ಬೈಕಂಪಾಡಿಯಲ್ಲಿ ಅಗ್ನಿ ಅನಾಹುತ: ಯಂತ್ರೋಪಕರಣಕ್ಕೆ ಹಾನಿ

ಮಂಗಳೂರು, ಎ.16: ನಗರ ಹೊರವಲಯದ ಬೈಕಂಪಾಡಿಯಲ್ಲಿರುವ ಮಧುಬನ್ ಗ್ರಾಫಿಕ್ಸ್ ಸಂಸ್ಥೆಯಲ್ಲಿ ರವಿವಾರ ರಾತ್ರಿ ಅಗ್ನಿ ಅನಾಹುತ ಸಂಭವಿಸಿ ಯಂತ್ರೋಪಕರಣ ಹಾಗೂ ಪ್ರಿಂಟಿಂಗ್ ಪೇಪರ್ ಸುಟ್ಟು ಕರಕಲಾಗಿರುವುದಾಗಿ ವರದಿಯಾಗಿದೆ.
ವಿದ್ಯುತ್ ಮೀಟರ್ ಬೋರ್ಡ್ ನಿಂದ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ಶಾಮಕದಳ ಸಿಬ್ಬಂದಿ ತಕ್ಷಣ ಧಾವಿಸಿ ಬೆಂಕಿ ನಂದಿಸಿದೆ. ಮಾಹಿತಿ ತಿಳಿದೊಡನೆ ಮೆಸ್ಕಾಂನವರು ಬೈಕಂಪಾಡಿಗೆ ವಿದ್ಯುತ್ ಸ್ಥಗಿತಗೊಳಿಸಿದರು. ಬಳಿಕ ನಮ್ಮ ಸಂಸ್ಥೆಯ ಸಂಪರ್ಕ ಕಡಿತಗೊಳಿಸಿ ಉಳಿದ ಕಡೆ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಅಗ್ನಿ ಅನಾಹುತದಿಂದ ಬಹಳಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
Next Story