ದ.ಕ.ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ‘ಸಂತ್ರಸ್ತರ ದಿನ’ ಕಾರ್ಯಕ್ರಮ

ಮಂಗಳೂರು: ದ.ಕ.ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ರವಿವಾರ ‘ಸಂತ್ರಸ್ತರ ದಿನ (Victims Day) ಪ್ರಯುಕ್ತ ಸಂತ್ರಸ್ತರ ಸಭೆಯನ್ನು ನಡೆಸಲಾಯಿತು.
ಆಯಾ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂತ್ರಸ್ತರನ್ನು ಠಾಣೆಗೆ ಕರೆಸಿ ಅವರ ಪ್ರಕರಣದ ಪ್ರಸ್ತುತ ಹಂತದ ಮಾಹಿತಿ ನೀಡಲಾಯಿತು. ಪ್ರಕರಣಗಳ ತನಿಖೆಗೆ/ವಿಚಾರಣೆಗೆ ಪೂರಕವಾದ ಮಾಹಿತಿಗಳನ್ನು ಪಡೆಯಲಾಯಿತು. ಪ್ರಕರಣದ ಆರೋಪಿಗಳಿಂದ ಯಾವುದೇ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಿದ್ದಲ್ಲಿ ಮಾಹಿತಿ ಪಡೆದು ಸೂಕ್ತ ಕಾನೂನುಕ್ರಮ ಕೈಗೊಂಡು ಸಂತ್ರಸ್ತರಲ್ಲಿ ಭದ್ರತೆಯ ಭಾವನೆ ಮೂಡಿಸಲಾಯಿತು.
ಸಂತ್ರಸ್ತರಿಗೆ ಕಾನೂನಿನ ಪ್ರಕಾರ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಎಸ್ಪಿ ಡಾ. ವಿಕ್ರಮ್ ಆಮಟೆ ತಿಳಿಸಿದ್ದಾರೆ.
Next Story