ಕೇಜ್ರಿವಾಲ್ ‘ಶ್ರೀಕೃಷ್ಣ’, ಬಿಜೆಪಿ ‘ಕಂಸ’: ರಾಘವ್ ಚಡ್ಡಾ

ಹೊಸದಿಲ್ಲಿ, ಎ. 16: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ‘ಶ್ರೀಕೃಷ್ಣ ’ ಹಾಗೂ ಬಿಜೆಪಿ ಕಂಸ ಎಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ರವಿವಾರ ಹೇಳಿದ್ದಾರೆ.
‘‘ಶ್ರೀಕೃಷ್ಣ ತನ್ನನ್ನು ನಾಶಮಾಡುತ್ತಾನೆ ಎಂದು ಕಂಸನಿಗೆ ತಿಳಿದಿತ್ತು. ಆದುದರಿಂದ ಕೃಷ್ಣನನ್ನು ಕೊಲ್ಲಲು ಕಂಸ ಹಲವು ಸಂಚುಗಳನ್ನು ನಡೆಸಿದ್ದ. ಆದರೆ, ಶ್ರೀಕೃಷ್ಣನ ತಲೆಯ ಒಂದು ಕೂದಲನ್ನೂ ಕೊಂಕಿಸಲು ಕೂಡ ಆತನಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ ಇಂದು ತನ್ನ ಅವನತಿಗೆ ಎಎಪಿ ಕಾರಣವಾಗುತ್ತದೆ ಎಂದು ಬಿಜೆಪಿಗೆ ಗೊತ್ತಿದೆ’’ ಎಂದು ಚಡ್ಡಾ ಹೇಳಿದ್ದಾರೆ.
ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಹೊಸದಿಲ್ಲಿಯಲ್ಲಿರುವ ಸಿಬಿಐ ಕಚೇರಿಗೆ ಕೇಜ್ರಿವಾಲ್ ಅವರು ರವಿವಾರ ಆಗಮಿಸಿದ ನಡುವೆ ಚಡ್ಡಾ ಅವರು ಈ ಹೇಳಿಕೆ ನೀಡಿದ್ದಾರೆ.
Next Story





