರ್‌ಪಿಎಫ್ ಯೋಧರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ದಾಳಿ ನಡೆದ ನಂತರವಷ್ಟೇ ಈ ಬಗ್ಗೆ ತಿಳಿದು ಬಂತು" ಎಂದಿದ್ದಾರೆ.

ದಾಳಿಗಾಗಿ ಪಾಕಿಸ್ತಾನವನ್ಮೂ ದೂಷಿಸಿದ ಮಲಿಕ್, ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಪಾಕಿಸ್ತಾನ ಮಾತ್ರ ವ್ಯವಸ್ಥೆ ಮಾಡಲು ಸಾಧ್ಯ ಮತ್ತು ಅದನ್ನು ಸ್ಥಳೀಯವಾಗಿ ಖರೀದಿಸಲು ಸಾಧ್ಯವಿಲ್ಲ. ಒಂದು ವೇಳೆ ನಾನೇನಾದರೂ ಕೇಂದ್ರ ಸರ್ಕಾರ ವಿರೋಧಿ ಕ್ರಮವನ್ನು ಕೈಗೊಂಡಿದ್ದರೆ ನನಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿತ್ತು. ಹೀಗಾಗಿಯೇ ಅಂದು ನನಗೆ ಮೌನವಾಗಿರಲು ಸೂಚಿಸಲಾಯಿತು ಎಂದೂ ಹೇಳಿದ್ದಾರೆ.

ನನ್ನ ಸಂಕಟವೇನೆಂದರೆ, ನಾವು ನಮ್ಮ ಲೋಪಗಳನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ದೇಶ ಎಂದಿಗೂ ಸತ್ಯ ತಿಳಿಯುವುದಿಲ್ಲ ಯಾಕೆಂದರೆ ಪ್ರಧಾನಿ ಆ ಕುರಿತು ಎಂದಿಗೂ ಮಾತನಾಡುವುದಿಲ್ಲ" ಎಂದು ತಮ್ಮ ಮಾತು ಮುಗಿಸಿದ್ದಾರೆ.

ಫೆಬ್ರವರಿ 14, 2019ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದ್ದ ದಾಳಿಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಕಣ್ಗಾವಲು ವಾಹನದ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ದಾಳಿ ನಡೆಸಿದ್ದರಿಂದ ಒಟ್ಟು 40 ಮಂದಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದರು.

share
Next Story
X