ಒಳ ಮೀಸಲಾತಿ ನೀತಿಗೆ ವಿರೋಧ: ವಿಜಯೇಂದ್ರಗೆ ಪ್ರತಿಭಟನೆಯ ಬಿಸಿ; ‘ಬಿಜೆಪಿ ಹಠಾವೊ, ತಾಂಡಾ ಬಚಾವೊ’ ಘೋಷಣೆ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರಿಗೆ ಬಂಜಾರ ಸಮುದಾಯದವರ ಪ್ರತಿಭಟನೆಯ ಬಿಸಿ ತಟ್ಟಿದೆ.
ಗ್ರಾಮದಲ್ಲಿ ಪ್ರಚಾರ ಮಾಡಲು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ವಿಜಯೇಂದ್ರ ಮುಂದೆಯೇ ಧಿಕ್ಕಾರ ಕೂಗಿದರು. ಒಳ ಮೀಸಲಾತಿ ನೀತಿ ವಿರೋಧಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಶಿಫಾರಸು ಮಾಡಿರುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ ಗ್ರಾಮಸ್ಥರು, ‘ಬಿಜೆಪಿ ಹಠಾವೊ, ತಾಂಡಾ ಬಚಾವೊ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಪ್ರತಿರೋಧ ವ್ಯಕ್ತಪಡಿಸಿದರು. ಸಮಾಧಾನಪಡಿಸಲು ಮುಂದಾದ ತಾಲೂಕು ಬಂಜಾರ ಸಮಾಜದ ಮುಖಂಡರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಇದರಿಂದ ಮುಜುಗರಕ್ಕೊಳಗಾದ ವಿಜಯೇಂದ್ರ ಅವರು ಕಾರು ಹತ್ತಿ ಮರಳಿದರು ಎಂದು ತಿಳಿದು ಬಂದಿದೆ.
Next Story







