ಪ್ರೊ. ಎಸ್. ಮಂಜುನಾಥ ಕಲ್ಕೂರ ನಿಧನ

ಮಂಗಳೂರು: ನಿವೃತ್ತ ಕಾಲೇಜು ಉಪನ್ಯಾಸಕ ಪ್ರೊ. ಎಸ್. ಮಂಜುನಾಥ ಕಲ್ಕೂರ (94) ವಯೋಸಹಜ ಅನಾರೋಗ್ಯದಿಂದ ರವಿವಾರ ಸಂಜೆ ಉಡುಪಿಯ ಸಗ್ರಿ ಚಕ್ರತೀರ್ಥದ ಬಳಿ ಇರುವ ತಮ್ಮ ನಿವಾಸದಲ್ಲಿ ನಿಧನರಾದರು.
ಮೂಡುಬಿದರೆ ಮಹಾವೀರ ಕಾಲೇಜು ಉಡುಪಿಯ ಎಂ ಜಿ ಎಂ ಕಾಲೇಜುಗಳಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ರಾಷ್ಟ್ರೀಯ ವಿಚಾರಧಾರೆಗಳಲ್ಲಿ ಪ್ರಖರ ನಿಷ್ಠೆಯನ್ನು ಹೊಂದಿದ್ದ ಕಲ್ಕೂರರು ಉಡುಪಿಯ ಅಷ್ಟಮಠಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಮೃತರು ಪತ್ನಿ, ಎಸ್ ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಮೂವರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.
ಸಂತಾಪ: ಮಂಜುನಾಥ ಕಲ್ಕೂರರ ನಿಧನಕ್ಕೆ ಪರ್ಯಾಯ ಶ್ರೀ ಕೃಷ್ಣಾಪುರ ಪಲಿಮಾರು ಪುತ್ತಿಗೆ ಪೇಜಾವರ ಕಾಣಿಯೂರು ಸೋದೆ ಅದಮಾರು ಶೀರೂರು ಶ್ರೀ, ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ.
Next Story